ಬೆಂಗಳೂರು: ಈ ಬಾರಿ ನಡೆದ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಮುಹಮ್ಮದ್ ಕೈಫ್ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಈ ಮೊದಲು 624 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದ ಕೈಫ್ ಮರು ಮೌಲ್ಯ ಮಾಪನ ನಡೆಸಿದಾಗ ರಾಜ್ಯಕ್ಕೆ ಪ್ರಥಮರಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ತಂದೆ ತಾಯಿಗಳಿಬ್ಬರು ಶಿಕ್ಷಕರಾಗಿದ್ದು ಸರಕಾರಿ ಶಾಲೆಗಳಲ್ಲಿ ಬೋಧಿಸುತ್ತಾರೆ. ಮಧ್ಯಮ ವರ್ಗದ ಕೈಫ‍್ ಮುಂದೆ ಓದಿ ಐಎಎಸ್ ಅಧಿಕಾರಿಯಾಗುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.
ವಿಜ್ಞಾನದಲ್ಲಿ ಈ ಮೊದಲು 99 ಅಂಕ ಪಡೆದಿದ್ದ ಕೈಫ್, ಮರು ಮೌಲ್ಯಮಾಪನದಿಂದಾಗಿ 100 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮರೆನಿಸಿಕೊಂಡಿದ್ದಾರೆ.
Comments
Post a Comment