Skip to main content

Posts

Showing posts from January, 2023

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ದ ಜನ ಜಾಗೃತಿ ಸಭೆ ಹಾಗೂ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿ

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ದ ಜನ ಜಾಗೃತಿ ಸಭೆ ಹಾಗೂ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿ ಉಳ್ಳಾಲದಲ್ಲಿ ನಡೆಯಿತು. ಹಝ್ರತ್ ಸಯ್ಯಿದ್ ಮದನಿ ದರ್ಗಾ ಝಿಯಾರತಿನೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ರೇಂಜ್ ಮಿಷನರಿ ವಿಭಾಗದ ಚೇರ್ಮಾನ್ ವಿ.ಎ ಸಖಾಫಿ ವಳವೂರು ದುಆ ನೆರವೇರಿಸಿದರು. ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿರುವ ಲಹರಿ ಪದಾರ್ಥಗಳ ವಿರುದ್ಧ "ಲಹರಿಯ ಆವೇಶ ಸಮಾಜದ ವಿನಾಶ" ಎಂಬ ಘೋಷಣೆಯೊಂದಿಗೆ ಉಳ್ಳಾಲ ದರ್ಗಾ ವಠಾರದಿಂದ ಪ್ರಾರಂಭಗೊಂಡ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿಯು ಮೇಲಂಗಡಿ, ಮಾಸ್ತಿಕಟ್ಟೆ ಜಂಕ್ಷನ್ ಮೂಲಕ ಸಾಗಿ  ಉಳ್ಳಾಲ ಪೇಟೆಯಲ್ಲಿ ಕೊನೆಗೊಂಡಿತು. ಈ ರ್ಯಾಲಿಯಲ್ಲಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಅಧೀನದ ಮದ್ರಸ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಪಾಲ್ಗೊಂಡಿದ್ದರು. ಬಳಿಕ ಉಳ್ಳಾಲ ಪೇಟೆ ಪುರಸಭಾ ಮೈದಾನದಲ್ಲಿ ನಡೆದ ಜನ ಜಾಗ್ರತಿ ಸಭೆಯಲ್ಲಿ ಮಾತನಾಡಿದ ಉಳ್ಳಾಲ ಎಸ್ ಐ ಪ್ರದೀಪ್ ಇತ್ತೀಚಿನ ದಿನಗಳಲ್ಲಿ ಅಪರಾಧ ಕ್ರತ್ಯಗಳು ಹೆಚ್ಚುತ್ತಿದ್ದು, ಮಾದಕ ದ್ರವ್ಯಗಳ ಬಳಕೆಯೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ. ಮಾದಕ ವಸ್ತುಗಳ ಬಳಕೆಯ ವಿರುದ್ಧ ಧರ್ಮ ಗುರುಗಳ ನೇತ್ರತ್ವದಲ್ಲಿ ವಿದ್ಯಾರ್ಥಿಗಳ ಮೂಲಕ ಉಳ್ಳಾಲ ರೇ...