ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮುಫ್ತಿ ಹಾಜಿ ಪೀರ್ ಹಝರತ್ ಶಾಹ್ ಹಸನ್ ಮೊಹಮ್ಮದ್ ಶಂಸುಲ್ ಹಕ್ ಖಾದ್ರಿ (ತ) *ಇಂಗ್ಲಿಷ್ ನಿಂದ ಭಾಷಾಂತರ* *✍🏻Nizzu4ever👁* *ಉರುವಾಲುಪದವು* *niznam4ever@gmail.com* ಸಾಧಾರಣ ಇನ್ನೂರು ವರ್ಷಗಳ ಹಿಂದೆ ಬಾಗ್ದಾದಿನಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಸೂಫಿ ಸಂತರಾದ ಹಝರತ್ ಆರಿಫ್ ಕಾಮಿಲ್ ಸೂಫಿಯೇ-ಬಾ-ಸಫಾ ಹಾಫೀಜ್ ಅಲ್ಲಾಮಾ ಸಯ್ಯದ್ ಶಾಹ್ ಮೊಹಮ್ಮದ್ ಅಬ್ದುಲ್ ಖಾದ್ರಿ ಲಖಾವುಳ್ಲಹ ಶಾಹ್ ಖಾದ್ರಿ ಬಗ್ದಾದಿ ಅಲಿಯಾಸ್ ಹಝರತ್ ಲಕ್ಕಾದ್ ಶಾಹ್ ಔಲಿಯಾ (ನ.ಮ) ಹಝರತ್ ಲಕ್ಕಾದ್ ಶಾಹ್ ರವರು ಬೆಂಗಳೂರಿನಲ್ಲಿ ಸ್ಥಳವನ್ನು ಖರೀದಿಸಿ ಅದರ ಒಂದು ಭಾಗದಲ್ಲಿ ಮಸೀದಿ ಮತ್ತು ಇನ್ನೊಂದು ಭಾಗದಲ್ಲಿ ಮನೆ ನಿರ್ಮಿಸಿ ಬಾಕಿ ಉಳಿದ ಚಿಕ್ಕ ಜಾಗದಲ್ಲಿ ಜೀವನ ಮಾರ್ಗಕ್ಕಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಝ್ರತ್ ಲಕ್ಕಾದ್ ಶಾಹ್ ಔಲಿಯಾರವರು ಒಬ್ಬ ಮಹೋನ್ನತ ಸೂಫಿ ಸಂತರಾಗಿದ್ದರು. ತನ್ನ ಜೀವನವನ್ನು ಸಂಪೂರ್ಣವಾಗಿ ಅಲ್ಲಾಹುವಿನ ಧ್ಯಾನದಲ್ಲಿ ಮತ್ತು ಜನರಿಗೆ ಆಧ್ಯಾತ್ಮಿಕತೆಯನ್ನು ಭೋದಿಸಲು ಮೀಸಲಿರಿಸಿದ್ದರು. ಏಕದೇವ ವಿಶ್ವಾಸವನ್ನು ಮತ್ತು ರಸೂಲ್ ಸ.ಅ ರವರ ಜೀವನ ಸಂದೇಶವನ್ನು ಅವರ ಭಾಷಣದ ಮುಖಾಂತರ ಜಗದಗಲ ಹರಡುತ್ತಿದ್ದರು. ಅವರ ಧರ್ಮನಿಷ್ಠೆ ಮತ್ತು ಹೃದಯ ವಿಶಾಲತೆಯ ಕಾರಣದಿಂದ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಅಗತ್ಯವಿರುವವರಿಗೆ ಮತ್ತು ದುಃಖದಲ್ಲಿರುವ ಜನ...