Skip to main content

Posts

Showing posts from May, 2019

ಅಂತಾರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡ ಉಳ್ಳಾಲ ದಾರಂದಬಾಗಿಲಿನ ಎಸ್ಸೆಸ್ಸೆಫ್ ಸದಸ್ಯ ಬುಶೈರ್ ರಹ್ಮಾನ್

ಅಂತಾರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡ ಉಳ್ಳಾಲ ದಾರಂದಬಾಗಿಲಿನ ಎಸ್ಸೆಸ್ಸೆಫ್ ಸದಸ್ಯ ಬುಶೈರ್ ರಹ್ಮಾನ್ ಇತ್ತೀಚೆಗೆ (ಮೇ -24 - 2019) ನೇಪಾಳದ ಕಾಠ್ಮಂಡುವಿನ ಕೆ.ಟಿ.ಎಂ ಸಿಟಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಉಳ್ಳಾಲ ದಾರಂದಬಾಗಿಲಿನ ಮುಹಮ್ಮದ್ ಬುಶೈರ್ ರಹ್ಮಾನ್ ಒಂದು ಚಿನ್ನದ ಪದಕ ಹಾಗು ಒಂದು ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಅಂತಾರಾಷ್ಟ್ರ ತರಬೇತುದಾರರು ಹಾಗು ತೀರ್ಪುಗಾರರಾದ ದರ್ಣಪ್ಪ.ಕೆ ಇವರಿಂದ ತರಬೇತಿ ಪಡೆದ ಬುಶೈರ್ ರಹ್ಮಾನ್ ಯು.ಎಂ ಬಶೀರ್ ಹಾಗು ಹಲೀಮ ದಂಪತಿಯ ಸುಪುತ್ರನೂ ಎಸ್ಸೆಸ್ಸೆಫ್  ಉಳ್ಳಾಲ ಡಿವಿಷನ್ ವ್ಯಾಪ್ತಿಯ ತೊಕ್ಕೋಟು ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ದಾರಂದಬಾಗಿಲು ಶಾಖಾ ಸದಸ್ಯನಾಗಿದ್ದಾನೆ.

SSF ಪಟ್ಲ ಶಾಖೆಯ ವತಿಯಿಂದ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಬೃಹತ್ ಸೌಹಾರ್ದ ಇಫ್ತಾರ್ ಕೂಟ

SSF ಪಟ್ಲ ಶಾಖೆಯ ವತಿಯಿಂದ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಮೇ 26 ಆದಿತ್ಯವಾರದಂದು ಪಟ್ಲ ತಖ್ವಾ ಜುಮಾ ಮಸೀದಿಯಲ್ಲಿ ನಡೆಯಿತು.  ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ನೇತ್ರತ್ವವನ್ನು ಪಟ್ಲ ಮಸೀದಿ ಖತೀಬರಾದ ಎಂ ಸಿ ಮುಹಮ್ಮದ್ ಫೈಝಿ ಉಸ್ತಾದರು ವಹಿಸಿದರು.  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯುಟಿ ಖಾದರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೌಹಾರ್ದ ಇಫ್ತಾರ್ ಕೂಟದಲ್ಲಿ ಕಲ್ಲಾಪು ಹಾಗೂ ಪಟ್ಲ ಪರಿಸರದ ಹೆಚ್ಚಿನ ನಾಗರಿಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಆಪ್ತರಾದ ಉಸ್ಮಾನ್ ಕಲ್ಲಾಪು, ಉಳ್ಳಾಲ ನಗರಸಭಾ ಕೌನ್ಸಿಲರ್ ಗಳಾದ ಇಂಜಿನಿಯರ್ ಮುಷ್ತಾಕ್ ಪಟ್ಲ, ಬಾಜಿಲ್ ಡಿಸೋಜ, ಪಟ್ಲ ಮಸೀದಿ ಅಧ್ಯಕ್ಷರಾದ ಮಹ್ಮೂದ್ ಹಾಜಿ, SSF ಉಳ್ಳಾಲ ಡಿವಿಶನ್ ಅಧ್ಯಕ್ಷರಾದ ಸೈಯ್ಯದ್ ಖುಬೈಬ್ ತಂಙಳ್, ಡಿವಿಶನ್ ಕಾರ್ಯದರ್ಶಿ ಜಾಫರ್ ತೊಕ್ಕೊಟ್ಟು, ಪಟ್ಲ ಶಾಖೆಯ ಅಧ್ಯಕ್ಷ ನಝೀರ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಕೋಶಾಧಿಕಾರಿ ಶಿಹಾಬುದ್ದೀನ್ ಉಪಸ್ಥಿತರಿದ್ದರು.

ಯುವತಿಯೊಬ್ಬಳ ಫೇಸ್ ಬುಕ್ ಪೋಸ್ಟ್ ವೈರಲಾಗುತ್ತಿದೆ!. ನಮಗೊಂದು ಮೆಡಿಕಲ್ ಕಾಲೇಜ್ ಬೇಕಾಗಿದೆ. ಕಾಂತಪುರಂ ಉಸ್ತಾದರಿಗೊಂದು ಬಹಿರಂಗ ಪತ್ರ.

ಯುವತಿಯೊಬ್ಬಳ ಫೇಸ್ ಬುಕ್ ಪೋಸ್ಟ್ ವೈರಲಾಗುತ್ತಿದೆ!. ನಮಗೊಂದು ಮೆಡಿಕಲ್ ಕಾಲೇಜ್ ಬೇಕಾಗಿದೆ. ಕಾಂತಪುರಂ ಉಸ್ತಾದರಿಗೊಂದು ಬಹಿರಂಗ ಪತ್ರ. ಅನುವಾದ : ಸ್ನೇಹಜೀವಿ ಅಡ್ಕ ಸಹಕಾರ : ಇಮ್ತಿ ಬೈರಿಕಟ್ಟೆ, ಹಾರಿಸ್ ಕೋನಿಮಾರ್ ಪ್ರೀತಿಯ ಉಸ್ತಾದರೇ.. ನಿಮ್ಮನ್ನು ನಾನು ಇದುವರೆಗೂ ಮುಖತಃವಾಗಿ ನೋಡಿಲ್ಲ. ಆದರೂ ನನಗೆ ನಿಮ್ಮನ್ನು ಚೆನ್ನಾಗಿ ಗೊತ್ತು. ಅದು ನಿಮ್ಮ ಮುಖಾಂತರನೋ, ನಿಮ್ಮ ಶಿಷ್ಯ ವೃಂದದ ಮುಖಾಂತರವಾಗಿಯೋ ಅಲ್ಲ.  ತಮಗೆ ಯಾರೊಡನೆಯೂ ವೈರತ್ವ ಇಲ್ಲದಿದ್ದರೂ, ನಿಮ್ಮ ಯಶಸ್ಸುಗಳನ್ನು ನೋಡಿ ವೈರತ್ವ ಬೆಳೆಸಿಕೊಂಡವರ ಮೂಲಕವಾಗಿತ್ತು ನಾನು ಮೊದಲನೆಯದಾಗಿ ನಿಮ್ಮನ್ನು ಪರಿಚಯಿಸಿಕೊಂಡದ್ದು. ಮೊದಲನೆಯದಾಗಿ ಕೇಳಿಸಿಕೊಂಡದ್ದು  ಪಂಡಿತರ ಪ್ರೊಫೆಶನಲ್ ಎಂದು ಒಮ್ಮೆ ಮನೋರಮಾ ಪತ್ರಿಕೆಯು ಬರೆದದ್ದನ್ನು ಓದಿದ ನಂತರವಾಗಿತ್ತು ನಾನು ನಿಮ್ಮನ್ನು ಗಮನಿಸತೊಡಗಿದ್ದು. ಯಾರೊಡನೆಯೂ ವೈರತ್ವವಿಲ್ಲದೆ , ಮುಗುಳ್ನಗೆಯೊಂದಿಗೆ ಅನಾಥರ ಪಾಲಿನ ಆಸರೆಯಾಗಿ, ಆಸರೆಯಿಲ್ಲದವರ ಪಾಲಿನ ರಕ್ಷಕರಾಗಿ, ಪಂಡಿತರ ಉಸ್ತಾದರಾಗಿ, ಜಗತ್ತು ಗುರುತಿಸುವ, ಗೌರವಿಸುವ ಭಾರತದ ಮುಸ್ಲಿಂ ನಾಯಕನಾಗಿ, ಈ ಪಟ್ಟಿ ಎಣಿಸಿ ಮುಗಿಸಲು ಸಾಧ್ಯವಿಲ್ಲ. ಮುಟ್ಟಿದೆಲ್ಲವೂ ಚಿನ್ನವಾಗಿ ಮಾರ್ಪಡಿಸುವ ತಮ್ಮೊಂದಿಗೆ ಮಾತನ್ನು‌ ದೀರ್ಗಗೊಳಿಸದೆ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಕೇರಳಕ್ಕೆ ಒಂದು‌ ಮೆಡಿಕಲ್ ಕಾಲೇಜಿನ ಅಗತ್ಯತೆಯಿದೆ. ಅದು ಕೇರಳದಲ್ಲೇ ಆ...

ರಮದಾನ್ ತಿಂಗಳ ಚಂದ್ರದರ್ಶನ

ರಮದಾನ್ ತಿಂಗಳ ಚಂದ್ರದರ್ಶನ ಇಂದು (ಆದಿತ್ಯವಾರ ಅಸ್ತ ಸೋಮವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 06-05-2019 ಸೋಮವಾರ ( ನಾಳೆ ) ರಮದಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 06-05-2019 is first of Ramadan