Skip to main content

Posts

Showing posts from August, 2019

ಮುಹರ್ರಮ್ ತಿಂಗಳ ಚಂದ್ರದರ್ಶನ

ಮುಹರ್ರಮ್  ತಿಂಗಳ  ಚಂದ್ರದರ್ಶನ ಸೆಪ್ಟೆಂಬರ್ 9 ಮತ್ತು 10 ರಂದು ತಾಸೂಆ, ಆಶೂರಾ ಸುನ್ನತ್ ಉಪವಾಸ ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ ಇಂದು (ಶನಿವಾರ ಅಸ್ತ ಆದಿತ್ಯವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1 ನಾಳೆ ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು, ಸೆಪ್ಟೆಂಬರ್ 9 ಮತ್ತು 10 ರಂದು ತಾಸೂಆ, ಆಶೂರಾ  ಸುನ್ನತ್ ಉಪವಾಸ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಘೋಷಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 01-09-2019 is first of Muharram and Thaasua, Aashurawill be held on September 9 &10. In sha Allah

SSF ದ.ಕ. ಬ್ಲಡ್ ಸೈಬೋ 100ನೇ ರಕ್ತದಾನ ಶಿಬಿರ ಕಾರ್ಯಕ್ರಮ

ಮಂಗಳೂರು(ಮುಗುಳ್ನಗೆ) : ನಗರದ ಪ್ರತಿಷ್ಠಿತ ಐದು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಬ್ಲಡ್ ಸೈಬೋ ಬೃಹತ್ 100ನೇ ರಕ್ತದಾನ ಶಿಬಿರವನ್ನು ನಗರದ ಪುರಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಸ್ಸೆಸ್ಸೆಫ್ ನಡೆಸುವ ಈ ಮಾನವೀಯ ಸೇವೆ ಶ್ಲಾಘನೀಯ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಅಗ್ನಿಶಾಮಕ ದಳ ಅಧಿಕಾರಿ ಮುಹಮ್ಮದ್ ನವಾಝ್ ಝುಲ್ಫಿಕಾರ್ ಮಾತನಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್‌ಕೆಎಂ ಶಾಫಿ ಸಅದಿ ಮಾನವತಾ ಸಂದೇಶ ನೀಡಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಸ್ವಾತಂತ್ರ್ಯ ಸಂದೇಶ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ವಹಿಸಿದ್ದರು. 141 ಬಾರಿ ರಕ್ತದಾನ ಮಾಡಿದ ಡಾ.ಸುದೇಶ್ ಶಾಸ್ತ್ರಿ, 105 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಹಾಗೂ 53 ಬಾರಿ ರಕ್ತದಾನ ಮಾಡಿದ ...

ಕೆಂಪು ಕ್ರಾಂತಿಯಲ್ಲೊಂದು ಆತ್ಮ ವಿಶ್ವಾಸದ ಪಾಠ

🎓🎓 ಮಾಸ್ಟರ್ ಮೈಂಡ್ 🎓🎓  ಕೆಂಪು ಕ್ರಾಂತಿಯಲ್ಲೊಂದು ಆತ್ಮ ವಿಶ್ವಾಸದ ಪಾಠ    ಜಗತ್ತಿನಲ್ಲಿ ಹಲವಾರು ಕ್ರಾಂತಿಗಳು ನಡೆದಿವೆ, ಅವುಗಳಲ್ಲಿ ಹಸಿರು ಕ್ರಾಂತಿ,ಬಿಳಿ ಕ್ರಾಂತಿ,ಹಳದಿ ಕ್ರಾಂತಿ,ನೀಲಿ ಕ್ರಾಂತಿ ...... ಇವುಗಳೆಲ್ಲವೂ ನಿರ್ಧಿಷ್ಟ ವಸ್ತುಗಳ ಅಭಿವೃದ್ದಿಗೆ ಮಾಡಿದ ಕ್ರಾಂತಿಗಳಾಗಿವೆ. ಅವುಗಳಲ್ಲೂ ಕೆಂಪು ಕ್ರಾಂತಿ ಇವೆಯಾದರೂ SSF ದ.ಕ ಜಿಲ್ಲಾ ಸಮಿತಿ ನಡೆಸುತ್ತಿರುವ ಬ್ಲಡ್ ಸೈಬೇೂ ಎಂಬ ರಕ್ತ ದಾನ ಶಿಬಿರಗಳು ಅದಕ್ಕೊಂದು ನ್ಯೂ ಅಪ್ಡೇಟ್ ನೀಡಿದೆ ಎಂಬುವುದು ಮಾತ್ರ ಸತ್ಯ. ಹೌದು SSF ನ ಬ್ಲಡ್ ಸೈಬೇೂ 99 ಬ್ಲಡ್ ಕ್ಯಾಂಪ್ ನಲ್ಲಿ ಈ ತನಕ 7000 ಕ್ಕಿಂತಲೂ ಅಧಿಕ ಯೂನಿಟ್ ರಕ್ತ ದಾನ ಮಾಡಿದ್ದು, ನಾಳೆ (ಆ.18) ಮಂಗಳೂರಿನ ಟೌನ್ ಹಾಲ್ ನಲ್ಲಿ ತನ್ನ 100 ನೇ ರಕ್ತದಾನ ಶಿಬಿರವನ್ನು ಸಂಘಟಿಸುತ್ತಿದೆ. ಅಂದಹಾಗೆ, SSF ದೇರಳಕಟ್ಟೆ ಸೆಕ್ಟರ್ ಇಲ್ಲಿ ಒಂದು ವಿಶೇಷ ಘಟಕ. ಕಾರಣ, ಈ ಎಲ್ಲಾ ಕ್ಯಾಂಪ್ ಗಳಲ್ಲಿ ಅತ್ಯಂತ ಕಡಿಮೆ ರಕ್ತ ಸಂಗ್ರಹಿಸಿದ ಘಟಕ ಯಾವುದೆಂದರೆ ಅದು ದೇರಳಕಟ್ಟೆ ಸೆಕ್ಟರ್ ! ಇನ್ನು ಅತ್ಯಂತ ಹೆಚ್ಚು ರಕ್ತ ಸಂಗ್ರಹಿಸಿದ ಘಟಕ ಅದೂ ದೇರಳಕಟ್ಟೆ ಸೆಕ್ಟರ್ ! ಇದೇನಂದರೆ, ಆ ಘಟಕ ಈ ಮೊದಲು ನಡೆಸಿದ್ದ ಕ್ಯಾಂಪ್ ನಲ್ಲಿ ಕೇವಲ 18 ಯುನಿಟ್ ಮಾತ್ರ ಸಂಗ್ರಹಿಸಿ ತುಂಬಾ ನೊಂದು ಕೊಂಡಿತ್ತು ಮಾತ್ರವಲ್ಲ ಹಲವು ಕಿರಿಕಿರಿಯನ್ನೂ ಕೇಳಿಸಬೇಕಾಯಿತು ಇದನ್ನು ಸಹಿಸಿಯೂ ಕುಗ್ಗದೆ ತನ್ನ ಆತ್...

ವಿಶಾಲ ಮನಸ್ಸಿನ ಮೇರು ವ್ಯಕ್ತಿ ಅಬ್ದುಲ್ಲ ಹಾಜಿ

-------------------------------------- ವಿಶಾಲ ಮನಸ್ಸಿನ ಮೇರು ವ್ಯಕ್ತಿ ಅಬ್ದುಲ್ಲ ಹಾಜಿ --------------------------------------- 📝 *ಶರೀಫ್ ಎ.ಪಿ. ಹೊಸತೋಟ* *8105914587* 🍃🍃🍃🍃🍃🍃🍃🍃🍃🍃🍃   ಭೀಕರ ಪ್ರವಾಹಕ್ಕೆ ಸಿಲುಕಿ ಮನೆ ಮಠಗಳನ್ನು ಕಳೆದು  ಬೀದಿಪಾಲಾಗಿರುವ ನೂರಾರು ಕುಟುಂಬಗಳು ತಂಗಲು‌ ಒಂದು ಆಶ್ರಯವಿಲ್ಲದೆ ಕಂಗಾಲಾದಾಗ ಅವರಿಗೆ ವಸತಿ‌ ನಿರ್ಮಿಸಲು ಎರಡು ಎಕರೆ ಭೂಮಿ ದಾನ ಮಾಡಿದ ಅಬ್ದುಲ್ಲ ಹಾಜಿ ನಿಜಕ್ಕೂ ಗ್ರೇಟ್..  ಎರಡು ಎಕರೆ ಭೂಮಿ ನೀಡಿದ ಆ ಮನಸ್ಸು ಸಾವಿರ ಎಕರೆಗಳಷ್ಟು ವಿಶಾಲವಾದದ್ದು...  ಈ ಕಾಲದಲ್ಲೂ‌ ಇಂತಹ ಉದಾರ ಮನೋಭಾವದ ಜನರಿದ್ದಾರಾ ಎಂದೆನಿಸಿತು..ಕಾರಣ  ಇವರಿಗೆ ಆ ಜಾಗ ಕೊಟ್ಟು ಮುಂದಿನ ಚುನಾವಣೆಯಲ್ಲಿ ಮತ ಕೇಳಬೇಕಾಗಿಲ್ಲ... ಸೀಟು ಪಡೆಯುವ ಉದ್ದೇಶವೂ ಇಲ್ಲ.. ಹೊರತು ವಸತಿ ಕಳೆದುಕೊಂಡು ಬೀದಿಪಾಲಾದ  ನಿರಾಶ್ರಿತರಿಗೆ ಸಿಗುವ ಸಂತೋಷವನ್ನು ಮಾತ್ರ ಮನಸ್ಸಿನಲ್ಲಿ ಕಂಡು ಇಂತಹ ಕೆಲಸವನ್ನು ಮಾಡುತ್ತಾರೆ.. ಇದರ ಮೂಲಕ ಪರಲೋಕ ವಿಜಯ ಪಡೆಯುವುದೇ‌ ಅವರ ಮೂಲ ಧ್ಯೇಯ. ಅಲ್ಲಾಹು ತ‌ಆಲ ಅವರಿಗೆ ಸ್ವರ್ಗದಲ್ಲೊಂದು ಭವನ‌ ನೀಡಿ ಅನುಗ್ರಹಿಸಲಿ -ಆಮೀನ್ *ಕೋಟಿಗಟ್ಟಲೆ ಖಾಸಗಿ ಸೊತ್ತು ಸಂಪಾದಿಸಿ ಸರ್ಕಾರದ ಖಜಾನೆಯಿಂದ ಅರ್ಹ ಪರಿಹಾರ ಒದಗಿಸಿಕೊಡಲು ಆಲಸ್ಯತನ ತೋರುವ,ಹಿಂದೇಟು ಹಾಕುವ  ರಾಜಕಾರಣಿಗಳಿಗೆ  ಕೊಂಡಂಗೇ...

ದುಲ್ ಹಜ್ ತಿಂಗಳ ಚಂದ್ರದರ್ಶನ

ದುಲ್ ಹಜ್ ತಿಂಗಳ ಚಂದ್ರದರ್ಶನ ಆಗಸ್ಟ್ 12 ಸೋಮವಾರ ಈದುಲ್ ಅದ್'ಹಾ ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ ಇಂದು (ಶುಕ್ರವಾರ ಅಸ್ತ ಶನಿವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 03 ಶನಿವಾರ ( ನಾಳೆ ) ದುಲ್ ಹಜ್ ತಿಂಗಳ ಚಾಂದ್ ಒಂದು ಆಗಿದ್ದು, ಆಗಸ್ಟ್ 11 ರಂದು ಅರಫಾ ಉಪವಾಸ ಮತ್ತು ಆಗಸ್ಟ್ 12 ಸೋಮವಾರ ಈದುಲ್ ಅದ್'ಹಾ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಘೋಷಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 03-08-2019 is first of Dul Haj and Eid ul Adha will be celebrated on August 12 - 2019 Monday