SSF ಪಟ್ಲ ಶಾಖೆಯ ವತಿಯಿಂದ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಮೇ 26 ಆದಿತ್ಯವಾರದಂದು ಪಟ್ಲ ತಖ್ವಾ ಜುಮಾ ಮಸೀದಿಯಲ್ಲಿ ನಡೆಯಿತು. ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ನೇತ್ರತ್ವವನ್ನು ಪಟ್ಲ ಮಸೀದಿ ಖತೀಬರಾದ ಎಂ ಸಿ ಮುಹಮ್ಮದ್ ಫೈಝಿ ಉಸ್ತಾದರು ವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯುಟಿ ಖಾದರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸೌಹಾರ್ದ ಇಫ್ತಾರ್ ಕೂಟದಲ್ಲಿ ಕಲ್ಲಾಪು ಹಾಗೂ ಪಟ್ಲ ಪರಿಸರದ ಹೆಚ್ಚಿನ ನಾಗರಿಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಆಪ್ತರಾದ ಉಸ್ಮಾನ್ ಕಲ್ಲಾಪು, ಉಳ್ಳಾಲ ನಗರಸಭಾ ಕೌನ್ಸಿಲರ್ ಗಳಾದ ಇಂಜಿನಿಯರ್ ಮುಷ್ತಾಕ್ ಪಟ್ಲ, ಬಾಜಿಲ್ ಡಿಸೋಜ, ಪಟ್ಲ ಮಸೀದಿ ಅಧ್ಯಕ್ಷರಾದ ಮಹ್ಮೂದ್ ಹಾಜಿ, SSF ಉಳ್ಳಾಲ ಡಿವಿಶನ್ ಅಧ್ಯಕ್ಷರಾದ ಸೈಯ್ಯದ್ ಖುಬೈಬ್ ತಂಙಳ್, ಡಿವಿಶನ್ ಕಾರ್ಯದರ್ಶಿ ಜಾಫರ್ ತೊಕ್ಕೊಟ್ಟು, ಪಟ್ಲ ಶಾಖೆಯ ಅಧ್ಯಕ್ಷ ನಝೀರ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಕೋಶಾಧಿಕಾರಿ ಶಿಹಾಬುದ್ದೀನ್ ಉಪಸ್ಥಿತರಿದ್ದರು.






