Skip to main content

Posts

Showing posts from March, 2023

ಮುತಅಲ್ಲಿಮರಿಗೊಂದು ಸುವರ್ಣಾವಕಾಶ. ಸಿರಾಜುಲ್ ಹುದಾ ದರ್ಸ್ ಉಜಿರೆ ಪ್ರವೇಶಾತಿ ಆರಂಭಗೊಂಡಿದೆ.

ಮುತಅಲ್ಲಿಮರಿಗೊಂದು ಸುವರ್ಣಾವಕಾಶ. ಸಿರಾಜುಲ್ ಹುದಾ ದರ್ಸ್ ಉಜಿರೆ ಪ್ರವೇಶಾತಿ ಆರಂಭಗೊಂಡಿದೆ. ಧಾರ್ಮಿಕ, ಲೌಕಿಕ ವಿಜ್ಞಾನ ದಾಹಿಗಳಿಗೆ ಅತ್ಯುತ್ತಮ ಶಿಕ್ಷಣಕ್ಕೆ ಸುಲಭ ಸಾಧ್ಯವಾದ ಸ್ಥಳ. ತಫ್ಸೀರ್, ಹದೀಸ್, ಫಿಕ್ಹ್, ತಸವ್ವುಫ್, ಚರಿತ್ರೆ, ನಹ್ವ್ ಗಳ ಸಮಗ್ರ ಅಧ್ಯಯನ. ಕುರ್ ಆನ್ ಪಾರಾಯಣ ರೀತಿ ಹಾಗು ಪಾರಾಯಣ ಶಾಸ್ತ್ರ ( ತಜ್ವೀದ್ ) ಗಳ ತರಗತಿ. ಡಿಗ್ರಿ ಕಲಿಯಲು ಅವಕಾಶ ಮತ್ತು  ಸಕಲ ವ್ಯವಸ್ಥೆ ಇರುವ ಸ್ಥಳ. ಭಾಷಾ ಕಲಿಕೆ, ಬರಹ, ಭಾಷಣಾ ತರಬೇತಿ. ವ್ಯಕ್ತಿತ್ವ ವಿಕಸನಾ ತರಗತಿ ಹಿಫ್ಲ್ ಕಲಿಯಲು ಮತ್ತು ಹಿಫ್ಲ್ ದೌರಃ (ಪುನರಾವರ್ತನೆ) ಮಾಡಲು ಸೌಕರ್ಯ. ವಾರಕ್ಕೊಮ್ಮೆ ಭಾಷಣಾ ಪರಿಶೀಲನೆ. ಬುರ್ದಾ ಆಲಾಪನಾ ರೀತಿ ಹಾಗು ವಿವರಣಾ ತರಗತಿ. ದ.ಕ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಆರೋಗ್ಯಕರ ತಂಪಾದ ಪ್ರತಿಷ್ಠಿತ ಊರು. ಊಟ, ವಸತಿ ಸಂಪೂರ್ಣ ಉಚಿತ. ಪರಿಣತ ಉಸ್ತಾದರ ಸಾರಥ್ಯ. ಇನ್ನೇಕೆ ತಡ. ಇಹಪರ ವಿಜಯ ತಮ್ಮದಾಗಿಸಿ. ದಾಖಲಾತಿಗಾಗಿ ಸಂಪರ್ಕಿಸಿ. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ( ಮುದರ್ರಿಸ್ ) 9164502994

ನಾಳೆ (ಗುರುವಾರ) ರಂಝಾನ್ ಉಪವಾಸ ಪ್ರಾರಂಭ

ನಾಳೆ (ಗುರುವಾರ) ರಂಝಾನ್ ಉಪವಾಸ ಪ್ರಾರಂಭ ಇಂದು ( ಬುಧವಾರ ಅಸ್ತ ಗುರುವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 23 - 03 - 2023 ಗುರುವಾರದಿಂದ ( ನಾಳೆಯಿಂದ ) ರಮಳಾನ್ ಉಪವಾಸ ಪ್ರಾರಂಭವಾಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 23-03-2023 is first of Ramadan kareem.

ಉಳ್ಳಾಲ ದರ್ಗಾಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಚಾರಿಟೇಬಲ್ ಟ್ರಸ್ಟ್ ಅಧೀನದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ.

ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್(ರಿ), ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಚಾರಿಟೇಬಲ್ ಟ್ರಸ್ಟ್ ಅಧೀನದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಶಾಲೆಯ ಮುಖ್ಯೋಪಾಧ್ಯಾಯಯರಾದ  ಜನಾಬ್ ಇಮ್ತಿಯಾಝ್ ಮತ್ತು ಜನಾಬ್ ರಸೂಲ್ ಖಾನ್ ರವರು ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹನೀಫ್ ಹಾಜಿಯವರನ್ನು ಶಾಲೆಯ ಅಧ್ಯಾಪಕ ವೃಂದದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರ.ಕಾರ್ಯದರ್ಶಿ ಪಿ.ಎಸ್ ಶಿಹಾಬ್  ಸಖಾಫಿ, ಕೋಶಾಧಿಕಾರಿ ನಾಝಿಮ್, ಸದಸ್ಯರಾದ ಝೈನುದ್ದೀನ್ ಮುಕ್ಕಚ್ಚೇರಿ, ಯು.ಡಿ ಅಬ್ದುಲ್ ಹಮೀದ್ ಅಳೇಕಲ, ರಫೀಕ್ ಮಿಲ್ಲತ್ ನಗರ, ಮೊಯ್ದೀನ್ ಹಾಜಿ ಪೇಟೆ, ಅಯ್ಯೂಬ್ ಮುಕ್ಕಚ್ಚೆರಿ ಉಪಸ್ಥಿತರಿದ್ದರು.