Skip to main content

Posts

Showing posts from December, 2018

ಎಸ್ ವೈ ಎಸ್ ಮಲಾರ್ ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ

ಎಸ್ ವೈ ಎಸ್ ಮಲಾರ್ ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಮಲಾರ್ ಬದ್ರಿಯಾ ನಗರದಲ್ಲಿ ಇತ್ತೀಚೆಗೆ ನಡೆಯಿತು. ಅಬ್ದುಲ್ ಅಝೀಝ್ ಮದನಿ ಮಲಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುರ್ರಶೀದ್ ಸಅದಿ ಮುಖ್ಯ ಪ್ರಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಹಿಮಮಿ, ಹೈದರ್ ಹಿಮಮಿ, ಅಬ್ದುಲ್ ಹಕೀಂ ಸಖಾಫಿ, ಎಸ್ ವೈ ಎಸ್ ಮಲಾರ್ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಗು ಕೋಶಾಧಿಕಾರಿ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಮುಕ್ಕಚ್ಚೇರಿ ಮದ್ರಸಾದಲ್ಲಿ‌ ಮದನಿ ಮೌಲಿದ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ

ಮುಕ್ಕಚ್ಚೇರಿ ಮದ್ರಸಾದಲ್ಲಿ‌ ಮದನಿ ಮೌಲಿದ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ ಉಳ್ಳಾಲ : ಇಲ್ಲಿನ ಅಲ್ ಮದ್ರಸತುಲ್ ಮುಬಾರಕ್ ಮುಕ್ಕಚ್ಚೇರಿ ವತಿಯಿಂದ ಮಾಸಂಪ್ರತಿ ನಡೆಸುವ ಮದನಿ ಮೌಲಿದ್ ಮತ್ತು  ಮಹಾನ್ ವಿದ್ವತ್ಪ್ರತಿಭೆ,ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ರವರ ಅನುಸ್ಮರಣಾ ಕಾರ್ಯಕ್ರಮ ನಡೆಯಿತು.ಮದ್ರಸದ ಮುಖ್ಯೋಪಾಧ್ಯಾಯ ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ‌ ಅನುಸ್ಮರಣಾ ಭಾಷಣ ಮಾಡಿದರು. ಕಳೆದ  ವರ್ಷ ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾದ ಐದು,ಏಳು ಮತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವನ್ನು ನೀಡಲಾಯಿತು. ಅಧ್ಯಾಪಕರಾದ ಅಬ್ಬಾಸ್ ಮದನಿ ಅಳೇಕಲ ದುಆ ನೆರವೇರಿಸಿದರು. ಮುಕ್ಕಚ್ಚೇರಿ ಜುಮಾ ಮಸೀದಿ ಉಪಾಧ್ಯಕ್ಷ     ಯು.ಡಿ.ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಕೋಯಾ ಹಾಜಿ.ಪ್ರಧಾನ  ಕಾರ್ಯದರ್ಶಿ ಹೈದರ್  ಮುಕ್ಕಚ್ಚೇರಿ,ಅಧ್ಯಾಪಕರಾದ ಅಬ್ದುಲ್ ಅಝೀಝ್ ಮದನಿ ಮಲಾರ್, ಹಂಝ ಮದನಿ ಹಳೆಕೋಟೆ,ಕರೀಮ್ ಮುಸ್ಲಿಯಾರ್ ಮುಕ್ಕಚ್ಚೇರಿ ಮುಂತಾದವರು ಉಪಸ್ಥಿತರಿದ್ದರು.