ವಿಶ್ವ ವಿಖ್ಯಾತ ವಿದ್ವಾಂಸ ಸುಲ್ತಾನುಲ್ ಉಲಮಾರ ಶಿಷ್ಯಂದಿರಾದ ಕರ್ನಾಟಕದ ಸಖಾಫಿ ವಿದ್ವಾಂಸರ ಬೃಹತ್ ಸಂಗಮ ಹಾಗು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ದಿಂದ ಸಖಾಫಿ ಪದವಿಯನ್ನು ಪಡೆದು ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೂತನ ಸಖಾಫಿ ವಿದ್ವಾಂಸರಿಗೆ ಅಭಿನಂದನಾ ಸಮಾರಂಭವು ಕರ್ನಾಟಕ ಸಖಾಫಿ ಕೌನ್ಸಿಲ್ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ವಹಿಸಿದರು. ಎಸ್ ವೈ ಎಸ್ ರಾಜ್ಯ ನಾಯಕ ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ದುವಾ ನೆರವೇರಿಸಿದರು. ಎಸ್. ಎಂ. ಎ. ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ತಂಙಳ್ ಉಜಿರೆ ಮಲ್ ಜಅ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಖಾಫಿ ಕೌನ್ಸಿಲ್ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರಾದ ವಳ್ಳಿಯಾಡ್ ಮುಹಮ್ಮದ್ ಅಲಿ ಸಖಾಫಿ ಕೇರಳ ಮುಖ್ಯ ಪ್ರಭಾಷಣ ನಡೆಸಿದರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ ಹಾಗು ಎಸ್ ವೈ ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರ...