Skip to main content

Posts

Showing posts from February, 2022

ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಮತ್ತು ಡಾ. ಚುಳ್ಳಿಕೋಡ್ ಉಸ್ತಾದ್ ಇಂದು (26-02-2022) ಉಳ್ಳಾಲ ಉರೂಸಿನಲ್ಲಿ

ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಮತ್ತು ಡಾ. ಚುಳ್ಳಿಕೋಡ್ ಉಸ್ತಾದ್ ಇಂದು (26-02-2022) ಉಳ್ಳಾಲ ಉರೂಸಿನಲ್ಲಿ. ಮಲಪ್ಪುರಂ ಮಅದಿನ್ ಸಂಸ್ಥೆಯ ಸಾರಥಿ, ಆಧ್ಯಾತ್ಮಿಕ ನಾಯಕ, ಸುನ್ನೀ ಮಕ್ಕಳ ಆವೇಶ ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ಇಂದು ಉಳ್ಳಾಲದಲ್ಲಿ ಮಗ್ರಿಬ್ ಬಳಿಕ ಪ್ರಭಾಷಣ ಮಾಡಲಿರುವರು.   ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಇದರ ವೈಸ್ ಚಾನ್ಸಲರ್ ಡಾ. ಚುಳ್ಳಿಕೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿರುವರು. ಜನ ನಿಬಿಡವಾಗಲಿದೆ ಇಂದಿನ ಮತ ಪ್ರವಚನ ಕಾರ್ಯಕ್ರಮ. 

ಇತಿಹಾಸ ಪ್ರಸಿದ್ಧ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಹೊಂದಿದ ಸಯ್ಯಿದ್ ಮದನಿ ಉಳ್ಳಾಲ ಮಖಾಂ ಉರೂಸಿಗೆ ಅಧಿಕ್ರತ ಚಾಲನೆ.

ಉಳ್ಳಾಲದ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಇತಿಹಾಸ ಪ್ರಸಿದ್ಧ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಹೊಂದಿದ ಸಯ್ಯಿದ್ ಮದನಿ ಉಳ್ಳಾಲ ಮಖಾಂ ಉರೂಸಿಗೆ ಇಂದು ಸಂಜೆ ದರ್ಗಾ ಝಿಯಾರತಿನೊಂದಿಗೆ ಅಧಿಕ್ರತ ಚಾಲನೆ ನೀಡಿದರು. ಬಳಿಕ ನಡೆದ ಸ್ವಲಾತ್ ಮಜ್ಲಿಸಿಗೆ ನೇತ್ರತ್ವ ವಹಿಸಿ ದುಆ ನೀಡಿದರು. ಇಂದಿನಿಂದ ಮಾರ್ಚ್ 06 ರ ವರೆಗೆ ಸಯ್ಯಿದ್ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಉಳ್ಳಾಲ ಉರೂಸ್ ಕಾರ್ಯಕ್ರಮ ನಡೆಯಲಿದೆ.  ಪ್ರಸ್ತುತ ಕಾರ್ಯಕ್ರಮದಲ್ಲಿ ತಾಜುಲ್ ಉಲಮಾರ ಹಿರಿಯ ಸುಪುತ್ರ ಸಯ್ಯಿದ್ ಇಂಬಿಚ್ಚಿ ಕೋಯ ತಂಗಲ್, ಉಸ್ಮಾನ್ ಫೈಝಿ ತೋಡಾರು, ಎಂ ಸಿ ಮೋಙಂ ಫೈಝಿ, ದರ್ಗಾದ ಅಧ್ಯಕ್ಷ ರಶೀದ್ ಹಾಜಿ, ವ್ಯಾಲೆಂಟಿಯರ್ ಮುಖ್ಯಸ್ಥ ಮುಸ್ತಫ ಅಬ್ದುಲ್ಲಾ ಸಹಿತ ಹಲವು ಉಲಮಾ, ಸಾದಾತುಗಳು, ದರ್ಗಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಫೆ.10ರಿಂದ ಮಾರ್ಚ್‌ 6ರವರೆಗೆ ಉಳ್ಳಾಲ ಉರೂಸ್‌. ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸೈಯದ್ ಕೂರತ್ ತಂಙಲ್ ನೇತೃತ್ವ

ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್, ಸೈಯದುಲ್ ಉಲಮಾ ಜಿಫ್ರಿ ತಂಙಲ್ ಮೊದಲಾದ ಉಲಮಾ ಶ್ರೇಷ್ಠರ ದಿವ್ಯ ಸಾನಿಧ್ಯ