Skip to main content

Posts

Showing posts from February, 2020

ಪ್ರಾಯೋಗಿಕ ಮಯ್ಯಿತ್ ಪರಿಪಾಲನಾ ತರಬೇತಿ ಹಾಗು ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಸನ್ಮಾನ ಸಮಾರಂಭ

ಎಸ್ ವೈ ಎಸ್ ಹರೇಕಳ ಸೆಂಟರ್ ವತಿಯಿಂದ ಪ್ರಾಯೋಗಿಕ ಮಯ್ಯಿತ್ ಪರಿಪಾಲನಾ ತರಬೇತಿ ಹಾಗು ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಸನ್ಮಾನ ಸಮಾರಂಭ ಎಸ್ ವೈ ಎಸ್ ಹರೇಕಳ ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿಯವರ ಅಧ್ಯಕ್ಷತೆಯಲ್ಲಿ ಆರ್ ಜೆ ಎಂ ವಠಾರ ಫರೀದ್ ನಗರದಲ್ಲಿ ನಡೆಯಿತು.  ಅಲ್ತಾಫ್ ಮದನಿ ಉಸ್ತಾದ್ ಅಸೈಗೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದೀಕ್ ಮದನಿ ಮೆದು LCD ಮೂಲಕ ಪ್ರಾಯೋಗಿಕ ಮಯ್ಯಿತ್ ಪರಿಪಾಲನಾ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪಡೆದ ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಎಸ್ ವೈ ಎಸ್ ಹರೇಕಳ ಸೆಂಟರ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಆರ್ ಜೆ ಎಂ ಫರೀದ್ ನಗರದ ಅಧ್ಯಕ್ಷರಾದ ಬದ್ರುದ್ದೀನ್, ಎಸ್ ಎಂ ಎ ಕೋಣಾಜೆ ರೀಜನಲ್ ಅಧ್ಯಕ್ಷರಾದ ರಝ್ಝಾಕ್ ಹಾಜಿ ಮಲಾರ್, ಕೆ ಎಂ ಜೆ ಸಿ ದೇರಳಕಟ್ಟೆ ವಲಯ ಅಧ್ಯಕ್ಷರಾದ ಖಾಲಿದ್ ಹಾಜಿ ನ್ಯೂಪಡ್ಪು ಹಾಗು ಸೆಂಟರ್ ವ್ಯಾಪ್ತಿಯ ಬ್ರಾಂಚ್ ಸದಸ್ಯರು, ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಸದಸ್ಯರು, ಊರವರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಸ್ವಾಗತಿಸಿ, ಸೆಂಟರ್ ಇಸಾಬಾ ಕಾರ್ಯದರ್ಶಿ ಅಬ್ದುಲ್ ಕಾದರ್ ಬೈತಾರ್ ಧನ್ಯವಾದಗೈದರು                  

ದೆಹಲಿ ಜನಾಂಗೀಯ ಹತ್ಯೆ: ಖುರ್ರತುಸ್ಸಾದಾತ್ ಕೂರತ್ ತಂಙಳ್ ಖಂಡನೆ

ದೆಹಲಿ ಜನಾಂಗೀಯ ಹತ್ಯೆ: ಖುರ್ರತುಸ್ಸಾದಾತ್ ಕೂರತ್ ತಂಙಳ್ ಖಂಡನೆ ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಐದಾರು ದಿನಗಳಿಂದ ಅಮಾಯಕರ ದೌರ್ಜನ್ಯ, ಕೊಲೆ,ನಡೆಸುತ್ತಾ ಮಸೀದಿ, ಮನೆ,ವ್ಯಾಪಾರ ಕೇಂದ್ರಗಳನ್ನು ಬೆಂಕಿಗಾಹುತಿ ಗೊಳಿಸಿ ದೆಹಲಿಯನ್ನು ಯುದ್ಧ ಭೂಮಿಯನ್ನಾಗಿ ಪರಿವರ್ತಿಸುತ್ತಿರುವ ಸಮಾಜ ಘಾತುಕ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಕ್ರಮ ಕೈಗೊಳ್ಳ ಬೇಕೆಂದು ಗೌರವಾನ್ವಿತ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ಆಗ್ರಹಿಸಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕಬೇಕಾದವರ ನಿಷ್ಕ್ರಿಯತೆ, ಸಾರ್ವಜನಿಕ ಸೇವೆಯಲ್ಲಿ ಗುರುತಿಸಬೇಕಾದವರು ಹಿಂಸೆಗೆ ಆಹ್ವಾನ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಅವರು ಅಭಿಪ್ರಾಯಪಟ್ಟರು. ಹಿಂಸೆಯನ್ನು ಹತ್ತಿಕ್ಕಲು ಮತ್ತು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕೆಂದು, ಅವರು ಪತ್ರಿಕಾಪ್ರಕಟಣೆಯಲ್ಲಿ ಆಗ್ರಹಿಸಿದರು.

ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್ ಇಂದು ಸಂಜೆ 4-30 ಗಂಟೆಗೆ ಉಳ್ಳಾಲಕ್ಕೆ.

ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್ ಇಂದು ಸಂಜೆ 4-30 ಗಂಟೆಗೆ ಉಳ್ಳಾಲಕ್ಕೆ. ಇಂಡಿಯನ್ ಮುಸಲ್ಮಾನರ ಪ್ರಶೋಭಿತ ನೇತಾರ, ಭಾರತದ ಪರಮೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಇಂದು ಸಂಜೆ ನಾಲ್ಕುವರೆ ಗಂಟೆಗೆ ಉಳ್ಳಾಲದ ಚರಿತ್ರೆ ಪ್ರಸಿದ್ಧ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ ದರ್ಬಾರಿಗೆ ಭೇಟಿ ನೀಡಲಿದ್ದು, ಉಸ್ತಾದರನ್ನು ಗೌರವಾದರಗಳಿಂದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಸ್ವಾಗತಿಸಲಿದ್ದಾರೆ. ಸುಲ್ತಾನುಲ್ ಉಲಮಾರ ಈ ಐತಿಹಾಸಿಕ ಭೇಟಿ ಹಾಗು ದರ್ಗಾ ಝಿಯಾರತ್ ಕಾರ್ಯಕ್ರಮದ ಆ ಸುಂದರ ಕ್ಷಣವನ್ನು ಸವಿಯಲು ತಾವೂ ಭಾಗಿಯಾಗಿರುವಿರಿ ತಾನೇ. ✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ

ಪ್ರೇಮಿಗಳ ದಿನ, ಇಂದಿನ ಖುತುಬಾ ಮತ್ತು ಕೆ.ಸಿ.ಎಫ್ ಡೇ

🎓🎓 *ಮಾಸ್ಟರ್ ಮೈಂಡ್* 🎓🎓  *ಪ್ರೇಮಿಗಳ ದಿನ, ಇಂದಿನ ಖುತುಬಾ ಮತ್ತು ಕೆ.ಸಿ.ಎಫ್ ಡೇ* ಇಂದು ಫೆಬ್ರವರಿ 14 ಪ್ರೇಮಿಗಳ ದಿನ ಅಥವಾ Valentine's day ಎಂದು ಅಮೇರಿಕಾ ಸೇರಿ ಕೆಲವು ಪಾಶ್ಚ್ಯಾತ್ಯ ಮೈಂಡ್ ಇರುವ ವ್ಯಕ್ತಿಗಳು ಆಚರಣೆ ಮಾಡುವ ದಿನ. ಆದರೆ ಯುಎಇ ಯಲ್ಲಿರುವ  ಆರು ಸಾವಿರ ದಷ್ಟು  ಮಸೀದಿಗಳ ಖತೀಬರು ಇಂದು ಓದಿದ ಜುಮಾ ಖುತುಬಾ ನಿಜವಾದ ಪ್ರೇಮ ಮತ್ತು ಪ್ರಿಯತಮನ ಮಹತ್ವ, ಸ್ವಭಾವ,ಸವಿಶೇಷತೆಗಳನ್ನು ಎಳೆ ಎಳೆಯಾಗಿ ವಿವರಿಸಿತು. ಅದೇನೆಂದರೆ, ಲೋಕಾನುಗ್ರಹಿ ಸಯ್ಯಿದುನಾ ರಸೂಲುಲ್ಲಾಹಿ ﷺ ರವರ ಕುರಿತ ಮದ್ಹುರ್ರಸೂಲ್ ಪ್ರಭಾಷಣವಾಗಿತ್ತು ಇಂದಿನ ಖುತುಬಾ ದ Matter. ಪ್ರವಾದಿ ಪ್ರೇಮಿಗಳಿಗಿಂದು ರಬೀಉಲ್ ಅವ್ವಲ್ ನ ಅನುಭವ. ಅಂದ ಹಾಗೆ ಇಂದು ನಮ್ಮ ಹೆಮ್ಮೆಯ ಸಂಘಟನೆಯಾದ KCF ನ ಸ್ಥಾಪಕ ದಿನ. ಯಶಸ್ವೀ ತನ್ನ ಏಳು ವರ್ಷ ಪೂರ್ತಿಮಾಡಿ ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ದಿನ.ವಿದೇಶದಲ್ಲಿರುವ ಕರ್ನಾಟಕದ ಸುನ್ನಿ ಗಳಿಗಿಂದು ಪೆರ್ನಾಲ್ ನ ಸಡಗರ ಅದರೊಟ್ಟಿಗೆ ಗಲ್ಫ್ ಇಶಾರ ದ ಚಂದಾ ಅಭಿಯಾನ ಕೂಡ...... ಯಾವುದೇ ಸಂಭ್ರಮದಲ್ಲೂ ಮೌಲಿದ್ ಓದುವುದು ಸುನ್ನಿಗಳ ರೂಢಿ. ಪ್ರವಾದಿ ಪ್ರೇಮಿಗಳ ನೈಜ್ಯ  ಸಂಘಟನೆಯಾದ KCF ನ ಹುಟ್ಟು ದಿನವಾದ ಇಂದು (ಫೆ.14) ಇಲ್ಲಿನ ಎಲ್ಲಾ ಮಸೀದಿಗಳು ಒಟ್ಟಾಗಿ ಮೌಲಿದ್ ಪಾರಾಯಣ ಮಾಡಿದ ಅನುಭವ ಆದದ್ದಂತೂ ನಿಜ !      📱 058...

ಮಲಾರ್ ಮದ್ರಸ ವಿಧ್ಯಾರ್ಥಿಗಳ ಅಪಹರಣ ಆರೋಪಿಗಳ ಮೇಲೆ ಗೂಂಡಾ ಖಾಯ್ದೆ ಜಾರಿಯಾಗಲಿ

*ಮಲಾರ್ ಮದ್ರಸ ವಿಧ್ಯಾರ್ಥಿಗಳ ಅಪಹರಣ ಆರೋಪಿಗಳ ಮೇಲೆ ಗೂಂಡಾ ಖಾಯ್ದೆ ಜಾರಿಯಾಗಲಿ* ✍ *SYS ಹರೇಕಳ ಸೆಂಟರ್* ಮಂಗಳೂರು: ಕೊಣಾಜೆ ವ್ಯಾಪ್ತಿಯ ಮಲಾರ್ ಸಮೀಪದ ನೂರುಲ್ ಇಸ್ಲಾಂ ಮದ್ರಸಕ್ಕೆ  ತೆರಳುತ್ತಿದ್ದ ಮೂವರು ವಿಧ್ಯಾರ್ಥಿನಿಗಳನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಘಟನೆಯನ್ನು ಎಸ್ ವೈ ಎಸ್ ಹರೇಕಳ ಸೆಂಟರ್ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಅತಿ ಶೀಘ್ರವಾಗಿ ಬಂಧಿಸಿದ ಪೋಲಿಸರಿಗೆ ಅಭಿನಂದನೆಗಳು. ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಿ, ಈ ಪ್ರಕರಣದ ಹಿಂದಿರುವ ಷಡ್ಯಂತರವನ್ನು ಭೇದಿಸಿ ಇವರನ್ನು ಬೆಂಬಲಿಸುವ ಪ್ರೇರೇಪಣೆ ನೀಡುವ ಸಂಘಟನೆಗಳ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ವಿನಂತಿಸುತ್ತಿದ್ದೇವೆ. *ಅಧ್ಯಕ್ಷರು ಮತ್ತು ಸರ್ವ ಸದಸ್ಯರು* SYS ಹರೇಕಳ ಸೆಂಟರ್

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ಪ್ರಥಮ ಕಾರ್ಯಕಾರಿ ಸಮಿತಿ ವಿಶೇಷ ಸಭೆ

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ಪ್ರಥಮ ಕಾರ್ಯಕಾರಿ ಸಮಿತಿ ವಿಶೇಷ ಸಭೆ ಉಳ್ಳಾಲ ತೊಕ್ಕೋಟ್ಟಿನ ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಕೌನ್ಸಿಲ್ ಅಧ್ಯಕ್ಷರಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮರ್ಕಝ್ ಸಮ್ಮೇಳನ ಮಂಗಳೂರು ತಾಲೂಕು  ಪ್ರಚಾರ ಸಮಿತಿ ಕನ್ವೀನರ್ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಧ್ಯಕ್ಷತಾ ಭಾಷಣ ಮಾಡಿ ಮರ್ಕಝ್ ಸಮ್ಮೇಳನ ಯಶಸ್ವಿಗಾಗಿ ಹಮ್ಮಿಕೊಂಡ ಮೊಹಲ್ಲಾ ಪ್ರಚಾರ ಸಭೆಯ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಇದರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಲು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಮಂಗಳೂರು ತಾಲೂಕನ್ನು ಉಳ್ಳಾಲ, ಮಂಜನಾಡಿ, ದೇರಳಕಟ್ಟೆ, ಕೋಣಾಜೆ, ಮಂಗಳೂರು, ಕ್ರಷ್ಣಾಪುರ ಎಂಬ ಆರು ರೇಂಜ್ (ವ್ಯಾಪ್ತಿ) ಗಳನ್ನಾಗಿ ವಿಂಗಡಿಸಲಾಗಿದ್ದು, ಸದ್ಯಕ್ಕೆ ಆರು ರೇಂಜುಗಳಿಂದ 46 ಮೊಹಲ್ಲಾಗಳ ಹೆಸರು ಸೂಚಿಸಲಾಗಿದ್ದು, ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಮೊಹಲ್ಲಾ ನಾಯಕರ ಸಮ್ಮತಿಯೊಂದಿಗೆ ದಿನಾಂಕ ಪ್ರಕಟಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ತಾಲೂಕು ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅಧ್ಯಯನಾ ಕಾರ್ಯದರ್ಶಿ ನಿಸಾರ್ ಸಖಾಫಿ ಉಳ್ಳಾಲ ಧನ್ಯವಾ...