Skip to main content

Posts

Showing posts from April, 2017

ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನ 2ನೇ ಯುನಿಟ್ ಆಗಿ ಸರಯಾ ಅಸ್ತಿತ್ವಕ್ಕೆ

ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ 2ನೇ ಯುನಿಟ್ ಆಗಿ ಸರಯಾ ಯುನಿಟ್ ರಚನೆ  ಹಾಗೂ ಸ್ವಲಾತ್ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಸರಯಾ ಮ...

ಮಂಗಳೂರಿನಲ್ಲಿ ಪ್ರೊಲಾಝ್ ಕ್ಯಾಂಪ್

ಮಂಗಳೂರಿನಲ್ಲಿ ಪ್ರೊಲಾಝ್ ಕ್ಯಾಂಪ್ ಮಂಗಳೂರು,ಎ.16 : ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ವತಿಯಿಂದ ಪ್ರೊಲಾಝ್ ಕ್ಯಾಂಪ್ ದಿನಾಂಕ 16ರಂದು ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ನಲ್ಲಿ ಹಸನ್ ಪಾಂಡೇಶ್ವರ್ ಅ...

ಅಲ್ ಮದೀನತುಲ್ ಮುನವ್ವರ ಮೂಡಡ್ಕ ಮದೀನಾ ಘಟಕ ಅಸ್ತಿತ್ವಕ್ಕೆ

ಅಲ್ ಮದೀನತುಲ್ ಮುನವ್ವರ ಮೂಡಡ್ಕ ಮದೀನಾ ಘಟಕ ಅಸ್ತಿತ್ವಕ್ಕೆ ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮದೀನಾ ನೂತನ ಸಮಿತಿ ಮತ್ತು ಆಧ್ಯಾತ್ಮಿಕ ಸಂಗಮ ಸಯ್ಯಿದ್ ಶಾಫಿ ತಂಙಲ್ ಒಳಪಟ್ಟನಮ್ ರವರ ನೇತ್ರತ್...

KCF ಝಾಯಿದಿ ಯುನಿಟ್ ಅಸ್ತಿತ್ವಕ್ಕೆ

KCF ಝಾಯಿದಿ ಯುನಿಟ್ ಅಸ್ತಿತ್ವಕ್ಕೆ KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ನ ಅಧೀನದಲ್ಲಿ ಝಾಯಿದಿ ನೂತನ ಶಾಖೆಯನ್ನು ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಪ್ರಾರಂಭದಲ್ಲಿ ಸ್ವಲಾತ್ ಮಜ್ಲಿಸ್ ಗೆ  ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಲಕ್ಕಿ ತಂಙಲ್ ನೇತ್ರತ್ವ ನೀಡಿ ಎಲ್ಲಾ ತಿಂಗಳು ಹೇಳಲು ಇಜಝಾತ್ ನೀಡಿದರು ಕಾರ್ಯಕ್ರಮವನ್ನು ಝೈನುಲ್ ಆಬಿದೀನ್ ಅಂಜದಿ ನಿಲಂಬೂರ್ ಉದ್ಘಾಟಿಸಿದರು ಜೀವನ ನಾಡಿಗಾಗಿ, ನಾಳೆಗಾಗಿ ಎಂಬ ಪ್ರಮೇಯದಲ್ಲಿ ಹನೀಫ್ ಸಖಾಫಿ ಬೊಳ್ಮಾರ್ ಭಾಷಣ ಮಾಡಿದರು ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್, ಶಿಕ್ಷಣ ವಿಭಾಗ ಅಧ್ಯಕ್ಷರು ಸುಲೈಮಾನ್ ಪಾದೆಕಲ್ಲು, ಝಾಯಿದಿ ICF ಯುನಿಟ್ ಪ್ರ. ಕಾರ್ಯದರ್ಶಿ ಸೂಫಿ ಮುಸ್ಲಿಯಾರ್ ಕುಟ್ಯಾಡಿ ಶುಭ ಹಾರೈಸಿ ಮಾತನಾಡಿದರು ನಂತರ ಸೆಕ್ಟರ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಶುಭ ಹಾರೈಸಿ ಹೊಸ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು ಪದಾಧಿಕಾರಿಗಳ ವಿವರ ಅಧ್ಯಕ್ಷರು: ಅಬ್ದುಲ್ ಮಜೀದ್ ಮಠ. ಪ್ರ. ಕಾರ್ಯದರ್ಶಿ: ಶರೀಫ್ ಪಲ್ಲಮಜಲ್. ಕೋಶಾಧಿಕಾರಿ: ಅಬ್ದುಲ್ ಅಝೀಝ್ ತುರ್ಕಳಿಕೆ.       ಶಿಕ್ಷಣ ವಿಭಾಗ ಅಧ್ಯಕ್ಷರು: ನೌಫಲ್ ವಳವೂರ್. ಕಾರ್ಯದರ್ಶಿ: ಅಬ್ದುಲ್ಲಾ ತಲಪಾಡಿ.       ಪಬ್ಲಿಷಿಂಗ್ ವಿಭಾಗ ಅಧ್ಯಕ್ಷರು: ಬಶೀರ್ ಕೆಜೆಕಾರ್. ಕಾರ್ಯದರ್ಶಿ: ಅಬ್ದುಲ್...

ಪೆರಿಯಪಾದೆ : ರಜಬ್ ತಿಂಗಳ ಮಹತ್ವ, ಮೆಹಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್

*ಎಸ್ ಎಸ್ ಎಫ್ ಪೆರಿಯಪಾದೆ ಶಾಖಾ ವತಿಯಿಂದ ರಜಬ್ ತಿಂಗಳ ಮಹತ್ವ ,ಮೆಹಫಿಲೇ ತಯಿಬ ದ್ಸಿಕ್ರ್ ಮಜ್ಲಿಸ್ ಹಾಗೂ ಸಹಾಯಧನ ವಿತರಣೆ* _ಎಸ್ ಎಸ್ ಎಫ್ ಪೆರಿಯಪಾದೆ ಶಾಖಾ ವತಿಯಿಂದ ರಜಬ್ ತಿಂಗಳ ಮಹತ್ವ ಮತ್ತು ಮೆಹಫಿ...

ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಮಹಾಸಭೆ

ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಮಹಾಸಭೆ ಕಳೆದ ಸುಮಾರು 12 ವರ್ಷಗಳ ಹಿಂದೆ ಖ್ಯಾತ ವಾಗ್ಮಿಯೂ  ಧೀರ ನೇತಾರರೂ ಆಗಿದ್ದ  ಮರ್ಹೂಂ ಟಿ.ಹೆಚ್ ಇಬ್ರಾಹಿಂ ಮದನಿ ಉಸ್ತಾದರ ಕನಸಿನ ಕೂಸಾಗಿದ್ದ ಅನಾಥ ಹಾಗೂ ನಿರ್ಗತಿಕ ವಿಧ್ಯಾಸಂಸ್ಥೆಯನ್ನು ಆರಂಭದಲ್ಲಿ 7 ಮಕ್ಕಳನ್ನು  ಸೇರಿಸಿ ತಾಜುಲ್ ಉಲಮಾ ಉಳ್ಳಾಲ ತಂಙಲ್ ರವರ ದಿವ್ಯ ಸಾನಿಧ್ಯದಲ್ಲಿ ಆರಂಬಿಸಲಾಯಿತು. ಅಲ್ ಹಂದುಲಿಲ್ಲಾಹ್.. ಟಿ.ಎಚ್ ಉಸ್ತಾದರ  ಮರಣಾನಂತರ ಸಂಸ್ಥೆಯು ತೀರಾ ಹಿಂದುಳಿಯುತ್ತಿರುವುದನ್ನು ಮನಗಂಡು ಊರಿನ ಹಾಗೂ ನೆರೆಯ 10 ಜನರು ಕಳೆದ 8 ವರ್ಷಗಳ ಹಿಂದೆ ರಿಯಾದಿನ ಒಂದು ಕಡೆ ಸೇರಿ ಅಲ್- ಮದೀನತುಲ್ ಮುನವ್ವರ ಮೂಡಡ್ಕ  ರಿಯಾದ್ ಎಂಬ ಪುಟ್ಟ ಸಮಿತಿಯನ್ನು ರಚಿಸಿದರು. ಸಮಿತಿಯು ಕಳೆದ 8 ವರ್ಷಗಳಿಂದ ಸೌದಿಯ ರಿಯಾದಿನಲ್ಲಿ ಕಾರ್ಯಾಚರಿಸುತ್ತಾ ಬಂದಿರುತ್ತದೆ ಸದ್ರಿ ಸಮಿತಿಯ  ವಾರ್ಷಿಕ ಮಾಹಾ ಸಬೆಯು ಸಮಿತಿಯ ಹಾಲಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ರಿಯಾದಿನ ಹೈಇಲ್ ಮಸ್ನ ಎಂಬಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು. ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದೊಂದಿಗೆ ಆರಂಭಿಸಿದ ಸಭೆಯು ಬಹು ಮಹ್ಮೂದ್ ಸಖಾಫಿ ಕೊಡಗುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮವನ್ನು ಬಹು ಅಬ್ದುಲ್ ಕರೀಂ ಲತೀಫಿ ಬೇಂಗಿಲ ಉಧ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡವ...

ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣದಲ್ಲಿ ಕಣ್ಣೀರಿಟ್ಟ ನಿಕಟ ಪೂರ್ವ ಅಧ್ಯಕ್ಷ ಅಶ್ರಫ್ (ಮಹ್ಮೂದ್) ಉಳ್ಳಾಲ್.

ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣದಲ್ಲಿ ಕಣ್ಣೀರಿಟ್ಟ ನಿಕಟ ಪೂರ್ವ ಅಧ್ಯಕ್ಷ ಅಶ್ರಫ್ (ಮಹ್ಮೂದ್) ಉಳ್ಳಾಲ್. ಬದುಕನ್ನೇ ಕೆಸಿಎಫ್ ಗಾಗಿ ಮುಡಿಪ್ಪಾಗಿಟ್ಟ ನಮ್ಮ ನೆಚ್ಚಿನ ಅಶ್ರಫಾಕ ಇನ್ನೇನು ಕೆಲವೇ ದಿನಗಳಲ್ಲಿ final exit ಮಾಡಿ ಸೌದಿ ಅರೇಬಿಯ ಕ್ಕೆ ಶಾಶ್ವತ ವಿಧಾಯ ಹೇಳಲಿದ್ದಾರೆ ಸಂಘಟನೆಯನ್ನು ಶಕ್ತಿ ಪಡಿಸುವುದರಲ್ಲಿ ಅಶ್ರಫಾಕನ ಪಾತ್ರ ಅನನ್ಯ ಸಂಘಟನೆಯನ್ನು ‌ನೊಂದು ಮೈಕ್ ಮುಂದೆ ಭಾವುಕರಾದಾಗ ಸಭೀಕರಲ್ಲಿ ದುಃಖ ಉಮ್ಮಳಿಸಿ ಬರುತ್ತಿದ್ದವು ಮುಂದಿನ ದಿನಗಳಲ್ಲಿ ಅವರ ಅನುಪಸ್ಥಿತಿಯನ್ನು ಅಲ್ ಹಸ್ಸ ಸೆಕ್ಟರ್ ಮನ ತುಂಬಿ ವಿ಼ಷಾಧಿಸುತ್ತಿವೆ. ಹಗಲಿರುಲೆನ್ನದೆ ಸುನ್ನತ್ ಜಮಾಅತ್ತಿಗಾಗಿ ದುಡಿದ ಅವರ ಸಾಟಿ ಇಲ್ಲದ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ ಅವರ ಮುಂದಿನ ಜೀವನ ಆರೋಗ್ಯ ನಿಬಿಡ ದೀರ್ಘಕಾಲದ ಬದುಕು ಅವರಿಗಾಗಿರಲಿ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವತಿಯಿಂದ ಕೋಟಿ ಕೋಟಿ ಶುಭಕಾಮನೆಗಳು. *ಕೆಸಿಎಫ್ ಅಲ್ ಹಸ್ಸ ಸೆಕ್ಟರ್.**ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣದಲ್ಲಿ ಕಣ್ಣೀರಿಟ್ಟ ನಿಕಟ ಪೂರ್ವ ಅಧ್ಯಕ್ಷ ಅಶ್ರಫ್ (ಮಹ್ಮೂದ್) ಉಳ್ಳಾಲ್.* ಬದುಕನ್ನೇ ಕೆಸಿಎಫ್ ಗಾಗಿ ಮುಡಿಪ್ಪಾಗಿಟ್ಟ ನಮ್ಮ ನೆಚ್ಚಿನ ಅಶ್ರಫಾಕ ಇನ್ನೇನು ಕೆಲವೇ ದಿನಗಳಲ್ಲಿ final exit ಮಾಡಿ ಸೌದಿ ಅರೇಬಿಯ ಕ್ಕೆ ಶಾಶ್ವತ ವಿಧಾಯ ಹೇಳಲಿದ್ದಾರೆ ಸಂಘಟನೆಯನ್ನು ಶಕ್ತಿ ಪಡಿಸುವುದರಲ್ಲಿ ಅಶ್ರಫಾಕ...

ಕೊಳಕೇರಿ ಮಖಾಂ ಉರೂಸ್ 2017 ಏಪ್ರಿಲ್ 7 - 11... : ✍🏼 *ಶಿಹಾಬ್ ಅಲ್ ವಫಾ ಕೊಳಕೇರಿ*

ಕೊಳಕೇರಿ ಮಖಾಂ ಉರೂಸ್ 2017 ಏಪ್ರಿಲ್ 7 - 11 ಹಲವಾರು ಕಷ್ಫ್ ಕರಾಮಾತುಗಳಿಂದ ಬಡವರ ನಿರ್ಗತಿಕರ ಅಸಾಯಕರ ಪಾಲಿಗೆ ಜೀವಧಾನಿಯಾಗಿ, ಸಮಸ್ಯೆಗಳ  ಸುಳಿಯಲ್ಲಿ ಬೆಂದು ಬೇಯುತ್ತಿರುವವರಿಗೆ ಆಶಾಕಿರಣವಾಗಿ, ಮನಸ್ಸಿನಾಳದ ಮನಶ್ಚಿಂತೆಯಿಂದ ಮಾನಸಿಕವಾಗಿ, ಮನ ನೊಂದವರಿಗೆ ಮಧುರ ಮನೋಹರ ಮಾರ್ಗದರ್ಶಕರಾಗಿ ತನ್ನ ಕಷ್ಫ್ ಕರಾಮಾತುಗಳಿಂದ ಪರಿಹಾರವನ್ನೊದಗಿಸಿ ಜನಮನದಲ್ಲಿ ಅರಾಜ್ಯಮಾನರಾದ ಕೊಳಕೇರಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಔಲಿಯಾಗಳ ಹೆಸರಿನಲ್ಲಿ ನಡೆಸಿಬರುತ್ತಿರುವ ಉರೂಸ್ ನೇರ್ಚೆಯೂ ಇದೇ ಬರುವ *ಏಪ್ರಿಲ್ 7 ರಿಂದ 11* ರ ವರೆಗೆ ಅತೀ ವಿಜೃಂಭಣೆ  ಸಡಗರ ಸಂಭ್ರಮದಲ್ಲಿ ನಡೆಯುವಾಗ ಈ ಪುಣ್ಯ ಕಾರ್ಯಕ್ರಮದಲ್ಲಿ ನೇತ್ರಸಾಕ್ಷಿಗಳಾಗಲೂ ತಮಗಿದು ಹಾರ್ದವ ಹ್ರದಯಂಗಮಾ ಸುಸ್ವಾಗತ. ಕಾರ್ಯಕ್ರಮದ  ಮೊದಲನೆಯ ದಿವಸವಾದ *ಏಪ್ರಿಲ್ 7ರಂದು* ಜುಮುಅ ನಮಾಝಿನ ನಂತರ ಕೊಳಕೇರಿ ಖತೀಬರಾದ *ಮುಸ್ತಾಫಾ ಸಖಾಫಿ* ಉಸ್ತಾದರ ನೇತೃತ್ವದಲ್ಲಿ ಪ್ರಾರ್ಥನೆಯ ಬಳಿಕ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ *ಟಿ ಹೆಚ್ ಮೊಯಿದೀನ್ ಕುಟ್ಟಿ ಹಾಜಿಯವರು* ಧ್ವಜಾರೋಹಣ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ ಕಾರ್ಯಕ್ರಮದ ಮೊದಲನೆಯ ದಿವಾಸವಾದ *ಏಪ್ರಿಲ್ 7 ಶುಕ್ರವಾರ ರಾತ್ರಿ 8:30ಕ್ಕೆ* ಸರಿಯಾಗಿ  ಅಹ್ಲ್ ಬೈತಿನ ಧನ್ಯ ಕುಟುಂಬ ಸರದಿಯಲ್ಲಿ ಉದಯಿಸಿ ಬಂದ ಆಥ್ಯಾತ್ಮಿಕ ನೇತಾರ *ಅಸ್ಸಯ್ಯಿದ್ ಜಅಫರ್ ಸ್ವಾದಿಖ್ ತಂಗಳ್ ಕುಂಬೋಳ್* ಇವರ ...

ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ  ಬುರೈದಾ ಘಟಕ ಅಸ್ತಿತ್ವಕ್ಕೆ  ಅಧ್ಯಕ್ಷರು ತಾಜುದ್ದೀನ್  ಕೆಮ್ಮಾರ,ಪ್ರ.ಕಾರ್ಯದರ್ಶಿಯಾಗಿ ಬಸೀರ್ ಸೂರಿಂಜೆ ಆಯ್ಕೆ

*ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ  ಬುರೈದಾ ಘಟಕ ಅಸ್ತಿತ್ವಕ್ಕೆ  ಅಧ್ಯಕ್ಷರು ತಾಜುದ್ದೀನ್  ಕೆಮ್ಮಾರ,ಪ್ರ.ಕಾರ್ಯದರ್ಶಿಯಾಗಿ ಬಸೀರ್ ಸೂರಿಂಜೆ ಆಯ್ಕೆ* ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ಥೆ ಮೂಡಡ್ಕ ಇದರ ಸೌದಿ ಅರೇಬಿಯಾ ಪರ್ಯಟನೆ ಭಾಗವಾಗಿ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡಾವು ರವರ ಉಪಸ್ಥಿಯಲ್ಲಿ ಬುರೈದಾ ದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಖಾಫಿಯವರು ಮರ್ಹೂಮ್ ಟಿ.ಎಚ್ ಉಸ್ತಾದರು ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲು ಸ್ಥಾಪಿಸಿದ ಸಂಸ್ಥೆ, ಅವರ ಮರಣದ ನಂತರ ಸಾದಾತುಗಳ ಹಾಗೂ ಉಲಮಾಗಳ ನೇತ್ರತ್ವ ದಲ್ಲಿ ಬಹಳ ಅಭಿವರ್ದಿಯತ್ತ ಮುಂದು ವರಿಯುತ್ತಾ   7 ವಿದ್ಯಾರ್ಥಿಗಳಿಂದ ಆರಂಭಗೊಂಡಂತಹಾ ಸ್ಧಾಪನೆ ಈಗಾಗಲೇ 650 ಕ್ಕೂ ಮಿಕ್ಕ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಭೌತಿಕವಾಗಿ ವಿದ್ಯೆ ಪಡೆಯುತ್ತಿದ್ದಾರೆ, ಇದರ ಉನ್ನತಿಗೆ ಬೇಕಾಗಿ ಇನ್ನಷ್ಟು ಶ್ರಮಿಸಬೇಕು ಎಂದರು.  *ನೂತನ ಪದಾಧಿಕಾರಿಗಳು* ಅಧ್ಯಕ್ಷರು- ತಾಜದ್ದೀನ್ ಕೆಮ್ಮಾರ ಪ್ರ.ಕಾರ್ಯದರ್ಶಿ-ಬಶೀರ್ ಸೂರಿಂಜೆ ಕೋಶಾಧಿಕಾರಿ- ಸಲೀಂ ಕೆಮ್ಮಾರ ‌ ಉಪಾಧ್ಯಕ್ಷರುಗಳು ಇಬ್ರಾಹಿಂ ಅತೂರು ಕ್ಯೂಲಾ ಝಕರಿಯ್ಯ ಹಾಸನ ಜೊತೆ ಕಾರ್ಯದರ್ಶಿಗಳು ಇಬ್ರಾಹಿಂ ಸರಳಿಕಟ್ಟೆ ಪ್ಯೊಲಾ ಸಲಹೆಗಾರರು- ಅಬ್ದುಲ್ಲ ಕಂಬಳಬೆಟ್ಟು ಕೋಲ್ಫ್ ಸಂಘಟನಾ ಕರ್ಯದರ್ಶಿ ಇರ್ಶಾದ್ ಸಚ್ಚಾರಿಪೇಟೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಶ...