Skip to main content

Posts

Showing posts from July, 2019

ನಾರಿಯತ್ ಸ್ವಲಾತ್ ಮಜ್ಲಿಸ್ ಮತ್ತು ಹಜ್ ಬೀಳ್ಕೊಡುಗೆ ಸಮಾರಂಭ

ಬದ್ರಿಯಾ ಮದ್ರಸ ಸುಂದರ್ ಭಾಗ್ ಉಳ್ಳಾಲ ಇದರ ವತಿಯಿಂದ ನಾರಿಯತ್ ಸ್ವಲಾತ್ ಮಜ್ಲಿಸ್ ಮತ್ತು ಹಜ್ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಪವಿತ್ರ ಹಜ್ ಯಾತ್ರೆ ಹೊರಟ ಸುಂದರಿಭಾಗ್ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಉಸ್ತಾದರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರಸ್ತುತ ಸಮಾರಂಭದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಮುಖವಾಣಿ ಸುನ್ನತ್ ಮಾಸಿಕದ ಸದಸ್ಯತನ ಚಂದಾ ಅಭಿಯಾನ ನಡೆಯಿತು.  ಕಾರ್ಯಕ್ರಮದಲ್ಲಿ ಮದ್ರಸ ಸದರ್ ಉಸ್ತಾದ್ ಕೆ.ಎಂ.ಮುಹ್ಯುದ್ದೀನ್ ಮದನಿ  ಕಟ್ಟತ್ತಿಲ. ವಿ.ಎ ಮುಹಮ್ಮದ್ ಸಖಾಫಿ, ನಾಸಿರ್ ಲತೀಫಿ, ಸುಂದರಿಬಾಗ್ ಮಸೀದಿ ಅಧ್ಯಕ್ಷ ಆಸಿಫ್, ಕೋಶಾಧಿಕಾರಿ ಸೀದಿಯಬ್ಬ ಇಸ್ಮಾಯಿಲ್, ಯೂಸುಫ್ ಮದನಿ, ಖಾಲಿದ್ ಗುಲಾಂ, ಅಶ್ರಫ್,ಅಬ್ದುಲ್ಲ ಹಾಗೂ ಆಡಳಿತ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.