Skip to main content

Posts

Showing posts from May, 2018

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಮುಹಮ್ಮದ್ ಕೈಫ್ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಈ ಬಾರಿ ನಡೆದ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಮುಹಮ್ಮದ್ ಕೈಫ್ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಈ ಮೊದಲು 624 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದ ಕೈಫ್ ಮರು ಮೌಲ್ಯ ಮಾಪನ ನಡೆಸಿದಾಗ ರಾಜ್ಯಕ್ಕೆ ಪ್ರಥಮರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ತಂದೆ ತಾಯಿಗಳಿಬ್ಬರು ಶಿಕ್ಷಕರಾಗಿದ್ದು ಸರಕಾರಿ ಶಾಲೆಗಳಲ್ಲಿ ಬೋಧಿಸುತ್ತಾರೆ. ಮಧ್ಯಮ ವರ್ಗದ ಕೈಫ‍್ ಮುಂದೆ ಓದಿ ಐಎಎಸ್ ಅಧಿಕಾರಿಯಾಗುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ವಿಜ್ಞಾನದಲ್ಲಿ ಈ ಮೊದಲು 99 ಅಂಕ ಪಡೆದಿದ್ದ ಕೈಫ್, ಮರು ಮೌಲ್ಯಮಾಪನದಿಂದಾಗಿ 100 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮರೆನಿಸಿಕೊಂಡಿದ್ದಾರೆ.

ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೋಟು : ಬದ್ರ್ ಮೌಲೂದ್ ಮಜ್ಲಿಸ್ ಹಾಗು ಬ್ರಹತ್ ಸಾಮೂಹಿಕ ಇಫ್ತಾರ್ ಕೂಟ

_________________________________ ಅಲ್ ಅಮೀನ್ ಎಜ್ಯುಕೇಶನ್ ಟ್ರಸ್ಟ್ ತೊಕ್ಕೋಟು ಇದರ ಆಶ್ರಯದಲ್ಲಿ ಇದರ ಅಧೀನದಲ್ಲಿರುವ ತೊಕ್ಕೋಟುವಿನ ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಕೇರಳದಲ್ಲಿ ಪ್ರತ್ಯಕ್ಷವಾದ ನಿಫಾ ವೈರಸ್ ಮುಂತಾದ ಮಾರಕ ರೋಗಗಳು, ಆಫತ್ತುಗಳು ದೂರವಾಗಲು ಉಳ್ಳಾಲ ಹಾಗು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಕೂರತ್ ತಂಗಲ್ ರವರ ನಿರ್ದೇಶನದಂತೆ ಬದ್ರ್ ಮೌಲೂದ್ ಮಜ್ಲಿಸ್ ಕಲ್ಲಾಪು ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಫೈಝಿ ಮೋಙಂ ಇವರ ನೇತ್ರತ್ವದಲ್ಲಿ ನಡೆಯಿತು.ಸಯ್ಯಿದ್ ಜಲಾಲುದ್ದೀನ್ ತಂಗಲ್ ಅಳೇಕಲ ದುವಾ ನೆರವೇರಿಸಿದರು. ತದ ನಂತರ ಮಗ್ರಿಬಿಗೆ ಬ್ರಹತ್ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.             ಕಾರ್ಯಕ್ರಮದಲ್ಲಿ ಹಲವು ಉಲಮಾ, ಉಮರಾಗಳು ಸಹಿತ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.

ನಿಫಾ ವೈರಸ್ : ಶುಕ್ರವಾರ ಪ್ರಾರ್ಥನಾ ದಿನ

ಕಲ್ಲಿಕೋಟೆ : ಹೊಸ ರೀತಿಯ ವೈರಸ್ ಬಾಧೆಯಿಂದಾಗಿ ಭೀತಿಯನ್ನುಂಟು ಮಾಡುವ ರೀತಿಯಲ್ಲಿ ಜ್ವರವು ಹರಡುತ್ತಿರುವಾಗ ರೋಗ ಶಮನ ಮತ್ತು ಸಮಾಜದ ಆರೋಗ್ಯ ಸುರಕ್ಷತೆಗಾಗಿ ಶುಕ್ರವಾರ ಜುಮುಅ ಬಳಿಕ ಎಲ್ಲಾ ಮಸೀದಿಗಳಲ್ಲೂ ಪ್ರತ್ಯೇಕ ಪ್ರಾರ್ಥನೆ ಮಾಡಬೇಕಾಗಿಯೂ ರಾತ್ರಿ ತರಾವೀಹ್ ನಂತರ ವಿತ್’ರಿಯ್ಯ ಹೇಳಬೇಕಾಗಿಯೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್‍ ರವರು ವಿನಂತಿಸಿದ್ದಾರೆ.

ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೋಟು ಬದರ್ ಮೌಲೂದ್ ಹಾಗು ಬ್ರಹತ್ ಇಫ್ತಾರ್ ಮೀಟ್ ಸಮಯ : ಮೇ 25 - 2018, ಶುಕ್ರವಾರ

ಪಟ್ಲ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ

ಉಳ್ಳಾಲ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಳ್ಳಾಲದಾದ್ಯಂತವಿರುವ ಮದ್ರಸಗಳ 5, 7 ಹಾಗು 10 ನೇ ತರಗತಿಗಳ ಪಬ್ಲಿಕ್ ಪರೀಕ್ಷಾ ಫಲಿತಾಂಶ ಇಂದು (10-05-2018)  ಪ್ರಕಟಗೊಂಡಿದ್ದು,  ಎಲ್ಲಾ ಮದ್ರಸದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಪಟ್ಲ ಖುವ್ವತುಲ್ ಇಸ್ಲಾಮ್ ಮದ್ರಸದ ಏಳನೇ ಮತ್ತು ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತೀರ್ಣರಾಗಿದ್ದು ಮದ್ರಸಕ್ಕೆ 100% ಫಲಿತಾಂಶ ಬಂದಿದೆ. ಏಳನೇ ತರಗತಿಯಲ್ಲಿ ಮುಬಶ್ಶಿರ ಪ್ರಥಮ ಹಾಗು ಜಾವಿದ್ ದ್ವಿತೀಯ ರಾಂಕ್ ಪಡೆದಿದ್ದು. ಹತ್ತನೇ ತರಗತಿಯಲ್ಲಿ ಆಯಿಶ ಅಸ್ನಾ ಪ್ರಥಮ ಹಾಗು ಹಕೀಫ ದ್ವಿತೀಯ ರಾಂಕ್ ಪಡೆದಿದ್ದಾರೆ. 5 ನೇ ತರಗತಿಯಲ್ಲಿ 87% ಫಲಿತಾಂಶ ಬಂದಿದ್ದು, ಖದೀಜ ಮುಫೀದ ಪ್ರಥಮ ಹಾಗು ಮುಹಮ್ಮದ್ ಅಫ್ಝಲ್ ದ್ವಿತೀಯ ರಾಂಕ್ ತಮ್ಮದಾಗಿಸಿದ್ದಾರೆ.