Skip to main content

Posts

Showing posts from 2024

ಉಮ್ರಾ ಯಾತ್ರಿಕ ಇರ್ಫಾನ್ ಫಾಳಿಲಿ ಉಸ್ತಾದರಿಗೆ ಬೀಳ್ಕೊಡುಗೆ ಸಮಾರಂಭ

ಉಮ್ರಾ ಯಾತ್ರೆ ಹೊರಡುತ್ತಿರುವ ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ ಉಸ್ತಾದರಿಗೆ ಆಝಾದ್ ನಗರ ಮದರಸ ಹಾಲಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ  ಗೌರವಪೂರ್ವಕವಾಗಿ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ವೆಲ್ಫೇರ್ ವಿಭಾಗದ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ರೇಂಜ್ ನ ನಾಯಕರೂ, ಹಿರಿಯ ವಿದ್ವಾಂಸರಾದ ಶರೀಫ್ ಬಾಖವಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾರ್ಪಣೆ ಸ್ವೀಕರಿಸಿ ಇರ್ಫಾನ್ ಫಾಳಿಲಿ ಮಾತನಾಡಿದರು. ರೇಂಜ್ ನಾಯಕರಾದ ಎನ್ ಡಿ ಮದನಿ, ವಿ ಕೆ ಸಖಾಫಿ, ವಿ ಎ ಸಖಾಫಿ, ಕೆ ಎಂ ಮದನಿ, ಸೆರ್ಕಳ ಸಖಾಫಿ, ಇರ್ಫಾನ್ ಸಅದಿ, ಬಶೀರ್ ಮುಸ್ಲಿಯಾರ್, ಇರ್ಫಾನ್ ಮದನಿ ಉಳ್ಳಾಲ, ಅಬ್ದುಸ್ಸಮದ್ ಅಹ್ಸನಿ  ಹಾಗು ಬಶೀರ್ ಸಖಾಫಿ ಉಳ್ಳಾಲ ಶುಭಹಾರೈಸಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಉಳ್ಳಾಲ ರೇಂಜ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು.

ಎಸ್ ಬಿ ಎಸ್ ಉಳ್ಳಾಲ ವಲಯ ನೂತನ ಸಮಿತಿ ರಚನೆ

ಎಸ್ ಬಿ ಎಸ್ ಉಳ್ಳಾಲ ವಲಯ ನೂತನ ಸಮಿತಿ ರಚನಾ ಸಭೆ ಆಝಾದ್ ನಗರ ಮದ್ರಸ ಹಾಲ್ ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸಯ್ಯಿದ್ ಮಿಶಾರಿ ಅಲ್ ಹಾದೀ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ರಾಝಿ ದಾರಂದಬಾಗಿಲು ಹಾಗು ಕೋಶಾಧಿಕಾರಿಯಾಗಿ ರಿಹಾಲ್ ಆಝಾದ್ ನಗರ ಆಯ್ಕೆ ನೂತನ ಪದಾಧಿಕಾರಿಗಳಿಗೆ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಹ್ರತ್ಪೂರ್ವಕ ಅಭಿನಂದನೆಗಳು. ತಮ್ಮ ಅವಧಿಯಲ್ಲಿ ಉತ್ತಮ ಸೇವೆ ನಡೆಸಲು ಅಲ್ಲಾಹನು ತೌಫೀಖ್ ನೀಡಲಿ.  ಆಮೀನ್. ಅಭಿನಂದನೆಗಳೊಂದಿಗೆ : ಎಸ್ ಜೆ ಎಂ ಉಳ್ಳಾಲ ರೇಂಜ್

ಉಳ್ಳಾಲ ದ್ಸಿಕ್ರ್ ಮಜ್ಲಿಸ್ : ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ಅಲ್ ಬುಖಾರಿ ಮುಈನಿ ಅಲ್ ಅಝ್ಹರಿ ನೇತ್ರತ್ವ

ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇದರ ವತಿಯಿಂದ ಮಾಸಿಕವಾಗಿ ನಡೆಸಲ್ಪಡುವ ದ್ಸಿಕ್ರ್ ಮಜ್ಲಿಸಿಗೆ ಸಯ್ಯಿದ್ ತಾಜುಲ್ ಉಲಮಾ ಖ ಸಿ ರವರ ಪೌತ್ರ, ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಳ್ ರವರ ಪ್ರಿಯ ಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ಅಲ್ ಬುಖಾರಿ ಮುಈನಿ ಅಲ್ ಅಝ್ಹರಿ ನೇತ್ರತ್ವ ನೀಡಿದರು.