Skip to main content

Posts

Showing posts from August, 2020

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಪ್ರಥಮ ಕಾರ್ಯಕಾರಿಣಿ ಸಭೆ

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಪ್ರಥಮ ಕಾರ್ಯಕಾರಿಣಿ ಸಭೆಯು ಉಳ್ಳಾಲ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ಯಶಸ್ವಿಯಾಗಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉಧ್ಘಾಟಿಸಿದರು. ದಾರುಲ್ ಮುಸ್ತಫಾ ಉಳ್ಳಾಲ ಘಟಕ ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಹಾಗೂ ಚಿಕ್ಕಮಗಳೂರು ಮಾಗುಂಡಿ ಖತೀಬರಾದ ಅಬೂ ಅನಸ್ ಉಸ್ತಾದ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾರುಲ್ ಮುಸ್ತಫಾ ಸಂಸ್ಥೆಯ ಸಂಸ್ಥಾಪಕರಾದ ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ಸಂಸ್ಥೆಯ ಮಾಹಿತಿ ವಿನಿಮಯ ಮಾಡಿದರು. ಸಭೆಯಲ್ಲಿ ಹಲವು ಮಹತ್ವವಾದ ಕಾರ್ಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಪ್ರಸ್ತುತ ಸಭೆಯಲ್ಲಿ ಉಳ್ಳಾಲ ಘಟಕದ ಕಾರ್ಯಾಧ್ಯಕ್ಷರಾದ ಇಸಾಕ್ ಪೇಟೆ, ಪ್ರಧಾನ ಕಾರ್ಯದರ್ಶಿ ಹೈದರ್ ಮುಕ್ಕಚ್ಚೇರಿ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಉಪಾಧ್ಯಕ್ಷರಾದ ಇಲ್ಯಾಸ್ ಕೈಕೋ, ಜೊತೆ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಮುಹಮ್ಮದ್ ಕೈಕೋ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಿತೈಷಿಗಳ...

ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಮಹಾಸಭೆ ಹಾಗು ನೂತನ ಸಮಿತಿ ರಚನೆ.

ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಮಹಾಸಭೆ ಸಂಸ್ಥೆಯ ಸಂಸ್ಥಾಪಕರಾದ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ರವರ ನೇತ್ರತ್ವದಲ್ಲಿ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸೆಂಟರಿನಲ್ಲಿ ನಡೆಯಿತು. ತಲಪಾಡಿ ಮಸೀದಿಯ ಖತೀಬರಾದ ಜಾಬಿರ್ ಫಾಳಿಲಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಸಂಸ್ಥೆಯ ಬೆಳವಣಿಗೆಯ ಕುರಿತು ಮಾಹಿತಿ ವಿನಿಮಯ ಮಾಡಿದರು. ಬಳಿಕ ತೋಕೆ ಉಸ್ತಾದರ ನೇತ್ರತ್ವದಲ್ಲಿ ಸಂಸ್ಥೆಯ ಉಳ್ಳಾಲ ಘಟಕ ಇದರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಕಾರ್ಯಾಧ್ಯಕ್ಷರಾಗಿ ಇಸಾಕ್ ಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮುಕ್ಕಚ್ಚೇರಿ, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಉಪಾಧ್ಯಕ್ಷರುಗಳಾಗಿ ಫಾರೂಕ್ ಅಬ್ಬಾಸ್ ಹಾಜಿ ಕೋಟೆಪುರ ಹಾಗು ಇಲ್ಯಾಸ್ ಕೈಕೋ, ಜೊತೆ ಕಾರ್ಯದರ್ಶಿಗಳಾಗಿ ಮುಝಮ್ಮಿಲ್ ಕೋಟೆಪುರ, ಮುಹಮ್ಮದ್ ಕೈಕೋ, ಹಮೀದ್ ಹಳೆಕೋಟೆ, ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಕೋಟೆಪುರ ಇವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ 39 ಮಂದಿಯನ್ನು ಆಯ್ಕೆ ಮಾಡಲಾಯಿತು.  

ಮುಹರ್ರಮ್ ತಿಂಗಳ ಚಂದ್ರದರ್ಶನ

ಮುಹರ್ರಮ್  ತಿಂಗಳ  ಚಂದ್ರದರ್ಶನ ಆಗಸ್ಟ್ 28, 29 ರಂದು ತಾಸೂಆ, ಆಶೂರಾ ಸುನ್ನತ್ ಉಪವಾಸ ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ ಇಂದು ( ಬುಧವಾರ ಅಸ್ತ ಗುರುವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 20 ( ನಾಳೆ ) ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು, ಆಗಸ್ಟ್ 28, 29 ರಂದು ತಾಸೂಆ, ಆಶೂರಾ  ಸುನ್ನತ್ ಉಪವಾಸ ಆಗಿರುತ್ತದೆ ಎಂದು  ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಘೋಷಿಸಿರುತ್ತಾರೆ. The Honourable Khazi of D.K District Samyuktha Jama'ath Qurrathussadath Sayyid Fazal Koyamma Thangal madani al bukhari has announced that 20-08-2020 is first of Muharram and Thaasua, Aashura will be held on August 28,29. In sha Allah