Skip to main content

Posts

Showing posts from 2023

SჄS&SSF ಆಲಂಪಾಡಿ ಯುನಿಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಆಲಾಡಿ,ಸಜಿಪ ಮುನ್ನೂರು:SჄS&SSF ಆಲಂಪಾಡಿ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಸಮ್ಮೇಳನ ಹಾಗೂ ದಾರುಲ್ ಅಶ್ ಅರಿಯ್ಯ ಸಮ್ಮೇಳನ ಪ್ರಚಾರಾರ್ಥ ಲೇಡಿಗೋಶನ್ ಆಸ್ಪತ್ರೆಯ ಸಹಯೋಗದೊಂದಿಗೆ SSF ಬ್ಲಡ್ ಸೈಬೋ ಕರ್ನಾಟಕ ಇದರ 306 ನೇ ರಕ್ತದಾನ ಶಿಬಿರ ಸೆಪ್ಟೆಂಬರ್ 3 ಆದಿತ್ಯವಾರ ಮರ್ಹೂಂ ಜೆಪ್ಪು ಹಸನಾಕ ಕಂಪೌಂಡ್ ಆಲಾಡಿಯಲ್ಲಿ ಸ್ಥಳಿಯ ಯುನಿಟ್ SSF ಅಧ್ಯಕ್ಷರಾದ ಅಬ್ದುಲ್ ಖಾದಿರ್ ಮುಸ್ಲಿಯಾರ್ ಉದ್ದೋಟುರವರ ಅಧ್ಯಕ್ಷತೆಯಲ್ಲಿ  ನಡೆಯಿತು. ಅಕ್ಬರ್ ಅಲಿ ಮದನಿ ಸ್ವಾಗತಿಸಿದ ಸಭೆಯನ್ನು ಆಲಾಡಿ ಜುಮಾ ಮಸ್ಜಿದ್ ಖತೀಬ್ ಸಲೀಂ ಅರ್ಶದಿ ಅಲ್-ಅಸ್ಲಮಿ ಉಧ್ಘಾಟಿಸಿದರು.ದಾರುಲ್ ಅಶ್-ಅರಿಯ್ಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಮುಖ್ಯಪ್ರಭಾಷಣ ಮಾಡಿದರು. ಸಭೆಯಲ್ಲಿ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್,ಆಲಾಡಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಸಲೀಂ ಆಲಂಪಾಡಿ,ಮಲಾಯಿಬೆಟ್ಟು ಜುಮಾ ಮಸ್ಜಿದ್ ಅಧ್ಯಕ್ಷರಾದ ಯೂಸುಫ್ ಕರಂದಾಡಿ,ಕೊಳಕೆ ಜುಮಾ ಮಸ್ಜಿದ್ ಅಧ್ಯಕ್ಷರಾದ KP ಅಬ್ದುಲ್ಲಾ ಕೊಳಕೆ,ಕೊಪ್ಪಳ ಜುಮಾ ಮಸ್ಜಿದ್ ಖತೀಬರಾದ ಹಾರೀಸ್ ಹನೀಫಿ,ಕೊಳಕೆ ಜುಮಾ ಮಸ್ಜಿದ್ ಖತೀಬರಾದ ಬದ್ರುದ್ದೀನ್ ಅಹ್ಸನಿ,ಹಕೀಮಾಕ ಇಂದಿರಾ ನಗರ,SSF ಮಾಜಿ ಜಿಲ್ಲಾ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಸೆರ್ಕಳ SSF ಬಂಟ್ವಾಳ ಡಿವಿಷನ್ ಪ್ರ.ಕಾರ್ಯದರ್ಶಿ ಲುಕ್ಮಾನ್ ಮಾಸ್ಟರ್ ಕುಕ್ಕಾಜೆ ಶುಭ ಹಾರೈಸ...

ಉಳ್ಳಾಲ ರೇಂಜ್ ವತಿಯಿಂದ ಮುಅಲ್ಲಿಂ ಮೆಹರ್ಜಾನ್ ಪೋಸ್ಟರ್ ಪ್ರದರ್ಶನ

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ವತಿಯಿಂದ ಇಂದು ಆಝಾದ್ ನಗರ ಮದ್ರಸದಲ್ಲಿ ರೇಂಜ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಮುಅಲ್ಲಿಂ ಮೆಹರ್ಜಾನ್ ಸಹಿತ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು. ಬಳಿಕ ಮುಅಲ್ಲಿಂ ಮೆಹರ್ಜಾನ್ ಪ್ರತಿಭಾ ಕಾರ್ಯಕ್ರಮದ ಪೋಸ್ಟರ್ ರೇಂಜ್ ವತಿಯಿಂದ ಪ್ರದರ್ಶಿಸಲಾಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಉಳ್ಳಾಲ ಅಳೇಕಲ ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಮತ್ತು ನಜಾತ್ತುಸ್ಸಿಬಿಯಾನ್ ಮದ್ರಸ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವತಿಯಿಂದ ವಿದ್ವಾಂಸರಿಗಾಗಿ ನಡೆದ ಫತ್ಹುಲ್ ಮುಈನ್ ದರ್ಸ್ ಉದ್ಘಾಟನಾ ಕಾರ್ಯಕ್ರಮ

ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವತಿಯಿಂದ ವಿದ್ವಾಂಸರಿಗಾಗಿ ಫತ್ಹುಲ್ ಮುಈನ್ ದರ್ಸ್ ಉದ್ಘಾಟನಾ ಕಾರ್ಯಕ್ರಮ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮದನಿ ಹಾಲ್ ನಲ್ಲಿ ಜರುಗಿತು. ಸುನ್ನೀ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್  ಇದರ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಧ್ಯಕ್ಷತೆ ವಹಿಸಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ಸಅದಿ ಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಮದನಿ ದಅವಾ ಮತ್ತು ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಹ್ಮದ್ ಕುಟ್ಟಿ ಸಖಾಫಿ ಫತ್ಹುಲ್ ಮುಈನ್ ದರ್ಸಿಗೆ ಚಾಲನೆ ನೀಡಿದರು. ಶಿಹಾಬುದ್ದೀನ್ ಸಖಾಫಿ ಉಳ್ಳಾಲ  ಅಧ್ಯಕ್ಷತಾ ಭಾಷಣ ಮಾಡಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ  ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಮಾಡಿದರು.