ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್(ರಿ), ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಚಾರಿಟೇಬಲ್ ಟ್ರಸ್ಟ್ ಅಧೀನದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಯರಾದ ಜನಾಬ್ ಇಮ್ತಿಯಾಝ್ ಮತ್ತು ಜನಾಬ್ ರಸೂಲ್ ಖಾನ್ ರವರು ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹನೀಫ್ ಹಾಜಿಯವರನ್ನು ಶಾಲೆಯ ಅಧ್ಯಾಪಕ ವೃಂದದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರ.ಕಾರ್ಯದರ್ಶಿ ಪಿ.ಎಸ್ ಶಿಹಾಬ್ ಸಖಾಫಿ, ಕೋಶಾಧಿಕಾರಿ ನಾಝಿಮ್, ಸದಸ್ಯರಾದ ಝೈನುದ್ದೀನ್ ಮುಕ್ಕಚ್ಚೇರಿ, ಯು.ಡಿ ಅಬ್ದುಲ್ ಹಮೀದ್ ಅಳೇಕಲ, ರಫೀಕ್ ಮಿಲ್ಲತ್ ನಗರ, ಮೊಯ್ದೀನ್ ಹಾಜಿ ಪೇಟೆ, ಅಯ್ಯೂಬ್ ಮುಕ್ಕಚ್ಚೆರಿ ಉಪಸ್ಥಿತರಿದ್ದರು.
Comments
Post a Comment