Skip to main content

Posts

Showing posts from April, 2022

ಮಂಗಳವಾರ ಈದುಲ್ ಫಿತ್ರ್.ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಳ್ ಘೋಷಣೆ

ಇಂದು ( ಆದಿತ್ಯವಾರ ಅಸ್ತ ಸೋಮವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ 02 - 05 - 2022 ಸೋಮವಾರ ರಂಝಾನ್ ಉಪವಾಸ 30 ಪೂರ್ತಿಗೊಳಿಸಿ 03-05-2022 ಮಂಗಳವಾರ ಈದುಲ್ ಫಿತ್ರ್ ಹಬ್ಬ ಆಚರಿಸಬೇಕು ಎಂದು ಉಳ್ಳಾಲ ಸಹಿತ ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of D.K Distrct Samyukha jama'ath Qurrathussadath Seyyid Fazal Koyamma Thangal Al Bukhari has announced that 03-05-2022 is first of Shawwal and Eid ul Fithr will be celebrated on Tuesday (03-05-2022)

SBS ಮದನಿ ನಗರ.ಕುತ್ತಾರು 28

ಅಲ್ ಮದ್ರಸತುಲ್ ಸಯ್ಯಿದ್ ಮದನಿ 3ನೆ ಅಡ್ಡ ರಸ್ತೆ ಮದನಿ ನಗರ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಬಾಲ ಸಂಘ ಎಂಬ ಮದ್ರಸಾ ಮಕ್ಕಳ ಸಂಘಟನೆ ಆಗಿದೆ SBS. ಕಳೆದ ಐದಾರು ವರ್ಷಗಳಿಂದ ಅದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಲ್ಲಾ ತಿಂಗಳಲ್ಲಿ ಸ್ಪರ್ದೆ ನಡೆಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದವರಿಗೆ SBS ಗ್ರಾಂಡ್ ಫೈನಲ್ (SBS ವಾರ್ಷಿಕ) ಕಾರ್ಯಕ್ರಮ ನಡೆಯುತ್ತದೆ. 2022 ನೆ ಸಾಲಿನ ಗ್ರಾಂಡ್ ಫೈನಲ್ ಕಾರ್ಯಕ್ರಮವು ಮಾರ್ಚ್ 28 ರಂದು ಅತ್ಯಂತ  ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಕ್ ಹಸನ್ ರಾಝೀ ವಹಿಸಿದ್ದರು. ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಅಬ್ದುಲ್ ಫಸ್ರೀನ್ ಸ್ವಾಗತಿಸಿದರು.  ಗ್ರಾಂಡ್ ಫೈನಲ್ ಪ್ರಯುಕ್ತ ಸಾಹಿಲ್ ಮುಸ್ಲಿಯಾರ್ ಮದನಿ ನಗರ ಹಾಗೂ ಸಂಗಡಿಗರಿಂದ ಬ್ರಹತ್ ಬುರ್ಧಾ ಮಜ್ಲಿಸ್ ನಡೆಯಿತು. 2022 ನೆ ಸಾಲಿನಲ್ಲಿ 3 ಮಂದಿಯನ್ನು ಸ್ಟಾರ್ ಗಳಾಗಿ ಗುರುತಿಸಲಾಯಿತು  ಪ್ರಥಮ ಸ್ಟಾರ್ ಆಯಿಶಾ ಮಾಳುಫಾ/ಶರೀಫ್ ದ್ವಿತೀಯ ಸ್ಟಾರ್ ಮರಿಯಂ ಝುಲ್ಫಾ / ಶಮೀರ್ ತೃತೀಯ ಸ್ಟಾರ್ ಮರ್ಯಮ್ ಸುರೂರಾ/ಹನೀಫ್ ಮುಸ್ಲಿಯಾರ್ ಈ ಮೂರು ಮಂದಿ ಸ್ಟಾರ್ ಗಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು. 2022 ನೆ ಸಾಲಿನ ವ್ಯಕ್ತಿ ಕಲಾ ಪ್ರತಿಭೆಗಳಾಗಿ ಸೀನಿಯರ್ ವಿಭಾಗದಲ್ಲಿ ಇನಾಝ್ ಬಾನು/ಇಸ್ಮಾಯಿಲ್ ಜೂನಿಯರ್ ವಿಭಾಗದಲ್ಲಿ ಆಫ್ರಾ/ಮುಹುಯುದ್ದಿನ್ ಕುಕ್ಕುದಕಟ...

ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ

ನಾಳೆ ಆದಿತ್ಯವಾರ ಉಪವಾಸ ಆರಂಭ ಇಂದು ( ಶನಿವಾರ ಅಸ್ತ ಆದಿತ್ಯವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 03 - 04 - 2022 ಆದಿತ್ಯವಾರದಿಂದ ( ನಾಳೆಯಿಂದ ) ರಮಳಾನ್ ಉಪವಾಸ ಪ್ರಾರಂಭವಾಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 03-04-2022 is first of Ramadan