Skip to main content

Posts

Showing posts from March, 2019

ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು

ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು ✍ ಹಝುಮ ಯೂನುಸ್ ಇಮ್ದಾದಿ! ಈ ಹೆಸರು ಕೇಳದವರು ಇರಲಾರರು. ಬರಹ ರಂಗಕ್ಕೆ ಹೊಸ ರೂಪ ಕೊಟ್ಟ ಅಪರೂಪದ ಬರಹಗಾರ ಇವರು. ಸುನ್ನೀವಾಣಿ, ಸುನ್ನತ್ ಏಕ ಕಾಲಕ್ಕೆ ಹೊರತರುವ ಮೂಲಕ ಬರಹ ರಂಗದಲ್ಲಿ ಕ್ರಾಂತಿ ಸೃಷ್ಟಿಸಿದ ಪ್ರಬುದ್ಧ ಲೇಖಕ. ಸುನ್ನೀವಾಣಿ ಮೂಲಕ ಬೆಳಕಿಗೆ ಬಂದು ಸುನ್ನತ್ ಮೂಲಕ ಮನೆಮಾತಾದ ಯೂನುಸ್ ಇಮ್ದಾದಿ ಯವರ ಕುರಿತು ಒಂದು ಕಿರು ಬರಹವಷ್ಟೇ ಇದು. ಅದು ಐದು ವರ್ಷಗಳ ಹಿಂದಿನ ಮಾತು. ನಾನು ಮತ್ತು ಯೂನುಸ್ ಇಮ್ದಾದಿ ಒಟ್ಟಿಗೆ ಪತ್ರಿಕೋದ್ಯಮಕ್ಕೆ  ಕಾಲಿಟ್ಟ ಸಮಯ. ಕರ್ನಾಟಕದ ಮುಸ್ಲಿಂ ಪತ್ರಿಕಾ ರಂಗ ದಲ್ಲಿ ಅತೀ ಹೆಚ್ಚು ಪ್ರಚಾರ ಮೂಲಕ ಮನೆಮಾತಾದ  ಸುನ್ನತ್ ಎಂಬ ಮಾಸಿಕಕ್ಕೆ ಯೂನುಸ್ ಇಮ್ದಾದಿಯವರನ್ನು ಸಂಪಾದಕರಾಗಿ ನೇಮಕ ಮಾಡಲಾಯಿತು. ಇವರ ನೇಮಕದ ಬಗ್ಗೆ ಹಿರಿಯ ಬರಹಗಾರರೊಬ್ಬರು ನನ್ನಲ್ಲಿ ಅಸಹನೆ ವ್ಯಕ್ತಪಡಿಸಿದ್ದರು. "ಪೆನ್ನು ಹಿಡಿದ ಕೂಡಲೇ ಸಂಪಾದಕ ಮಾಡಿದ್ದು ಸರಿಯಲ್ಲ" ಎಂಬ ವಾದವಾಗಿತ್ತು ಅವರದ್ದು. ನಂತರ ಅವರೇ ಯೂನುಸ್ ಇಮ್ದಾದಿ ಯವರ ಬರಹವನ್ನು ಬಾಯಿ ತುಂಬಾ ಹೊಗಳಿದ್ದರು. ಕರ್ನಾಟಕ ದಲ್ಲಿ ವಿಶೇಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬರಹ ರಂಗದಲ್ಲಿ ನೂರಕ್ಕೂ ಮಿಕ್ಕ ಬರಹಗಾರರಿದ್ದಾರೆ. ಆದರೆ, ಯೂನುಸ್ ಇಮ್ದಾದಿ ಯವರಂತ ಬರಹ ಗಾರರು ಅಪರೂಪ. ಓದುಗರನ್ನು ಆಕರ್ಷಿಸುವ ಬರಹ ಶೈಲಿ, ಪ್ರತೀ ತಿಂಗಳು ಆಕರ್ಷಣೀಯ ಬರಹ ಮೂಲಕ ಪತ್ರಿಕೆ ಓದುಗರಿಗೆ ಬೋರ್ ...

ಕರ್ನಾಟಕ ಮುಸ್ಲಿಂ‌ ಜಮಾಅತ್ ಮತದಾರರಿಗೆ ಕರೆ

ಬೆಂಗಳೂರು, ಮಾ.25: ಜಾತ್ಯತೀತ ಭಾರತದ ಭವ್ಯ ಪರಂಪರೆಯನ್ನು ಭದ್ರಗೊಳಿಸುವ, ಸಮಾಜದ ಶೋಷಿತ ಮತ್ತು ದಮನಿತ ವರ್ಗಗಳ ಹಿತವನ್ನು ಕಾಪಾಡುವ ನಾಯಕರ ಕೈಗೆ ದೇಶದ ಚುಕ್ಕಾಣಿ ನೀಡುವಂತೆ ಕರ್ನಾಟಕ ಮುಸ್ಲಿಂ‌ ಜಮಾಅತ್ ಮತದಾರರಿಗೆ ಕರೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ‌ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್‌.ಕೆ.ಎಂ.ಶಾಫಿ ಸ‌ಅದಿ ಬೆಂಗಳೂರು, ಈ ಲೋಕಸಭಾ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರದ ಸಾಂವಿಧಾನಿಕ ಮೌಲ್ಯವನ್ನು ಕಾಪಾಡಿ ದಮನಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬಲ್ಲ ಸುಭದ್ರ ಸರಕಾರದ ರಚನೆಯ ಪ್ರಕ್ರಿಯೆಯಲ್ಲಿ ನಾಗರಿಕರು ರಚನಾತ್ಮಕವಾಗಿ ಪಾಲ್ಗೊಳ್ಳಬೇಕು. ಮತದಾನದ ಶೇಕಡಾವಾರು ಪ್ರಮಾಣವು ಈ ಹಿಂದೆಂದಿಗಿಂತಲೂ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು. ರಾಜ್ಯದ ಜನಸಂಖ್ಯಯ 15 ಶೇ.ದಷ್ಟಿರುವ ಮುಸ್ಲಿಂ‌ ಸಮುದಾಯವನ್ನು ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದು, ಕಡೇ ಪಕ್ಷ ಮುಸ್ಲಿಂ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸದೇ ಹಿಂದೇಟು ಹಾಕಿರುವುದು ದುರದೃಷ್ಟಕರ. ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟೇ ಸಬಲೀಕರಣಗೊಳ್ಳಬೇಕಾದ ಸಮುದಾಯವೊಂದನ್ನು ರಾಜಕೀಯ ಪಕ್ಷಗಳು ಈ ರೀತಿ ಕಡೆಗಣಿಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ರಾಜಕೀಯ ಧೋರಣೆಯನ್ನು ಸ...

ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ

ಎಸ್ಕೆಎಸ್ಸೆಸ್ಸೆಫ್ ನಾಯಕ ಲತೀಫ್ ನೆಲ್ಲಿಚ್ಚೋಡ್ ಬರೆಯುತ್ತಾರೆ.. ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ ಜೋರ್ಡಾನ್ ರಾಜ ಎರಡನೆಯ ಕಿಂಗ್ ಅಬ್ದುಲ್ಲಾರ ಭಾರತ ಸಂದರ್ಶನದ ಭಾಗವಾಗಿ ಆಥಿತ್ಯ ಸಮಾರಂಭದಲ್ಲಿ ಸರಕಾರದ ಆಹ್ವಾನಿತರಾಗಿಯಾಗಿದೆ ಕಾಂತಪುರಂ ಉಸ್ತಾದ್ ದೆಹಲಿಗೆ ತಲುಪಿದ್ದು. ಭಯಾನಕವಾದ ಸನ್ನಿವೇಶವೊಂದು ಅಲ್ಲಿ ಸಂಭವಿಸಿದೆ ಎಂಬ ರೀತಿಯಲ್ಲಾಗಿತ್ತು ಈ ಒಂದು ಸಮ್ಮಿಲವನ್ನು ಹಲವಾರು ಜನರು ಸಾಮಾಜಿಕ ತಾಣಗಳಲ್ಲಿ ಇಲ್ಲ ಸಲ್ಲದ ಅಪವಾದದೊಂದಿಗೆ ಪ್ರಚಾರಪಡಿಸುತ್ತಿದ್ದರು. ಅಲ್ಲದಿದ್ದರೂ ಯಾವುದೇ ಒಂದು ವಿಷಯವನ್ನು ಸ್ಪಷ್ಟವಾಗಿ ಕಲಿಯದೆ, ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬರೆಯುವ ಅಥವಾ ಹೇಳುವ ಒಂದು ಪ್ರಹಸನವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚಾಗಿ ಕಂಡುಬರುವಂತದ್ದು‌.. ಇಲ್ಲಿನ ವಿಷಯಕ್ಕೆ ಬರುವ ಮೊದಲಾಗಿ ಚರಿತ್ರೆಯ ಕಡೆ ಒಮ್ಮೆ ಹಿಂತಿರುಗಿ ಹೋಗಿ ಅವಲೋಕನ ನಡೆಸೋಣ. ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಂಧರ್ಭ  ಜಂರದಲ್ಲಿ ಕಲ್ಲೆಸೆಯುವ ವೇಳೆಯಲ್ಲಿ ಪ್ರವಾದಿಯ ಬಳಿ ಒಬ್ಬರು ಬಂದು ಕೇಳುತ್ತಾರೆ. ಓ ಹಬೀಬರೇ, ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು? ಅದಕ್ಕೆ ಹಬೀಬರು ಯಾವುದೇ ಉತ್ತರ ನೀಡಲಿಲ್ಲ. ಆ ವ್ಯಕ್ತಿಯು ಅದೇ ಪ್ರಶ್ನೆಯನ್ನು ನಾಲ್ಕು ಬಾರಿ ಆವರ್ತಿಸಿ ಕೇಳಿದರೂ  ಮೌನವಾಗಿತ್ತು ಹಬೀಬರ ಉತ್ತರ. ಹಜ್ಜ್ ಕರ್ಮವು ಪೂರ್ತಿಗೊಳಿಸಿ ಒಂಟೆಯ ಮೇಲೇರಿ ಮರಳುವ ಸಂಧರ...

ರಜಬ್ ತಿಂಗಳ ಚಂದ್ರದರ್ಶನ

ರಜಬ್ ತಿಂಗಳ ಚಂದ್ರದರ್ಶನ ಕೋಝಿಕೋಡಿನಲ್ಲಿ ಇಂದು (ಗುರುವಾರ ಅಸ್ತ ಶುಕ್ರವಾರ)ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 08-03-2019 ಶುಕ್ರವಾರ ( ನಾಳೆ ) ರಜಬ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 08-03-2019 is first of Rajab