ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್ ಇಂದು ಸಂಜೆ 4-30 ಗಂಟೆಗೆ ಉಳ್ಳಾಲಕ್ಕೆ.
ಇಂಡಿಯನ್ ಮುಸಲ್ಮಾನರ ಪ್ರಶೋಭಿತ ನೇತಾರ, ಭಾರತದ ಪರಮೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಇಂದು ಸಂಜೆ ನಾಲ್ಕುವರೆ ಗಂಟೆಗೆ ಉಳ್ಳಾಲದ ಚರಿತ್ರೆ ಪ್ರಸಿದ್ಧ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ ದರ್ಬಾರಿಗೆ ಭೇಟಿ ನೀಡಲಿದ್ದು, ಉಸ್ತಾದರನ್ನು ಗೌರವಾದರಗಳಿಂದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಸ್ವಾಗತಿಸಲಿದ್ದಾರೆ.
ಸುಲ್ತಾನುಲ್ ಉಲಮಾರ ಈ ಐತಿಹಾಸಿಕ ಭೇಟಿ ಹಾಗು ದರ್ಗಾ ಝಿಯಾರತ್ ಕಾರ್ಯಕ್ರಮದ ಆ ಸುಂದರ ಕ್ಷಣವನ್ನು ಸವಿಯಲು ತಾವೂ ಭಾಗಿಯಾಗಿರುವಿರಿ ತಾನೇ.
✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ
