Skip to main content

Posts

Showing posts from September, 2019

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪೆರಿಯಪಾದೆ ಬ್ರಾಂಚ್ ಮಹಾಸಭೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪೆರಿಯಪಾದೆ ಬ್ರಾಂಚ್ ಮಹಾಸಭೆ ಇಂದು ಪೆರಿಯಪಾದೆಯಲ್ಲಿ ನಡೆಯಿತು.  ಎಸ್.ವೈ.ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಶ್ರಫ್ ಮದನಿ ಬಂಟ್ವಾಳ ಉದ್ಘಾಟಿಸಿ ವಿಷಯ ಮಂಡಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಎಸ್.ಆರ್.ಟಿ.ಸಿ ವೀಕ್ಷಕರಾಗಿ ಆಗಮಿಸಿ ಚುನಾವಣಾ ತರಗತಿ ನಡೆಸಿದರು. ನಂತರ ಹೊಸ ಸಮಿತಿಗೆ ರೂಪುಗೊಡಲಾಯಿತು. ಅಧ್ಯಕ್ಷರಾಗಿ ಆದಂ ಗಣಪಲಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಆದಂ ಗೇಣಿ, ಕೋಶಾಧಿಕಾರಿಯಾಗಿ ಇಬ್ರಾಹಿಮ್ ಗಣಪಳಿಕೆ ಹಾಗೂ ಹನ್ನೊಂದು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಹಾರಿಸ್ ಪೆರಿಯಪಾದೆ ಸ್ವಾಗತಿಸಿ, ಝಮೀರ್ ಪೆರಿಯಪಾದೆ ವಂದಿಸಿದರು.

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ "ಹಳೆಬೇರು ಹೊಸಚಿಗುರು" ಕಾರ್ಯಕ್ರಮ

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ "ಹಳೆಬೇರು ಹೊಸಚಿಗುರು" ಕಾರ್ಯಕ್ರಮ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವತಿಯಿಂದ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಛೇರಿಯಲ್ಲಿ *"ಹಳೆ ಬೇರು ಹೊಸ ಚಿಗುರು"* ಎಂಬ ಕಾರ್ಯಕ್ರಮ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉದ್ಘಾಟಿಸಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು. ಎಸ್.ವೈ.ಎಸ್ ನೇತಾರರಾದ ಅಬ್ದುಲ್ಲಾ ಕೊಳಕೆ, ಉಸ್ಮಾನ್ ಮಲಿಕ್ ನಂದಾವರ ತಮ್ಮ ಬಾಲ್ಯದಲ್ಲಿನ ಸಂಘಟನೆಯ ಅನುಭವವನ್ನು ವಿವರಿಸಿದರು. ಇಸ್ಹಾಕ್ ಝುಹುರಿ ಸೂರಿಂಜೆ "ಹಳೆಬೇರು ಹೊಸಚಿಗುರು" ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಸಹಿತ ಡಿವಿಷನ್ ಮತ್ತು  ಸೆಕ್ಟರಿನ ಎಕ್ಸಿಕ್ಯೂಟಿವ್ ಸದಸ್ಯರು ಭಾಗವಹಿಸಿದರು. 🔗ಹಾರಿಸ್ ಪೆರಿಯಪಾದೆ🔗 _(ಪ್ರಧಾನ ಕಾರ್ಯದರ್ಶಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್)_

ಪ್ರವಾಹ ಸಂತ್ರಸ್ತರಿಗಾಗಿ ಬರೋಬ್ಬರಿ ಮೂರು ಲಕ್ಷದಷ್ಟು ವಸ್ತುಗಳ ಶೇಖರಣೆ

ಕರ್ನಾಟಕದ ಪ್ರವಾಹ ಪೀಡಿತ ಮಕ್ಕಳಿಗಾಗಿ ಎಸ್ಸೆಸ್ಸೆಫ್ ಪಟ್ಲ ಶಾಖೆಯ ವತಿಯಿಂದ ಶಾಲಾ ಪುಸ್ತಕಗಳು, ಬ್ಯಾಗ್ ಗಳು, ವಸ್ತ್ರಗಳು ಹಾಗು ಇನ್ನಿತರ ಅಗತ್ಯ ವಸ್ತುಗಳ ಸಂಗ್ರಹಣೆ. ಮನ ಮಿಡಿದ ಪಟ್ಲ, ಕಲ್ಲಾಪು ನಿವಾಸಿಗಳಿಂದ ಹರಿದು ಬಂದ ಸಹಾಯದ ಹಸ್ತ. ಪ್ರವಾಹ ಸಂತ್ರಸ್ತರಿಗಾಗಿ ಬರೋಬ್ಬರಿ ಮೂರು ಲಕ್ಷದಷ್ಟು ವಸ್ತುಗಳ ಶೇಖರಣೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಇದರ ನಿರ್ದೇಶದಂತೆ ಆಗಸ್ಟ್ 25 ರಂದು ರಾಜ್ಯಾದ್ಯಂತ ಪ್ರವಾಹ ಪೀಡಿತ ಮಕ್ಕಳಿಗಾಗಿ ಪುಸ್ತಕ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿರ್ದೇಶನುಸಾರ SSF ಪಟ್ಲ ಶಾಖೆಯ ವತಿಯಿಂದ ನಡೆದ ಪುಸ್ತಕ ಶೇಖರಣಾ ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಲಕ್ಷದಷ್ಟು ಮೌಲ್ಯದ ಶಾಲಾ ನೋಟ್ಸ್, ಬ್ಯಾಗ್, ಡ್ರೆಸ್ ಹಾಗು ಅಗತ್ಯ ವಸ್ತುಗಳ ಸಂಗ್ರಹಣೆ ನಡೆಸಲಾಯಿತು. ಉಳ್ಳಾಲದ ಪಟ್ಲ ಹಾಗು ಕಲ್ಲಾಪು ಪರಿಸರ ನಿವಾಸಿಗಳು ಸ್ಪಂದಿಸಿ ಸಹಾಯ ಹಸ್ತ ಚಾಚಿದರು. ಪಟ್ಲ ಶಾಖಾಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದರು. ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಸ್ತಫ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಬಶೀರ್ ಲತೀಫಿ, ಎಸ್ ವೈ ಎಸ್ ...