ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಮಹಾಸಭೆಯು ಉಳ್ಳಾಲ ತೋಟದ ಇಶಾಅತುಸ್ಸುನ್ನಃ ಮದ್ರಸದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಂದರಭಾಗ್ ಬದ್ರಿಯ್ಯ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮೀಯಪದವು ದುಆ ನೆರವೇರಿಸಿದರು. ರೇಂಜ್ ಪರೀಕ್ಷಾ ವಿಭಾಗದ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯನ್ನು ಉದ್ಘಾಟಿಸಿದರು. 2021-22 ನೇ ಸಾಲಿನ ವಿವಿಧ ವಿಭಾಗದ ವಾರ್ಷಿಕ ವರದಿಗಳು ಮತ್ತು ಲೆಕ್ಕಪತ್ರ ಮಂಡಿಸಲಾಯಿತು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರು ಅಧ್ಯಕ್ಷತಾ ಭಾಷಣ ಮಾಡಿದರು. ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್, ಅಧ್ಯಕ್ಷರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಬಶೀರ್ ಸಖಾಫಿ ಉಳ್ಳಾಲ ಪುನರಾಯ್ಕೆಯಾದರು. ಎಕ್ಸಾಂ, ಐಟಿ, ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ...