Skip to main content

Posts

Showing posts from June, 2020

ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ.

ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ. ವ್ಯಾಪಕವಾಗಿ ಹರಡುತ್ತಿರುವ ಕೋರೋಣ ದಿಂದ ಮುಕ್ತಿ ಹೊಂದಲು ಎಲ್ಲರೂ ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಉಳ್ಳಾಲ ಸಹಿತ ದ:ಕ ಜಿಲ್ಲೆಯ ಹಲವು ಜಮಾಅತ್ಗಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ ನೀಡಿದ್ದಾರೆ. ಎಲ್ಲರೂ ಅವರವರ ಮನೆಯಲ್ಲಿ ಯಾಸೀನ್ ಓದಿ ದುಆ ಮಾಡಿ.  ಅಲ್ಲಾಹು ಮದನಿ ತಂಙಳ್ ರವರ ಬರಕತ್ ನಿಂದ ಈ ಮಾರಕವಾದ ರೋಗದಿಂದ ಎಲ್ಲರನ್ನೂ ಸಂರಕ್ಷಿಸಲಿ. ಆಮೀನ್ ಯಾ ಅಲ್ಲಾಹ್ *SMO, SYS, SSF, SMSCC ಉಳ್ಳಾಲ*

ಮದ್ರಸ ಕಿತಾಬುಗಳು ವಿತರಣಾ ಕಾರ್ಯಕ್ರಮ

ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಳೆಕೋಟೆಯ ತಾಜುಲ್ ಉಲಮಾ ಮದ್ರಸದಲ್ಲಿ ಕಿತಾಬುಗಳು ಮತ್ತು ವರ್ಕ್ ಪುಸ್ತಕಗಳನ್ನು ಟ್ರಸ್ಟ್ ಅಧ್ಯಕ್ಷರಾದ ಯು ಎ ಹುಸೈನ್ ರವರ ಅಧ್ಯಕ್ಷತೆಯಲ್ಲಿ ದಾನಿಗಳ ಸಹಾಯದೊಂದಿಗೆ ಉಚಿತವಾಗಿ ವಿತರಿಸಲಾಯಿತು. ಹನೀಫ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನವಾಝ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಾಝ್ ಸಖಾಫಿ ಮತ್ತು ಮುಕ್ಕಚ್ಚೇರಿ ಇಸ್ಮಾಯಿಲ್ ಕೆಸಿಎಫ್ ರವರ ಮುಖಾಂತರ ಮೆಲ್ಕಾರ್, ಕನ್ಯಾನ ಹಾಗು ಉಳ್ಳಾಲದ ದಾನಿಗಳ ಸಹಾಯದಿಂದ ಮದ್ರಸ ಕಿತಾಬುಗಳು ಮತ್ತು ವರ್ಕ್ ಪುಸ್ತಕಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ನಿಸಾರ್ ಸಖಾಫಿ ಉಳ್ಳಾಲ, ಟ್ರಸ್ಟ್ ಉಪಾಧ್ಯಕ್ಷರಾದ ಅಬ್ದುಲ್ ಸತ್ತಾರ್, ಸಂಚಾಲಕರಾದ ರಫೀಕ್ ಮಿಲ್ಲತ್ ನಗರ, ಕೋಶಾಧಿಕಾರಿ ರಹ್ಮತುಲ್ಲಾಹ್, ಮದ್ರಸ ವಿದ್ಯಾರ್ಥಿಗಳು ಹಾಗು ರಕ್ಷಕರು ಉಪಸ್ಥಿತರಿದ್ದರು. ಮದ್ರಸ ಮುಖ್ಯೋಪಾಧ್ಯಾಯರಾದ ಸೈಫುಲ್ಲಾಹ್ ಸಖಾಫಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಮ್ರಾನ್ ಧನ್ಯವಾದಗೈದರು.