ತಖ್ವಾ ಜುಮಾ ಮಸೀದಿ ಹಾಗು ಖವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ ಆಡಳಿತ ಸಮಿತಿ ಆಶ್ರಯದಲ್ಲಿ ಪ್ರಾರ್ಥನಾ ಸಂಗಮ ಹಾಗು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಪಟ್ಲದ ಮದ್ರಸ ಹಾಲ್ ನಲ್ಲಿ ಜರುಗಿತು. ಪಟ್ಲ ಮಸೀದಿಯ ಮುದರ್ರಿಸ್ ಹಾಗು ಸಹ ಖತೀಬರಾದ ಅಬೂ ಮುಖ್ತಾರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಫೈಝಿ ಉಸ್ತಾದರ ವ್ಯಕ್ತಿತ್ವ, ಸರಳ ಸ್ವಭಾವ ನಮಗೆ ಮಾದರಿ ಅಂದರು. ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಕಿಂಚಿತ್ತೂ ಸಡಿಲ ಮನೋಭಾವ ತೋರಿಸದೆ ಎದೆಗಾರಿಕೆಯೊಂದಿಗೆ ಹೇಳುವ ವ್ಯಕ್ತಿತ್ವ ಅವರದಾಗಿದೆ ಎಂದು ತಿಳಿಸಿದರು. ಪಟ್ಲ ಮೋಙಂ ಫೈಝಿ ಉಸ್ತಾದರು ಮುಖ್ಯ ಪ್ರಭಾಷಣ ನಡೆಸಿ ಹಜ್ ಎಂಬುದು ಇಸ್ಲಾಮಿನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು ಸಾಧ್ಯವಿರುವವರು ಆಯುಷ್ಯದಲ್ಲಿ ಒಮ್ಮೆ ಹಜ್ ನಿರ್ವಹಿಸುವುದು ಕಡ್ಡಾಯವಾಗಿದೆ ಅಂದರು. ಬಳಿಕ ಪಟ್ಲ ಮಸೀದಿ ಮದ್ರಸದ ಆಡಳಿತ ಸಮಿತಿ, ಎಸ್ಸೆಸ್ಸೆಫ್ ಪಟ್ಲ ಶಾಖೆ ಹಾಗು ಪಳ್ಳಿ ದರ್ಸ್ ವಿದ್ಯಾರ್ಥಿಗಳ ವತಿಯಿಂದ ಹಜ್ ಯಾತ್ರೆಗೆ ಹೊರಟಿರುವ ಪಟ್ಲ ಉಸ್ತಾದರಿಗೆ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಅಧ್ಯಕ್ಷರೂ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಹಾಲಿ ನಾಯಕರಾದ ಸಯ್ಯಿದ್ ಖುಬೈಬ್ ತಂಗಳ್ ರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಮೊಯ್ದಿನ್, ಮದ್ರಸದ ಅಧ್ಯಾಪಕರಾದ ಶಾಫಿ ಸಖಾಫಿ, ಉಪಾಧ್ಯಕ್ಷ ಹಾರಿಸ್, ಪ್ರಧಾನ ಕಾರ್ಯದರ್ಶಿ ...