ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ [SYS] ಕೊಡಂಗಾಯಿ ಬ್ರಾಂಚ್ ಸಮಿತಿಯ ವಾರ್ಷಿಕ ಮಹಾಸಭೆ ಕೊಡಂಗಾಯಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.SYS ವಿಟ್ಲ ಸೆಂಟರ್ ಅಧ್ಯಕ್ಷರಾದ ಕೆ.ಎಂ.ಹಮೀದ್ ಸಖಾಫಿ ದುಃ ಆ ನಡೆಸಿದರು.ಬ್ರಾಂಚ್ ಸಮಿತಿಯ ಅಧ್ಯಕ್ಷರಾದ ಬಿ.ಅಬ್ದುಲ್ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. SSF ನಾಯಕ MKM ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು.ಪ್ರ.ಕಾರ್ಯದರ್ಶಿ ಅಶ್ರಫ್ ಸಅದಿ ಸ್ವಾಗತಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು.ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು : ಪಿ.ಹುಸೈನ್ ಜಾರ
ಪ್ರ.ಕಾರ್ಯದರ್ಶಿ : ಕೆ.ಹೆಚ್.ಇಬ್ರಾಹಿಂ ಮುಸ್ಲಿಯಾರ್.
ಖಜಾಂಚಿ : ಬಿ.ಅಬ್ದುಲ್ ಖಾದರ್.
ಉಪಾಧ್ಯಕ್ಷರು :
ಸಿ.ಹೆಚ್.ಮುಹಮ್ಮದ್
ಸಿ.ಹೆಚ್.ಉಮರ್ ಚನಿಲ.
ಜೊ.ಕಾರ್ಯದರ್ಶಿ :
ಅಶ್ರಫ್ ಸಅದಿ ಕರ್ಕಳ.
ಸಿ.ಹೆಚ್.ಅಬ್ದುಲ್ ಖಾದರ್.
ಹಾಗೂ ಇನ್ನುಳಿದಂತೆ 21 ಸದಸ್ಯರ ಕಾರ್ಯಾಕಾರಿ ಸಮಿತಿಯನ್ನು ರಚಿಸಲಾಯಿತು.
ಸೆಂಟರ್ ಸಮಿತಿ ವೀಕ್ಷಕರಾಗಿ ಬಂದ ಅಬ್ದುಲ್ ಖಾದರ್ ಸಖಾಫಿ ಕಡಂಬು ಸಭೆಯನ್ನು ನಿಯಂತ್ರಿಸಿ ಸಂಘಟನಾ ತರಗತಿ ನಡೆಸಿದರು. SMA ವಿಟ್ಲ ರೀಜ್ಯನಲ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಸೆರ್ಕಳ ಉಪಸ್ಥಿತರಿದ್ದರು.
ಕೊನೆಯಲ್ಲಿ ನೂತನ ಪ್ರ.ಕಾರ್ಯದರ್ಶಿ ಕೆ.ಹೆಚ್.ಇಬ್ರಾಹಿಂ ಧನ್ಯವಾದವಿತ್ತರು.
Comments
Post a Comment