Skip to main content

ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ✍️ಡಾ. ಜೆ ಎಸ್ ಪಾಟೀಲ


ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ

✍️ಡಾ. ಜೆ ಎಸ್ ಪಾಟೀಲ

20 ಕೋಟಿ ಭಾರತೀಯ ಮುಸ್ಲಿಮರು ಈದ್ ಉಲ್ ಅಧಾವನ್ನು (ಭಾರತದಲ್ಲಿ ಬಕ್ರಿದ್ ಎಂದು ಕರೆಯಲಾಗುತ್ತದೆ), ಆಚರಿಸುತ್ತಾರೆ. ಅಂದರೆ ಅಂದಾಜು 8-10% ಮುಸ್ಲಿಮರು 10,000 ರಿಂದ 50,000 ಬೆಲೆಯ ಆಡುಗಳು/ಕುರಿಗಳನ್ನು ಬಕ್ರಿದ್ ಹಬ್ಬಕ್ಕೆ ಬಲಿ ಕೊಡುತ್ತಾರೆ. ಪ್ರತಿ ಪ್ರಾಣಿಗೆ ಸರಾಸರಿ 20,000 ಬೆಲೆಯನ್ನು ತೆಗೆದುಕೊಂಡರೆ…

2 ಕೋಟಿ × ರೂ 20000 = ರೂ
400,000,000,000.
(4 ಲಕ್ಷ ಕೋಟಿ)
ಆರ್ಥಿಕ ದೃಷ್ಟಿಕೋನದಿಂದ ಇದು ಯಾರಿಗೆಲ್ಲ ಪ್ರಯೋಜನವಿದೆ ಎಂದು ನೋಡೋಣ.
ಬಕ್ರಿದ್ ಹಬ್ಬಕ್ಕೆ ಬಳಕೆಯಾಗುವುದು ಚೈನೀಸ್ ಅಥವಾ ಬಹುರಾಷ್ಟ್ರೀಯ ಉತ್ಪನ್ನಗಳಲ್ಲ. ಬದಲಾಗಿ 100% ದೇಸಿ ಗ್ರಾಮೀಣ ಅರ್ಥಶಾಸ್ತ್ರದ ಸಾಕು ಪ್ರಾಣಿಗಳು. ಈ ಪ್ರಾಣಿಗಳನ್ನು ಸಾಕುವವರು ಹಾಗು ಮಾರುವವರು ನಮ್ಮ ಗ್ರಾಮೀಣ ಭಾರತದ ರೈತರು ಮಾತ್ರ.

ಒಬ್ಬ ರೈತ ವರ್ಷಕ್ಕೆ ಸರಾಸರಿ 10 ಮೇಕೆಗಳನ್ನು ನಿರ್ವಹಿಸಿದರೆ….
2 ಕೋಟಿ ÷ 10 = 20 ಲಕ್ಷ ಕುಟುಂಬಗಳು ನೇರ ಉದ್ಯೋಗ ಪಡೆಯುತ್ತವೆ.
ಆದ್ದರಿಂದ ಬಕ್ರಿದ್ ಹಬ್ಬ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಜೊತೆಗೆ 4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕತೆ ಮತ್ತು ಸುಮಾರು 20 ಲಕ್ಷ ಸಣ್ಣ ರೈತರಿಗೆ ಉದ್ಯೋಗವನ್ನು ಒದಗಿಸುತ್ತದೆ.
ರೈತರ ವ್ಯವಹಾರವು ಧರ್ಮವನ್ನು ಆಧರಿಸಿಲ್ಲ ˌ ಆದ್ದರಿಂದ ವಿವಿಧ ಸಮುದಾಯಗಳ ಎಲ್ಲಾ ರೈತರು ಇದರ ಪ್ರಯೋಜನ ಪಡೆಯುತ್ತಾರೆ.

ಪ್ರತಿ ಮೇಕೆಯ ಮಾಂಸವನ್ನು ಕನಿಷ್ಠ 20 ಜನರು ಸೇವಿಸುತ್ತಾರೆ, ಆದ್ದರಿಂದ ಬಕ್ರಿದ್ ಹಬ್ಬದಂದು 2 ಕೋಟಿ × 20 = 40 ಕೋಟಿ ಜನರಿಗೆ ಆಹಾರವನ್ನು ಒದಗಿಸುತ್ತದೆ.

ಬಕ್ರಿದ್ನ ಪ್ರಮುಖ ಆರ್ಥಿಕ ಪ್ರಯೋಜನಗಳು:
ವ್ಯಾಪಾರ: 4 ಲಕ್ಷ ಕೋಟಿ ರೂ.
ಉಚಿತ ಆಹಾರ: 40 ಕೋಟಿ ಜನರಿಗೆ
ಉದ್ಯೋಗ: 20 ಲಕ್ಷ ಜನರಿಗೆ
ಈ ಲೆಕ್ಕವನ್ನು ಕನಿಷ್ಠ ಅಂದಾಜಿನ ಮೇಲೆ ಮಾಡಲಾಗಿದೆˌ ವಾಸ್ತವವಾಗಿ ಅಂಕಿಸಂಖ್ಯೆಗಳು ಮೇಲಿನದಕ್ಕಿಂತ ದುಪ್ಪಟ್ಟಾಗಿರಬಹುದು.
ಸಾಕು ಜಾನುವಾರು ಗ್ರಾಮೀಣ ಭಾರತದಲ್ಲಿ ಅತ್ಯಂತ ಲಿಕ್ವಿಡ್ ಆಸ್ತಿಯಾಗಿವೆ ಮತ್ತು ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಒಕ್ಕೂಟ ಸರಕಾರ ಅವುಗಳ ವ್ಯಾಪಾರವನ್ನು ಉತ್ತೇಜಿಸಬೇಕಿದೆ.
ಅದ್ಭುತವಾದ ಸಂಗತಿ ಎಂದರೆ ಇದು ಭಾರತದಲ್ಲಿ ಜಿಡಿಪಿ ಬೆಳವಣಿಗೆ ಮತ್ತು ಉದ್ಯೋಗ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡುವ ಕ್ಷೇತ್ರಗಳಲ್ಲಿ ಒಂದಾಗಿದೆ.

“ಈ ಹಬ್ಬವನ್ನು ಆಚರಿಸಬಾರದು” ಎಂದು ಹೇಳುವ ಜನರು ದಯವಿಟ್ಟು ಇದರಿಂದಾಗುವ ವ್ಯಾಪಾರ ದೃಷ್ಟಿಕೋನಗಳು ಮತ್ತು ಉದ್ಯೋಗದ ಹೆಚ್ಚಳದ ಕಡೆ ನೋಡಬೇಕು. ಉದ್ಯೋಗ ನಿರ್ಮಾಣ ಮತ್ತು ಜಿಡಿಪಿ ಬೆಳವಣಿಗೆಯ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುವುದಾದಲ್ಲಿ ಇಂತಹ ಗ್ರಾಮೀಣ ಕೃಷಿಯಾಧಾರಿತ ವ್ಯಾಪಾರವನ್ನು ಉತ್ತೇಜಿಸಬೇಕಿದೆ.
ಗಮನಿಸಿ: ಮೇಲಿನ ಅಂಕಿಅಂಶಗಳು ಅಂದಾಜು ಮೌಲ್ಯಗಳಾಗಿದ್ದು ಇವುಗಳಲ್ಲಿ ಎಮ್ಮೆ ˌ ಒಂಟೆ, ಮತ್ತು ಇವುಗಳ ಚರ್ಮಗಳು ಹಾಗು ಅವುಗಳ ಉತ್ಪನ್ನಗಳ ವ್ಯಾಪಾರವನ್ನು ಒಳಗೊಂಡಿರುವುದಿಲ್ಲ.
ಬ್ರಕ್ರೀದ್ ಹಬ್ಬದ ವ್ಯಾಪಾರ ಹೆಚ್ಚಿದರೆ ಬಹುಶಃ ರೈತರು ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲ. ಈ ಒಂದು ದಿನದ ವ್ಯಾಪಾರದಿಂದ ಆಗುವ ಗಳಿಕೆಯಿಂದ ರೈತರು ಇಡೀ ವರ್ಷ ಬದುಕಬಲ್ಲರು.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.