ರಾಜಕೀಯ ಕ್ಷೇತ್ರ ಇಸ್ಲಾಮಿಗೆ ಅನ್ಯವಲ್ಲ. ನಿಭಂದನೆಗಳಾಧರಿತ ತನ್ನದೇ ಆದ ರೂಪ ಹಾಗೂ ಶೈಲಿಯಲ್ಲಿರುವ ರಾಜಕೀಯ ವಿಧಾನ ಇಸ್ಲಾಮಿನಲ್ಲೂ ಇದೆ. ಆದರೆ ಪ್ರಸಕ್ತ ಭಾರತದಲ್ಲಿರುವ ರಾಜಕೀಯ ಕ್ಷೇತ್ರ ಜಗತ್ತಿನಲ್ಲಿ ಏನೆಲ್ಲಾ ಕೊಳೆ ಹಾಗೂ ಕೊಳಕುಗಳಿವೆಯೋ ಅದನ್ನೆಲ್ಲಾ ಮೆತ್ತಿಕೊಂಡ ಅತ್ಯಂತ ಭೃಷ್ಟ ಕ್ಷೇತ್ರವಾಗಿದೆ. ಭೃಷ್ಟಾಚಾರ ,ಹಗರಣಗಳಿಂದ ಮುಕ್ತವಾದ ರಾಜಕೀಯವನ್ನು ಕನಸಿನಲ್ಲಿಯೂ ಕೂಡಾ ಸಂಕಲ್ಪಿಸಲೂ ಅಸಾಧ್ಯ.ಅಷ್ಟರಮಟ್ಟಿಗೆ ಈ ಕ್ಷೇತ್ರ ಅಧಪತನ ಹೊಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ಮುಂದಕ್ಕೆ ಇದು ಮರುಕಳಿಸದಿರಲಿ
ರಾಜಕೀಯ ಕ್ಷೇತ್ರ ಇಸ್ಲಾಮಿಗೆ ಅನ್ಯವಲ್ಲ. ನಿಭಂದನೆಗಳಾಧರಿತ ತನ್ನದೇ ಆದ ರೂಪ ಹಾಗೂ ಶೈಲಿಯಲ್ಲಿರುವ ರಾಜಕೀಯ ವಿಧಾನ ಇಸ್ಲಾಮಿನಲ್ಲೂ ಇದೆ. ಆದರೆ ಪ್ರಸಕ್ತ ಭಾರತದಲ್ಲಿರುವ ರಾಜಕೀಯ ಕ್ಷೇತ್ರ ಜಗತ್ತಿನಲ್ಲಿ ಏನೆಲ್ಲಾ ಕೊಳೆ ಹಾಗೂ ಕೊಳಕುಗಳಿವೆಯೋ ಅದನ್ನೆಲ್ಲಾ ಮೆತ್ತಿಕೊಂಡ ಅತ್ಯಂತ ಭೃಷ್ಟ ಕ್ಷೇತ್ರವಾಗಿದೆ. ಭೃಷ್ಟಾಚಾರ ,ಹಗರಣಗಳಿಂದ ಮುಕ್ತವಾದ ರಾಜಕೀಯವನ್ನು ಕನಸಿನಲ್ಲಿಯೂ ಕೂಡಾ ಸಂಕಲ್ಪಿಸಲೂ ಅಸಾಧ್ಯ.ಅಷ್ಟರಮಟ್ಟಿಗೆ ಈ ಕ್ಷೇತ್ರ ಅಧಪತನ ಹೊಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ಧರ್ಮಗುರುಗಳಿಗೆ ಸಮಾಜದಲ್ಲಿ ಉನ್ನತವಾದ ಘನತೆ ಹಾಗೂ ಗೌರವವಿದೆ. ಧರ್ಮಗುರು ಎಂಬುದು ಪವಿತ್ರವಾದ ಹುದ್ದೆ. ದರ್ಮಗುರುಗಳು ಧರಿಸುವ ಶುಭ್ರ ಶ್ವೇತವರ್ಣದ ವಸ್ತ್ರವು ಈ ಪವಿತ್ರತೆಯ ಸಂಕೇತವೆಂದೇ ಹೇಳಬಹುದು. ಇಂತಹಾ ಪವಿತ್ರ ಹಾಗೂ ಶುಭ್ರ ಹುದ್ದೆಗೆ ರಾಜಕೀಯದ ಕೊಳೆಯನ್ನು ಲೇಪಿಸುವುದು ಸಮರ್ಥನೀಯವಲ್ಲ. ಧರ್ಮಗುರುಗಳು ರಾಜಕೀಯ ಪುಡಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದವರಲ್ಲ. ತಮ್ಮ ಘಣತೆ ಹಾಗೂ ಗೌರವದ ಬಗ್ಗೆ ತಾವೇ ಮೊದಲು ಅರಿತುಕೊಳ್ಳಬೇಕು. ಅದನ್ನು ತಾವೇ ನಗಣ್ಯವಾಗಿ ಕಂಡರೆ ಮತ್ತೆ ಇತರರು ಅದಕ್ಕೆ ಎಷ್ಟು ಬೆಲೆ ಕಟ್ಟುವರು ಎಂಬುದನ್ನು ಆಲೋಚಿಸಬೇಕು. ರಾಜಕೀಯ ಪುಡಾರಿಗಳ ಅಡಿಯಾಳುಗಳಾಗಿ ಸಣ್ಣತನವನ್ನು ಪ್ರದರ್ಶಿಸಿ ಇಲ್ಲಿ ಅನಾಹುತಗಳು ಸಂಭವಿಸಿದರೆ ಅದಕ್ಕೆ ತಾವೇ ಹೊಣೆ ಎಂಬುದನ್ನು ಮರೆಯಬಾರದು. ಆದ್ದರಿಂದ ಯಾವುದೇ ರಾಜಕೀಯ ಪಕ್ಷವಿರಲಿ,ಅವರು ನಡೆಸುವ ರಾಜಕೀಯ ಡೊಂಬರಾಟಕ್ಕೆ ಉಸ್ತಾದರುಗಳು ಇನ್ನಾದರೂ ತೆರಳದೆ ಜಾಗ್ರತೆ ಪಾಲಿಸಬೇಕು.
ಇಂದು ಮುಸ್ಲಿಂ ಧರ್ಮಗುರುಗಳ ಸಮಾವೇಶ ನಡೆಸಿದ ಬಿಜೆಪಿಯವರೊಂದಿಗೆ ಸಣ್ಣ ವಿನಂತಿಯೇನೆಂದರೆ ಇಂದು ಭಾರತದ ಅತೀ ದೊಡ್ಡ ಸಮಸ್ಯೆ ಕೋಮು ಸಂಘರ್ಷಗಳು. ಜಾತಿಧರ್ಮದ ಹೆಸರಲ್ಲಿ ಕಚ್ಚಾಡಿಕೊಂಡು ಹಲವರು ಸಾಯುತ್ತಿದ್ದಾರೆ. ನಮ್ಮ ದ.ಕ.ಜಿಲ್ಲೆಯಲ್ಲಂತೂ ಇದರ ಸಮಸ್ಯೆ ಇತರೆಡೆಗಿಂತ ಸ್ವಲ್ಪ ಜಾಸ್ತಿಯೇ ಇದೆಯೆಂದು ನಿಮಗೂ ಗೊತ್ತು. ನೀವು ಮುತುವರ್ಜಿ ವಹಿಸಿ ಮುಂದಡಿ ಇಟ್ಟರೆ ಈ ಸಮಸ್ಯೆ ಪರಿಹಾರವಾಗುವುದಂತೂ ನೂರಕ್ಕೆ ನೂರು ಖಂಡಿತ. ಅದಕ್ಕಾಗಿ ನೀವು ಈ ರೀತಿಯ ರಾಜಕೀಯ ಡ್ರಾಮಕ್ಕೆ ಬದಲಾಗಿ ಹಿಂದು ಮತ್ತು ಮುಸ್ಲಿಮರ ಧರ್ಮಗುರುಗಳನ್ನು ಒಂದೇ ವೇದಿಕೆಗೆ ಕರೆಸಿ *ಶಾಂತಿಸಮಾವೇಶ* ನಡೆಸಿ. ಅದರಲ್ಲಿ ಉಭಯ ಧರ್ಮದ ನಾಯಕರು ಶಾಂತಿ,ಸಮಾಧಾನ,ಒಗ್ಗಟ್ಟು ಹಾಗೂ ಪ್ರೀತಿಯ ಸಂದೇಶ ಹಾಗೂ ಕರೆಗಳನ್ನು ನೀಡಲಿ.ನೀವು ಅದಕ್ಕೆ ವೇದಿಕೆ ಸಿದ್ಧಪಡಿಸಿ . ಅಂತಹಾ ಕಾರ್ಯಕ್ರಮವನ್ನು ನೀವು ಮಾಡುವುದಾದರೆ ನಾವದನ್ನು ಸ್ವಾಗತಿಸುತ್ತೇವೆ, ಮೆಚ್ಚುತ್ತೇವೆ. ಇದರಿಂದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಧರ್ಮಗುರುಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ ಅವರ ಶುಭ್ರತೆಗೆ ಕೊಳಕನ್ನು ಲೇಪಿಸಲು ಮಾತ್ರ ಪ್ರಯತ್ನಿಸಬೇಡಿ. ಅವರ ವಸ್ತ್ರ ಸಮಾಜಕ್ಕೆ ಪರಿಮಳ ಬೀಸಬೇಕಾದ ವಸ್ತ್ರ . ಅದನ್ನು ರಾಜಕೀಯದ ದುರ್ನಾತ ಬೀರುವಂತಹಾ ವಸ್ತ್ರವನ್ನಾಗಿ ಪರಿವರ್ತಿಸಬೇಡಿ.
ಕಾಂಗ್ರೆಸ್ ,ಜೆಡಿಎಸ್ ಮುಂತಾದ ಇತರ ಪಕ್ಷಗಳೊಂದಿಗೆ ಹೇಳಲಿಕ್ಕಿರುವುದು ಇಂದು ಬಿಜೆಪಿ ನಡೆಸಿತು ಎಂಬ ಕಾರಣದಿಂದ ನಾಳೆ ನೀವೂ ನಡೆಸಲು ಪ್ರಯತ್ನಿಸಬೇಡಿ.ಇದು ಇಂದಿಗೇ ಕೊನೆಗೊಳ್ಳಬೇಕು, ಇಂತಹಾ ದುಸ್ಸಾಹಸಕ್ಕೆ ಬಿಜೆಪಿ ಸಹಿತ ಯಾವುದೇ ಪಕ್ಷದವರು ಮುಂದಕ್ಕೆ ಕೈಹಾಕಬಾರದು. ಇನ್ನು ಒಮ್ಮೆಯೂ ಇದು ಮರುಕಳಿಸಬಾರದು. ಉಲಮಾಗಳನ್ನು ನಿಮ್ಮ ರಾಜಕೀಯ ಚದುರಂಗಾಟಕ್ಕೆ ಬಳಸಬೇಡಿ. ಅವರಿಗೆ ಅವರದೇ ಆದ ಕರ್ತವ್ಯ, ಹೊಣೆಗಾರಿಕೆಗಳು ಇದೆ. ಅವರು ಅದನ್ನು ನಿರ್ವಹಿಸುವುದರಲ್ಲಿ ತಲ್ಲೀಣರಾಗಲಿ. ಅದಕ್ಕಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ
✍
*ತೋಕೆ ಕಾಮಿಲ್*
Comments
Post a Comment