Skip to main content

Posts

Showing posts from March, 2017

ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ  ಉನೈಸ ಬುರೈದಾ   ಘಟಕ ಅಸ್ತಿತ್ವಕ್ಕೆ                     ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ  ಪ್ರ.ಕಾರ್ಯದರ್ಶಿಯಾಗಿ TK  ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ

*ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ  ಉನೈಸ ಬುರೈದಾ   ಘಟಕ ಅಸ್ತಿತ್ವಕ್ಕೆ                     ಅಧ್ಯಕ್ಷರಾಗಿ ಅಬುಬಕ್ಕರ್ ಕಡೇಶ್ವಾಲ್ಯ ಕೆಮ್ಮನ್ ಕಜೆ  ಪ್ರ.ಕಾರ್ಯದರ್ಶಿಯಾಗಿ TK  ಇಸ್ಮಾಯಿಲ್ ಮುಸ್ಲಿಯಾರ್ ನೀರಕಟ್ಟೆ ವಲಾಳ್ ಆಯ್ಕೆ* ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ತೆ ಮೂಡಡ್ಕ ಇದರ ಸೌದಿ ಅರೇಬಿಯಾ ಪರ್ಯಟನೆ ಭಾಗವಾಗಿ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡಾವು ರವರ  ಉಪಸ್ತಿತಿಯಲ್ಲಿ    ಉನೈಸ ದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು ಕಾರ್ಯಕ್ರಮ ವನ್ನು ಉದ್ದೇಶಿಸಿ  ಮಾತನಾಡಿದ ಸಖಾಫಿಯವರು ಮರ್ಹೂಮ್ ಟಿ.ಎಚ್ ಉಸ್ತಾದರು ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲು ಸ್ಥಾಪಿಸಿದ ಸಂಸ್ಥೆ, ಅವರ ಮರಣದ ನಂತರ ಪ್ರಚಾರ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಈಗಾಗಲೇ 650 ವಿಧ್ಯಾರ್ಥಿಗಳು ಧಾರ್ಮಿಕ ಮತ್ತು ಭೌತಿಕವಾಗಿ ವಿದ್ಯೆ ಪಡೆಯುತ್ತಿದ್ದಾರೆ, ಇದರ ಉನ್ನತಿಗೆ ಬೇಕಾಗಿ ಇನ್ನಷ್ಟು ಶ್ರಮಿಸಬೇಕು ಎಂದರು.  ಬಳಿಕ ಕೆ.ಸಿ.ಎಫ್ ಉನೈಸ ಸೆಕ್ಟರ್  ಸದಸ್ಯ  ಅಬೂಬಕ್ಕರ್ ಕಡೇಶ್ವಾಲ್ಯ  ಕೆಮ್ಮನ್ ಕಜೆ   ಶುಭ  ಹಾರೈಸಿ ಮಾತನಾಡಿದರು ನೂತನ ಪದಾಧಿಕಾರಿಗಳು  ಗೌರವ ಅಧ್ಯಕ್ಷರು-ಶಾಫಿ ಉಸ್ತಾದ್ ವಲವೂರು ಅಧ್ಯಕ್ಷರು- ಅಬೂಬಕ್ಕರ್ ಕಡೇಶ್ವಾಲ್ಯ ಪ್ರ.ಕಾರ್ಯದರ್ಶಿ-TK  ಇಸ್ಮಾಯಿಲ...

ವಿವಾಹ ಆಮಂತ್ರಣ

🌷🌷  *ವಿವಾಹ ಆಮಂತ್ರಣ*  🌷🌷 *ಪರಮ ಕಾರುಣಿಕನೂ ಕರುಣಾ ನಿಧಿಯೂ ಆದ ಅಲ್ಲಾಹನ ನಾಮದಿಂದ* 🌷🌷🌷🌷🌷🌷🌷🌷🌷🌷🌷 ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಸಕ್ರಿಯ ಕಾರ್ಯಕರ್ತ ಝಿಯಾದ್ ಹಂಝ ಹುಸೈನ್ ಇವರ ವಿವಾಹವು ಎಪ್ರಿಲ್ - 02 - 2017 ಆದಿತ್ಯವಾರ 11 ಗಂಟೆಗೆ ಸರಿಯಾಗಿ ಕೋಟೆಕಾರ್ ಬೀರಿಯ ಮ್ಯಾರೇಜ್ ಮಹಲ್ ಹಾಲಿನಲ್ಲಿ ತೊಕ್ಕೋಟು ಹಿದಾಯತ್ ನಗರದ ಝೊಹರಾಳೊಂದಿಗೆ ನಡೆಯಲಿರುವುದು 🌷🌷🌷🌷🌷🌷🌷🌷🌷🌷🌷 *ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹ್ರದಯಂಗಮ ಆಮಂತ್ರಣ* ತಾವುಗಳು, ತಮ್ಮ ಕುಟುಂಬ ಸಮೇತರಾಗಿ ಝಿಯಾದ್ ಹಂಝರವರ ವಿವಾಹ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಚಂದಗಾಣಿಸಬೇಕಾಗಿ ವಿನಂತಿ. 🌷🌷🌷🌷🌷🌷🌷🌷🌷🌷🌷 *SSF MELANGADI UNIT*

KCF ಕುವೈಟ್ : ಪುನರ್ಜೀವನ ; ಸಂಘಟನಾ ತರಬೇತಿ ಶಿಬಿರ

KCF ಕುವೈಟ್ : ಪುನರ್ಜೀವನ ; ಸಂಘಟನಾ ತರಬೇತಿ ಶಿಬಿರ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದಿಂದ ದಿನಾಂಕ 24/05/2017 ಶುಕ್ರವಾರ ಜುಮಾ ನಮಾಝ್ ನ ನಂತರ ಫಾಹಿಲ್  ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು. ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಉದ್ಘಾಟನೆಯನ್ನು ನೆರವೇರಿಸಿದರು. ದೀನಿ ದಅ-ವಾ (ಪ್ರಬೋದನೆ)ಕೆಡುಕನ್ನು ವಿರೋದಿಸಿ ಒಳಿತಿನ ಕಡೆ ಮುನ್ನಡೆಸು ಎಂಬ ಸುಂದರವಾದ ಧ್ಯೇಯ ವಾಕ್ಯವು ವಿಶ್ವದೆಲ್ಲೆಡೆ ಕೇಳುತ್ತಳೇ ಇದೆ, ಆದರೆ ಅದರ ಪರಿಪೂರ್ಣ ಅರ್ಥ ಮನದಟ್ಟು ಮಾಡಿಕೊಟ್ಟದು  ನಿನ್ನೆ ನೆಡೆದ ಕೆಸಿಎಫ್ ರಾಷ್ಟ್ರೀಯ ಸಮಿತಿ  ನಡೆಸಿದಂತಹ *ಜೀವನ ನಾಡಿಗಾಗಿ ನಾಳೆಗಾಗಿ ಎಂಬ ಸಂಘಟನಾ ತರಬೇತಿ ಶಿಬಿರ* ಇದರ ನೇತ್ರತ್ವ ವಹಿಸಿ ಉತ್ತಮ ರೀತಿಯಲ್ಲಿ ತರಗತಿ ನಡೆಸಿಕೊಟ್ಟಂತಹ *ICF ರಾಷ್ಟ್ರೀಯ ನಾಯಕರಾದ ಮುಹಮ್ಮದ್ ಅಲೀ ಸಖಾಫಿ ಉಸ್ತಾದ್* ಯವರ ಅರ್ಥಘರ್ಬಿತವಾದ ಮಾತುಗಳ ಮೂಲಕ ತಿಳಿಯಲು ಸಾದ್ಯವಾಯ್ತು.  ಸ್ವತಃ ನಾವು ಒಳಿತಿನೊಂದಿಗೆ ದರ್ಮನಿಷ್ಠನಾಗಿ ದಿನ ನಿತ್ಯಯದ ಕಡ್ಡಾಯ ಕರ್ಮ ಝಿಕ್ರ್ ಸ್ವಲಾತ್ ಮಜ್ಲಿಸ್ ನಿಂದ ಪರಲೋಕ ವಿಜಯಿಗಳಾಗಲು ಸಾದ್ಯವೆ,?   ಏನೂ ಅರಿಯದ ಈ ಲೋಕವೇ ಸ್ವರ್ಗಎಂದು ಕೆಡುಕಿನೊಂದಿಗೆ ಜೀವಿಸುವಂತಹ ಈಗಿನ ಯುವ ಸಮೂಹಕ್ಕೆ ಹೇಗೆ ಒಳಿತನ್ನು (ದೀನ...

ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವಾರ್ಷಿಕ ಮಹಾಸಭೆ

ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವಾರ್ಷಿಕ ಮಹಾಸಭೆ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜಿದ್ದಾ ಝೋನಲ್ ಇದರ ಅಧೀನದಲ್ಲಿರುವ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 24/3/2017 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 12:15ಕ್ಕೆ ಮಾಸಿಕ ಸ್ವಲಾತ್ ಮಜ್ಲಿಸ್ ನೊಂದಿಗೆ ಕುದೈ ಏಷ್ಯನ್ ಪಾಲಿ ಕ್ಲಿನಿಕ್ ಹಾಲ್ ನಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ವಹಿಸಿದ್ದರು.  ಈ ಸಂದರ್ಭ ಸುಲೈಮಾನ್ ಪಾದೆಕಲ್ಲುರವರ ವತಿಯಿಂದ ಉಮ್ರಾ ಮತ್ತು ಹಜ್ಜಾಜ್ಗಳ ಸೇವೆಗೆ ಬೇಕಾಗಿ ಸೆಕ್ಟರ್ ಸಮಿತಿಗೆ ಗಾಲಿಕುರ್ಚಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು  ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮ್ಯಾನೇಜರ್ ಬಹು/ ಅಶ್ರಫ್ ಸಖಾಫಿ ಮಾಡಾವು ಸಭೆಯನ್ನು ಉಧ್ಘಾಟಿಸುತ್ತಾ ಕೆ.ಸಿ.ಎಫ್ ಸಂಘಟನೆ ಹಲವಾರು ದೀನೀ ಬೋಧನೆ ನೀಡುತ್ತಾ ,ಸಾಂತ್ವನ ಚಟುವಟಿಕೆಗಳಲ್ಲಿ ನಿರತರಾಗಿ, ಸಾಮಾಜಿಕ,ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಮುನ್ನೇರುತ್ತಾ ಅರಬ್ ರಾಷ್ಟ್ರಗಳಲ್ಲೆಡೆ ಪಸರಿಸಿಕೊಂಡು ಮಲೇಶ್ಯಾ,ಲಂಡನ್ ಗಳಲ್ಲೂ ಬೇರು ಹಬ್ಬಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಸಂಘಟನಾತ್ಮಕ ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಪ್ರವಾದಿ ಮಹಮ್ಮದ್ ರವರ ಆದರ್ಶ ವ್ಯಕ್ತಿತ್ವ, ಮಾನವೀಯ ಮೌಲ್ಯಗಳು ಇಡೀ ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು. ಮುಖ್ಯ ಅತಿಥಿ...

ಎಂಟು ತಿಂಗಳೊಳಗೆ ಕುರಾನ್ ಕಂಠಪಾಠ ಮಾಡಿದ ಹಾಫಿಳ್ ಮುಹಮ್ಮದ್ ರಾಫಿಗೆ ಸನ್ಮಾನ

ಪ್ರತಿಷ್ಠಿತ ವಿದ್ಯಾ ಸಮುಚ್ಛಯ ಕಾಸರಗೋಡಿನ ಜಾಮಿಅಃ ಸಅದಿಯ್ಯಃ ಇದರ ಹಿಫ್ಝುಲ್ ಕುರಾನ್ ಕಾಲೇಜಿನಲ್ಲಿ ಕೇವಲ ಎಂಟು ತಿಂಗಳುಗಳಲ್ಲಿ ಸಂಪೂರ್ಣ ಕುರಾನ್ ಕಂಠಪಾಠ ಮಾಡಿ ಅದ್ಭುತ ಸಾಧನೆಗೈದ ದಾರುಲ್ ಅಶ್ಅರಿಯ್ಯಃ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ರಾಫಿ ಯವರನ್ನು ದಾರುಲ್ ಅಶ್ಅರಿಯ್ಯಃ ಇಂಗ್ಲಿಷ್ ಮೀಡಿಯಂ ಸ್ಕೂಲಿನ 2015-16 ನೇ ಸಾಲಿನ ಶಿಕ್ಷಕರ ವತಿಯಿಂದ ಸ್ಮರಣಿಕೆ ನೀಡಿ ಶಾಲುಹೊದಿಸಿ ಸನ್ಮಾನಿಸಲಾಯಿತು. ಶಿಕ್ಷಕರಾದ ಮನಾಝಿರ್ ಮುಡಿಪು, ಮುಸ್ತಫ ಬೋಳಂತೂರು, ಉಮರ್ ಅಮ್ಜದಿ ಕುಕ್ಕಿಲ ಹಾಗು ರಫೀಕ್ ಮಂಚಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ವಿಶೇಷ ಸಾಧನೆಗೈದ ತಮ್ಮ ಶಿಷ್ಯನಿಗೆ ಶುಭಹಾರೈಸಿದರು.

ಕೇವಲ 8 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಜಾಮಿಅಃ ಸಅದಿಯ್ಯಾದ ಹಿಫ್ಲ್ ಕಾಲೇಜಿನ 13 ರ ಬಾಲಕ!!

ಕೇವಲ 8 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ 13 ರ ಬಾಲಕ!! ಆಟ, ಸಂಗೀತದ ಹಿಂದೆ ಬಿದ್ದು ಜೀವನ ವ್ಯರ್ಥಗೊಳಿಸುವ, ಲೌಕಿಕ ಪದವಿ ಗಳಿಕೆಗಾಗಿ ಧಾರ್ಮಿಕ ವಿದ್ಯೆಯನ್ನು ಕಡೆಗಣಿಸುವ ಎಲ್ಲಾ ಜನರ ಕಣ್ಣು ತೆರೆಸುವಂತಿದೆ ಮುಹಮ್ಮದ್ ರಾಫಿಯ ಸಾಧನೆ. ತನ್ನ ಹದಿಮೂರನೇ ಪ್ರಾಯದಲ್ಲಿ, ಅದೂ ಕೇವಲ 8 ತಿಂಗಳಲ್ಲಿ ಕುರ್ ಆನ್ ಸಂಪೂರ್ಣ ಕಂಠಪಾಠ ಮಾಡಿರುವ ಈತನ ಸಾಧನೆ ಸಣ್ಣದೇನಲ್ಲ..! ದುಬೈ ಕೆ.ಸಿ.ಎಫ್ ನ ಸಕ್ರಿಯ ಕಾರ್ಯಕರ್ತ ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರುರವರ ಸಹೋದರ ಉಮರ್ ಹಾಗೂ ಕನ್ಯಾನ ಚೆಡವು ಶಾಫಿ ಸಅದಿಯವರ ಸಹೋದರಿ ಜಮೀಲಾ ದಂಪತಿಗಳ ಪುತ್ರನಾದ ಈತ  ಜಾಮಿಅಃ  ಸ ಅದಿಯಾ ಅರಬಿಯಾದ ಹಿಪ್ಲ್ ಕಾಲೇಜ್ ನ ವಿದ್ಯಾರ್ಥಿಯಾಗಿದ್ದಾನೆ. ಸುನ್ನೀವಾಣಿ ಹಾಗೂ ಸುನ್ನತ್ ಮಾಸಪತ್ರಿಕೆಯ ಸಂಪಾದಕರಾದ ಬಿ.ಕೆ ಯೂನುಸ್ ಇಮ್ದಾದಿ ಮಂಗಳಪದವು ರವರ ಫ್ಯಾಮಿಲಿಯ ಈ ಬಾಲಕನ ಸಾಧನೆಯಿಂದ ಇಡೀ ಕುಟುಂಬವೇ ಇಂದು ಸಂತಸದಲ್ಲಿದೆ. ಸ್ವ ಇಚ್ಛೆಯಿಂದ ಕುರ್ ಆನ್ ಕಂಠಪಾಠ ಕಲಿಯಲು ಹೊರಟ ಮುಹಮ್ಮದ್ ರಾಫಿಯ ಸಾಧನೆಯನ್ನು ಕಂಡು ಸ್ವತಃ ಉಸ್ತಾದರೇ ನಿಬ್ಬೆರಗಾಗಿದ್ದಾರೆ.! ಇಂದು ಬೆಳಗ್ಗೆ ಸಅದಿಯಾದಲ್ಲಿ ನಡೆದ ಕುರ್ ಆನ್ ಖತಂ ಒಪ್ಪಿಸುವ ಕಾರ್ಯಕ್ರಮದಲ್ಲಿ ಆತನಿಗೆ ಕುರ್ ಆನ್ ಗ್ರಂಥ ನೀಡುವ ಮೂಲಕ ಉಸ್ತಾದರು ಆಶೀರ್ವದಿಸಿದರು. "ಕುರ್ ಆನ್ ಕಲಿತು ಕಲಿಸುವವನು ನಿಮ್ಮ ಪೈಕಿ ಉತ್ತಮನು" ಎಂಬ ಪ್ರವಾದಿ ವಚನದಂತೆ ಕುರ್ ಆನ್ ಕಲಿಯಲು ಹೊರಟು, ಅತಿ ವೇಗವಾಗಿ ಕುರ್ ಆನ...

ಇಹ್ಸಾನ್’ ಅಧ್ಯಕ್ಷರಾಗಿ ಶಾಫಿ ಸಅದಿ ಆಯ್ಕೆ...10-03-2017

ಇಹ್ಸಾನ್’ ಅಧ್ಯಕ್ಷರಾಗಿ ಶಾಫಿ ಸಅದಿ ಆಯ್ಕೆ.. ದಾವಣಗೆರೆ : ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ನ ಅಧೀನದಲ್ಲಿ ಕಳೆದ 10 ವರ್ಷಗಳಿಂದ  ಮಧ್ಯ ಮುಂಬೈ, ಹೈದರಾಬಾದ್,ಕರ್ನಾಟಕ ಮುಂತಾದ ಕಡೆಗಳಲ್ಲಿ  ಕ್ರಾಂತಿಕಾರಿ ಹ...

ನವಾಝ್ ಸಖಾಫಿ ಅಲ್-ಅಮ್ಜದಿ ಉಳ್ಳಾಲ.

ನವಾಝ್ ಸಖಾಫಿ ಅಲ್-ಅಮ್ಜದಿ ಉಳ್ಳಾಲ. ಬಹುಶಃ ಈ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಉಳ್ಳಾಲ ವ್ಯಾಪ್ತಿಯ ಸಂಘಟನಾ ಕಾರ್ಯಶೀಲತೆಗೊಂದು ಪರ್ಯಾಯ ಪದ. ಅವರ ಚತುರತೆ, ಬರಹ, ಗುಣ, ಸ್ಪಂದನಾ ಮನೋಭಾವ ಎಲ್ಲವೂ ಸೂ...