🎓🎓 ಮಾಸ್ಟರ್ ಮೈಂಡ್ 🎓🎓 ಅನುಗ್ರಹಗಳಿಗೆ ಸ್ತುತಿ ನಿನ್ನೆ(19/11/2019)ನಾನು ಮತ್ತು ನನ್ನೊಬ್ಬ ಸಹೇೂದರನೊಂದಿಗೆ ಉಳ್ಳಾಲ ದ ಒಂದು ಬಡ ರೇೂಗಿ ಮನೆಗೆ ರಿಲೀಫ್ ಹಣವೊಂದು ನೀಡಲು ಹೇೂಗಿದ್ದೆವು. ಅವರು ಕಳೆದ ಒಂಭತ್ತು ತಿಂಗಳಿನಿಂದ ಎರಡೂ ಕಿಡ್ನಿ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡುತ್ತಿರುವುದಾಗಿ ಹೇಳಿದರು.ಅದಕ್ಕಾಗಿ ಅವರ ಕೈ ಒಳಗೆ ಮೆಷಿನ್ ಕೂಡಾ ಫಿಕ್ಸ್ ಮಾಡಲಾಗಿತ್ತು. ಸ್ವಲ್ಪ ಸಮಯ ಅವರೊಂದಿಗೆ ಕಳೆದವು. ಅವರೊಂದಿಗಿನ ಒಂದರ್ಧ ಗಂಟೆಗಳ ಮಾತುಕತೆ ನಿಜಕ್ಕೂ ನಮ್ಮನ್ನು ಅಲ್ಲಾಹನು ನಮಗೆ ನೀಡಿರುವ ಅನುಗ್ರಹಗಳ ಕುರಿತು ಗಾಢ ಚಿಂತಿಸುವಂತೆ ಮಾಡಿತ್ತು. ಅವರು ಈಗ ವಾರಕ್ಕೆ ಡಯಾಲಿಸೀಸ್ ಮತ್ತು ಮೆಡಿಷಿನ್ ಗೆ ವಾರಕ್ಕೆ 2000/- ವ್ಯಯ ಮಾಡುತ್ತಿದ್ದಾರೆ. ಅವರಿಗೆ ಬದಲಿ ಕಿಡ್ನಿ ಅಳವಡಿಸಲು ಅವಕಾಶವಿದೆ ಆದರೆ, ಕಿಡ್ನಿ ಖರೀದಿಗೆ 30 ಲಕ್ಷ ಮತ್ತು ಅಳಡಿಸಲು 30 ಲಕ್ಷ ಒಟ್ಟು 60 + ಲಕ್ಷ ಖರ್ಚು ತಗಲುತ್ತೆ ! ಎಂದು ಅವರು ಹೇಳಿದರು. ಸುಬ್ಹಾನಲ್ಲಾಹ್..... ಇಷ್ಟು ಬೆಲೆ ಕಿಡ್ನಿಗೆ ಮಾತ್ರ ! ಎಂತಹ ಅದ್ಭುತ ಅಲ್ಲಾಹನು ನಮಗೆ ನೀಡಿದ ಅನುಗ್ರಹ. ياابن ادم اعجبك العجب وانت اعجب مما أعجبك ಓ ಮನುಷ್ಯ ಹಲವಾರು ಅದ್ಬುತಗಳನ್ನು ಕಂಡು ನೀನು ಆಶ್ಚರ್ಯಗೊಂಡಿರುವೆ, ಆದರೆ ಅವೆಲ್ಲಕ್ಕಿಂತಲೂ ದೊಡ್ಡ ಅದ್ಬುತ ನೀನಾಗಿರು...