Skip to main content

Posts

Showing posts from 2022

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವತಿಯಿಂದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್ ಮತ್ತು ನಮ್ಮಿಂದ ಅಗಲಿದ ಮಹಾತ್ಮರುಗಳ ಅನುಸ್ಮರಣೆ, ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನಾ ಮಜ್ಲಿಸ್

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವತಿಯಿಂದ ಗ್ರ್ಯಾಂಡ್ ಮಾದರಿ ಮೌಲಿದ್ ಮಜ್ಲಿಸ್ ಮತ್ತು ಶೈಖ್ ಜೀಲಾನೀ ಖ.ಸಿ, ತಾಜುಲ್ ಉಲಮಾ ಖ.ಸಿ, ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ, ನೂರುಲ್ ಉಲಮಾ ಖ.ಸಿ ಸಹಿತ ನಮ್ಮಿಂದ ಅಗಲಿದ ಮಹಾತ್ಮರುಗಳ ಅನುಸ್ಮರಣೆ, ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನಾ ಮಜ್ಲಿಸ್ ಉಳ್ಳಾಲ ಆಝಾದ್ ನಗರದ ಫಾರೂಖ್ ಜುಮಾ ಮಸೀದಿಯಲ್ಲಿ ನಡೆಯಿತು. ಉಳ್ಳಾಲ ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಅಧ್ಯಕ್ಷತೆ ವಹಿಸಿದರು. ಅಳೇಕಲದ ಜಾಮಿಉಲ್ ಅಮೀನ್ ಜುಮಾ ಮಸೀದಿಯ ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ತಾಜುಲ್ ಉಲಮಾ ಖ.ಸಿ ರವರ ಕುರಿತು ಅನುಸ್ಮರಣಾ ಪ್ರಭಾಷಣ ಮಾಡಿ ದುಆ ನೆರವೇರಿಸಿದರು. ಆಝಾದ್ ನಗರ ಫಾರೂಖ್ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಮದ್ ಅಹ್ಸನಿ ಮತ್ತು ಅಳೇಕಲ ಜುಮಾ ಮಸೀದಿಯ ಸಹಾಯಕ ಇಮಾಮರಾದ ಇರ್ಫಾನ್ ಸಅದಿ ಮಾದರಿ ಮೌಲಿದ್ ಮಜ್ಲಿಸಿಗೆ ನೇತ್ರತ್ವ ನೀಡಿದರು.  ಸುಂದರಭಾಗ್ ಬದ್ರಿಯ್ಯಃ ಜುಮಾ ಮಸೀದಿಯ ಖತೀಬರಾದ ಎನ್.ಡಿ ಮದನಿ ಹಾಗು ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸದ ಮುಅಲ್ಲಿಮರಾದ ವಿ.ಎ ಸಖಾಫಿ ವಳವೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ರೇಂಜ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ರೇಂಜ್ ವ್ಯಾಪ್ತಿಯ ಮಸೀದಿಗಳ ಖತೀಬರು, ಇಮಾಮರು, ಮದ್ರಸಗಳ ಮುಖ್ಯೋಪಾಧ್ಯಾಯರು, ಅಧ್ಯ...

ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್. ಅಕ್ಟೋಬರ್ 27 ಇಂದು (ಗುರುವಾರ ) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ

ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್.  ಅಕ್ಟೋಬರ್ 27 (ಇಂದು) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ ನಡೆಯಲಿದೆ.  ಪಯ್ಯನ್ನೂರು |  ಎಟಿಕ್ಕಳಂ. ತಾಜುಲ್ ಉಲಮಾ ಒಂಬತ್ತನೇ ಉರೂಸ್ ಸಮಾರಂಭ ಇಂದಿನಿಂದ 29 ರವರೆಗೆ ನಡೆಯಲಿದೆ.  ಸಮಸ್ತ ಕೇರಳ ಜಮೀಯತುಲ್ ಉಲಮಾದ ಅಧ್ಯಕ್ಷರೂ, ಅನೇಕ ಮಹಲ್ಲುಗಳ ಖಾಝಿ ಮತ್ತು ಖ್ಯಾತ ವಿದ್ವಾಂಸರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ  ರವರ ಅಂತ್ಯ ವಿಶ್ರಮ ಸ್ಥಳವಾದ ಎಟ್ಟಿಕುಳಂನಲ್ಲಿ ನಡೆಯುವ  ಉರೂಸ್ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.  ಖ್ಯಾತ ವಿದ್ವಾಂಸರು, ಸಾದಾತುಗಳು ಮತ್ತು ನಾಯಕರು ನೇತೃತ್ವ ವಹಿಸಲಿದ್ದಾರೆ.  ಝಿಯಾರತ್, ಉದ್ಘಾಟನಾ ಸಂಗಮ, ಸ್ವಲಾತ್, ಮೌಲಿದ್, ರಾತೀಬ್, ಬುರ್ದಾ ಮಜ್ಲಿಸ್, ಉದ್ಬೋಧನೆ ಪ್ರಾಸ್ಥಾನಿಕ ಸಂಗಮಗಳು ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ.  ಅಕ್ಟೋಬರ್ 27 ಮಧ್ಯಾಹ್ನ 2 ಗಂಟೆಗೆ ವಳಪಟ್ಟನಂ, ಮಾಟ್ಟೂಲ್ ತಂಙಲ್, ಮಾಡಾಯಿಪಳ್ಳಿ, ತಲಕ್ಕಲ್ ಪಳ್ಳಿ, ರಾಮಂತಳಿ, ಎಝಿಪಳ್ಳಿ ಎಂಬೀ ಮಖ್ಬರಗಳಲ್ಲಿ ನಡೆಯುವ ಝಿಯಾರತಿಗೆ ಸೈಯದ್ ಜಲಾಲುದ್ದೀನ್ ತಂಗಳ್ ವಳಪಟ್ಣಂ, ಸೈಯದ್ ಜುನೈದ್ ಅಲ್ ಬುಖಾರಿ ಮಾಟ್ಟೂಲ್, ಸೈಯದ್ ಹೈದ್ರೂಸ್ ತಂಗಳ್ ಮಾಟ್ಟುಲ್, ಸೈಯದ್ ಇಸ್ಮಾಯಿಲ್ ಹಾದಿ ತಂಗಳ್ ಪಾಣೂರು, ಸೈಯದ್ ಮುಹಮ್ಮದ್ ಶಾಫಿ ಬಾ...

ತಾಜುಲ್ ಉಲಮಾ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪ್ರಚಾರ ಸಭೆ. ಪೋಸ್ಟರ್ ಸ್ಟಿಕ್ಕರುಗಳ ಪ್ರದರ್ಶನ.

ತಾಜುಲ್ ಉಲಮಾ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪ್ರಚಾರ ಸಭೆ. ಪೋಸ್ಟರ್ ಸ್ಟಿಕ್ಕರುಗಳ ಪ್ರದರ್ಶನ. ಮಂಗಳೂರು : ಕೇರಳದ ಪಯ್ಯನ್ನೂರ್ ಎಟ್ಟಿಕ್ಕುಳಂನಲ್ಲಿ ಅಂತ್ಯವಿಶ್ರಮಿಸುತ್ತಿರುವ ವಿದ್ವಾಂಸರ ಕಿರೀಟ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭವು ಅಕ್ಟೋಬರ್ 27, 28, 29 ರಂದು ಎಟ್ಟಿಕುಳಂ ನಲ್ಲಿ ನಡೆಯಲಿದ್ದು,  ಉಳ್ಳಾಲ ಕೇಂದ್ರವಾಗಿಸಿ  ಕೇರಳ, ಕರ್ನಾಟಕದಾದ್ಯಂತ ತನ್ನ ಪುರುಷಾಯುಷ್ಯವಿಡೀ ದೀನೀ ವಿಜ್ಞಾನ ಹರಡಿದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಉರೂಸ್ ಸಮಾರಂಭದ ಪ್ರಚಾರ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದು, ಇದರ ಭಾಗವಾಗಿ ಮುಡಿಪು ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಉರೂಸ್ ಪ್ರಚಾರ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಉಳ್ಳಾಲ ತಂಙಲ್ ಸುಪುತ್ರ ಗೌರವಾನ್ವಿತ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಮರ್ ಸಖಾಫಿ ತಲಕ್ಕಿ ಉದ್ಘಾಟಿಸಿದರು. ಜಬ್ಬಾರ್ ಸಖಾಫಿ ಪಾತೂರು ಹಾಗೂ ಉವೈಸ್ ಹಿಶಾಮಿ ಮುಡಿಫು ಮುದರ್ರಿಸ್ ಆಶಂಶಾ ಭಾಷಣ ಮಾಡಿದರು. ಎಂ.ಬಿ ಸಖಾಫಿ ಬಾಳೆಪುಣಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉರೂಸ್ ಸಮಾರಂಭದ ಪೋಸ್ಟರ್ ಹಾಗು ಸ್ಟಿಕ್ಕರುಗಳನ್ನು ಪ್ರದರ್ಶಿಸಿ ಬಿಡುಗಡೆಗೊಳಿಸಲಾಯಿತು. ...

ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ.

ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ. ಮಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು  ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಬೆಂಗಳೂರು,ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು. ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ,ನಾಯಕರಾದ ಸಿ.ಮುಹಮ್ಮದ್ ಫೈಝಿ,ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್, ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರ...

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ. ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪೈನಾನ್ಶಿಯಲ್ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಕೋಶಾಧಿಕಾರಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಫೈನಾನ್ಶಿಯಲ್ ಸಮಿತಿ ಚೇರ್ಮಾನ್ ಮೂಸ ಹಾಜಿ ಸಾಂಬರತೋಟ, ಫೈನಾನ್ಶಿಯಲ್ ಸಮಿತಿ ಕನ್ವೀನರ್ ಹನೀಫ್ ಸಅದಿ ಅಸೈ, ವೈಸ್ ಚೇರ್ಮಾನ್ ಅಬ್ಬುಚ್ಚ ಮದ್ಯನಡ್ಕ, ಹಸನ್ ಹಾಜಿ ಸಾಂಬಾರತೋಟ, ಸ್ವಾಗತ ಸಮಿತಿ ಕನ್ವೀನರಾದ ಹೈದರ್ ಹಿಮಮಿ ಮಲಾರ್, ಫೈನಾನ್ಶಿಯಲ್ ಸಮಿತಿ ವೈಸ್ ಕನ್ವೀನರುಗಳಾದ ಸುಲೈಮಾನ್ ಹಾಜಿ ಸಾಮಣಿಗೆ, ಶಮೀರ್ ದೇರಳಕಟ್ಟೆ ಹಾಗೂ ಫುಡ್ ವಿಭಾಗದ ಅಮೀರ್ ಹಬೀಬುರ್ರಹ್ಮಾನ್ ಸಂಪಿಲ,  ಉಪಸ್ಥಿತರಿದ್ದರು.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ. ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪ್ರಚಾರದ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಪ್ರಚಾರ ಸಮಿತಿ ಕನ್ವೀನರಾದ ಎಂ ಎಂ ಕೆ ಮುಡಿಪು, ಸ್ವಾಗತ ಸಮಿತಿ ಕನ್ವೀನರಾದ ಹೈದರಾಲಿ ಹಿಮಮಿ ಮಲಾರ್, ಪ್ರಚಾರ ಸಮಿತಿ ವೈಸ್ ಕನ್ವೀನರುಗಳಾದ ನವಾಝ್ ಸಖಾಫಿ ಉಳ್ಳಾಲ, ಅಬ್ದುಲ್ ಹಮೀದ್ ಹಳೆಕೋಟೆ, ಹುಸೈನ್ ಮುಸ್ಲಿಯಾರ್ ಉದ್ಯಾವರ, ಯೂಸುಫ್ ರಝ್ವಿ ದೇರಳಕಟ್ಟೆ ಭಾಗವಹಿಸಿದರು. ಅಬ್ದುಲ್ ಅಝೀಝ್ ಎಚ್ ಕಲ್ಲು ಹಾಗೂ ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ಉಪಸ್ಥಿತರಿದ್ದರು.

ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್‌ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ

ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್‌ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ಜರುಗಿತು. ಸಭೆಯನ್ನು ಉಜಿರೆ ಇಸ್ಮಾಯಿಲ್ ತಂಗಲ್ ಉದ್ಘಾಟಿಸಿದರು. ಅಶ್ ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ ವಿಷಯ ಮಂಡಿಸಿದರು. ಪಲ್ಲಂಗೋಡ್ ಅಬ್ದುಲ್ ಖಾದರ್ ಸಖಾಫಿ, ಉಮರ್ ಸಖಾಫಿ ತಲಕ್ಕಿ, ಮಲ್ಲೂರು ಅಶ್ರಫ್ ಸಅದಿ, ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ತಾಜುಲ್ ಉಲಮ ಉಳ್ಳಾಲ ತಂಙ್ಞಳ್ ರವರ 9ನೇ ಉರೂಸ್ ಸಮಾರಂಭದ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ರಚನಾ ಪ್ರಕ್ರಿಯೆ ನಡೆಯಿತು. ಚೇರ್ ಮೆನ್ ಆಗಿ ಸೈಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಮದನಿ ಉಜಿರೆ, ವೈಸ್ ಚೇರ್ಮೆನ್ ಗಳಾಗಿ ಉಮರ್ ಸಖಾಫಿ ತಲಕ್ಕಿ ಡಾ: ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ತಲಪಾಡಿ, MPM ಅಶ್ರಫ್ ಸಅದಿ ಮಲ್ಲೂರು, ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನ, BM  ಯೂಸುಫ್ ಕುಂದಾಪುರ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಏಷ್ಯನ್ ಬಾವ ಹಾಜಿ, PM ಅಬ್ದುಲ್ ಜಲೀಲ್ ಮೋಂಟುಗೋಳಿ, ಹನೀಫ್ ಹಾಜಿ ಉಳ್ಳಾಲ, ಅಬೂಬಕ್ಕರ್ ಹಾಜಿ ಕೂರತ್...

ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ಪರಲೋಕ ವಿಜಯಕ್ಕಾಗಿ ದುಆ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಗಲ್ ಮನವಿ

ಕೇರಳ ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ, ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ವಿಯೋಗ ಅತೀವ ದುಃಖಕರವಾಗಿದೆ.  ಅವರ ಹೆಸರಿನಲ್ಲಿ ತಹ್ಲೀಲ್ ಹೇಳಿ, ಕುರಾನ್ ಓದಿ ಹದ್ಯಾ ಮಾಡಿ, ಅವರ ಖಬರ್ ಮತ್ತು ಪಾರತ್ರಿಕ ವಿಜಯಕ್ಕಾಗಿ ದುಆ ನಿರ್ವಹಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ಮನವಿ ಮಾಡಿದ್ದಾರೆ.

ಶಾಂತಿ ಕಾಪಾಡಲು ಮನವಿ

ಶಾಂತಿ ಕಾಪಾಡಲು ಮನವಿ ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಅಹಿತಕರ ಘಟನೆಗಳು ಖಂಡನೀಯ ಮತ್ತು ದುಃಖಕರ. ಸಂಬಂಧ ಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ.  ಮೇಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೊಳಗಾಗದೆ ದೇಶದ, ರಾಜ್ಯದ ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕಾಗಿ ವಿನಂತಿಸುತ್ತೇನೆ.  ಮಸ್ಜಿದ್ ಖತೀಬ್ ಮತ್ತು ಇಮಾಂಗಳು ಜುಮುಅಃ ದ ನಂತರ ಜನರಿಗೆ ಸೌಹಾರ್ದ ಸಂದೇಶ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.  ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಕೂರತ್  ಉಳ್ಳಾಲ ಖಾಝಿ

ಈದುಲ್ ಅಝ್-ಹಾ ಶುಭಾಶಯಗಳು

السلام عليكم ورحمة الله وبركاته. “تقبل الله منا ومنكم صالح الاعمال”   *🌙عيد مبــــــــــــــــــــارك💫*   الله اكبر الله اكبر الله اكبر  لا إله إلا الله ألله أكبر  ألله أكبر ولله الحمد ಜೀವನದಲ್ಲಿ ಒಳ್ಳೆಯತನ ಹರಡಲಿ, ಸಂಬಂಧಗಳು ಗಟ್ಟಿಯಾಗಲಿ, ಪ್ರಾರ್ಥನೆಯಲ್ಲಿ ಪರಸ್ಪರ ಮರೆಯದಿರಿ!!  ಪ್ರೀತಿ ತುಂಬಿದ ಬಲಿ ಪೆರ್ನಾಲ್ ಹಬ್ಬದ ಶುಭಾಶಯಗಳು🌙🌙🌹   ನವಾಝ್ ಸಖಾಫಿ ಉಳ್ಳಾಲ

ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ✍️ಡಾ. ಜೆ ಎಸ್ ಪಾಟೀಲ

ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ ✍️ಡಾ. ಜೆ ಎಸ್ ಪಾಟೀಲ 20 ಕೋಟಿ ಭಾರತೀಯ ಮುಸ್ಲಿಮರು ಈದ್ ಉಲ್ ಅಧಾವನ್ನು (ಭಾರತದಲ್ಲಿ ಬಕ್ರಿದ್ ಎಂದು ಕರೆಯಲಾಗುತ್ತದೆ), ಆಚರಿಸುತ್ತಾರೆ. ಅಂದರೆ ಅಂದಾಜು 8-10% ಮುಸ್ಲಿಮರು 10,000 ರಿಂದ 50,000 ಬೆಲೆಯ ಆಡುಗಳು/ಕುರಿಗಳನ್ನು ಬಕ್ರಿದ್ ಹಬ್ಬಕ್ಕೆ ಬಲಿ ಕೊಡುತ್ತಾರೆ. ಪ್ರತಿ ಪ್ರಾಣಿಗೆ ಸರಾಸರಿ 20,000 ಬೆಲೆಯನ್ನು ತೆಗೆದುಕೊಂಡರೆ… 2 ಕೋಟಿ × ರೂ 20000 = ರೂ 400,000,000,000. (4 ಲಕ್ಷ ಕೋಟಿ) ಆರ್ಥಿಕ ದೃಷ್ಟಿಕೋನದಿಂದ ಇದು ಯಾರಿಗೆಲ್ಲ ಪ್ರಯೋಜನವಿದೆ ಎಂದು ನೋಡೋಣ. ಬಕ್ರಿದ್ ಹಬ್ಬಕ್ಕೆ ಬಳಕೆಯಾಗುವುದು ಚೈನೀಸ್ ಅಥವಾ ಬಹುರಾಷ್ಟ್ರೀಯ ಉತ್ಪನ್ನಗಳಲ್ಲ. ಬದಲಾಗಿ 100% ದೇಸಿ ಗ್ರಾಮೀಣ ಅರ್ಥಶಾಸ್ತ್ರದ ಸಾಕು ಪ್ರಾಣಿಗಳು. ಈ ಪ್ರಾಣಿಗಳನ್ನು ಸಾಕುವವರು ಹಾಗು ಮಾರುವವರು ನಮ್ಮ ಗ್ರಾಮೀಣ ಭಾರತದ ರೈತರು ಮಾತ್ರ. ಒಬ್ಬ ರೈತ ವರ್ಷಕ್ಕೆ ಸರಾಸರಿ 10 ಮೇಕೆಗಳನ್ನು ನಿರ್ವಹಿಸಿದರೆ…. 2 ಕೋಟಿ ÷ 10 = 20 ಲಕ್ಷ ಕುಟುಂಬಗಳು ನೇರ ಉದ್ಯೋಗ ಪಡೆಯುತ್ತವೆ. ಆದ್ದರಿಂದ ಬಕ್ರಿದ್ ಹಬ್ಬ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಜೊತೆಗೆ 4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕತೆ ಮತ್ತು ಸುಮಾರು 20 ಲಕ್ಷ ಸಣ್ಣ ರೈತರಿಗೆ ಉದ್ಯೋಗವನ್ನು ಒದಗಿಸುತ್ತದೆ. ರೈತರ ವ್ಯವಹಾರವು ಧರ್ಮವನ್ನು ಆಧರಿಸಿಲ್ಲ ˌ ಆದ್ದರಿಂದ ವಿವಿಧ ಸಮುದಾಯಗಳ ಎಲ್ಲಾ ರೈತರು ಇದರ ಪ್ರ...

ಉಳ್ಳಾಲ ರೇಂಜ್ ನಾಯಕರ ಭೇಟಿ

ನವಾಝ್ ಸಖಾಫಿ ಉಳ್ಳಾಲ ರವರ ಮರಣಹೊಂದಿದ ಅಜ್ಜಿಯ ( ತಂದೆಯ ತಾಯಿ) ಮನೆಗೆ ಭೇಟಿ ನೀಡಿ, ಅವರ ಅಜ್ಜಿಯ ಪಾರತ್ರಿಕ ವಿಜಯಕ್ಕಾಗಿ ಪ್ರಾರ್ಥನೆ ನಡೆಸಿದ ಸಯ್ಯಿದ್ ಮದನಿ ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ನಾಯಕರು.

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಮಹಾಸಭೆಯು ಉಳ್ಳಾಲ ತೋಟದ ಇಶಾಅತುಸ್ಸುನ್ನಃ ಮದ್ರಸದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಂದರಭಾಗ್ ಬದ್ರಿಯ್ಯ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮೀಯಪದವು ದುಆ ನೆರವೇರಿಸಿದರು. ರೇಂಜ್ ಪರೀಕ್ಷಾ ವಿಭಾಗದ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯನ್ನು ಉದ್ಘಾಟಿಸಿದರು. 2021-22 ನೇ ಸಾಲಿನ ವಿವಿಧ ವಿಭಾಗದ ವಾರ್ಷಿಕ ವರದಿಗಳು ಮತ್ತು  ಲೆಕ್ಕಪತ್ರ ಮಂಡಿಸಲಾಯಿತು.  ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರು ಅಧ್ಯಕ್ಷತಾ ಭಾಷಣ ಮಾಡಿದರು. ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.  ಗೌರವಾಧ್ಯಕ್ಷರಾಗಿ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್, ಅಧ್ಯಕ್ಷರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಬಶೀರ್ ಸಖಾಫಿ ಉಳ್ಳಾಲ ಪುನರಾಯ್ಕೆಯಾದರು. ಎಕ್ಸಾಂ, ಐಟಿ, ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ...

ಬರಿಮಾತಿಗಷ್ಟೆ SSF ಆದರೆ ಸಾಲದು, ಸಂಘಟನೆಯಲ್ಲಿ ಸೇರಿ ಕಾರ್ಯಾಚರಣೆಗಿಳಿಯಬೇಕು.

ಬರಿಮಾತಿಗಷ್ಟೆ SSF ಆದರೆ ಸಾಲದು, ಸಂಘಟನೆಯಲ್ಲಿ ಸೇರಿ ಕಾರ್ಯಾಚರಣೆಗಿಳಿಯಬೇಕು. ಇದು SSF ADYAR ಕಾರ್ಯಕ್ರಮದಲ್ಲಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ಹೇಳಿದ ಮಾತು     ಮಂಗಳೂರಿನಲ್ಲಿ ನಡೆದ ಎನ್'ಹಾನ್ಸ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ತಾಜುಲ್ ಉಲಮ ಉಳ್ಳಾಲ ತಂಙಳ್ ರವರ ಸುಪುತ್ರರೂ ಈಗಿನ ಉಳ್ಳಾಲ ಹಾಗೂ ಕರ್ನಾಟಕದ ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿರುವ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರು ಎಲ್ಲಾ ಸುನ್ನಿ ಜನರಿಗೂ ಒಂದು ಉತ್ತಮ ಸಂದೇಶವನ್ನು ಹೇಳಿದರು, ಅದೇನೆಂದರೆ ನಾವು ಬರಿಮಾತಿಗಷ್ಟೇ SSF SYS ನವರಾದರೆ ಸಾಲದು, ಸಂಘಟನೆಯಲ್ಲಿ ಸೇರಿ ಸಂಘಟನಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಬೇಕು. ಹಾಗಾದರೆ ಮಾತ್ರ ನಾವು ನಿಜವಾದ ಸುನ್ನಿ ಆಗಲು ಸಾಧ್ಯ ಅಂತ.     ನಿಜವಾಗಿಯೂ ಹೌದು, ಇತ್ತೀಚಿನ ದಿನಗಳಲ್ಲಿ ನಾವು SSF ನವರು, ನಾವು SYS ನವರು, ನಾವು ಮುಸ್ಲಿಂ ಜಮಾಅತ್ ನವರು ಅಂತ ಹೇಳುವವರು ಕೂಡ ಸಂಘಟನಾ ಕಾರ್ಯಾಚರಣೆಗಳಿಂದ ದೂರ ಇದ್ದು, ಸಂಘಟನೆಯ ಯಾವುದೇ ಮೀಟಿಂಗ್, ಕ್ಯಾಂಪ್ ಗಳಲ್ಲಿ ಸರಿಯಾಗಿ ಭಾಗವಹಿಸದೆ, ಬರಿಮಾತಿಗಷ್ಟೇ ನಾವು ಸುನ್ನಿಗಳು ಅಂತ ಹೇಳುವವರಾಗಿದ್ದೇವೆ. ಕೆಲವರ ಸಂಘಟನಾ ಕಾರ್ಯಾಚರಣೆ ಅಂದರೆ ಕೇವಲ ವಾಟ್ಸಪ್ ಮೆಸೇಜ್ ಮತ್ತು ವಾಟ್ಸಪ್ ಸ್ಟೇಟಸ್ ಗಳಿಗೆ ಸೀಮಿತ ಆಗಿರುತ್ತದೆ. ಅವರ ವಾಟ್ಸಪ್ ಸ್ಟೇಟಸ್ ಗಳು ಮತ್ತು ಸೋಷಿಯಲ್ ಮೀಡಿಯಾದ ಅವರ ಇನ್ನಿತರ ಪೋಸ್ಟ್ ಗಳು SSF SYS ನದ್ದು ಆಗಿರು...