ಕರ್ನಾಟಕದ ಪ್ರವಾಹ ಪೀಡಿತ ಮಕ್ಕಳಿಗಾಗಿ ಎಸ್ಸೆಸ್ಸೆಫ್ ಪಟ್ಲ ಶಾಖೆಯ ವತಿಯಿಂದ ಶಾಲಾ ಪುಸ್ತಕಗಳು, ಬ್ಯಾಗ್ ಗಳು, ವಸ್ತ್ರಗಳು ಹಾಗು ಇನ್ನಿತರ ಅಗತ್ಯ ವಸ್ತುಗಳ ಸಂಗ್ರಹಣೆ.
ಮನ ಮಿಡಿದ ಪಟ್ಲ, ಕಲ್ಲಾಪು ನಿವಾಸಿಗಳಿಂದ ಹರಿದು ಬಂದ ಸಹಾಯದ ಹಸ್ತ.
ಪ್ರವಾಹ ಸಂತ್ರಸ್ತರಿಗಾಗಿ ಬರೋಬ್ಬರಿ ಮೂರು ಲಕ್ಷದಷ್ಟು ವಸ್ತುಗಳ ಶೇಖರಣೆ
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಇದರ ನಿರ್ದೇಶದಂತೆ ಆಗಸ್ಟ್ 25 ರಂದು ರಾಜ್ಯಾದ್ಯಂತ ಪ್ರವಾಹ ಪೀಡಿತ ಮಕ್ಕಳಿಗಾಗಿ ಪುಸ್ತಕ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿರ್ದೇಶನುಸಾರ SSF ಪಟ್ಲ ಶಾಖೆಯ ವತಿಯಿಂದ ನಡೆದ ಪುಸ್ತಕ ಶೇಖರಣಾ ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಲಕ್ಷದಷ್ಟು ಮೌಲ್ಯದ ಶಾಲಾ ನೋಟ್ಸ್, ಬ್ಯಾಗ್, ಡ್ರೆಸ್ ಹಾಗು ಅಗತ್ಯ ವಸ್ತುಗಳ ಸಂಗ್ರಹಣೆ ನಡೆಸಲಾಯಿತು. ಉಳ್ಳಾಲದ ಪಟ್ಲ ಹಾಗು ಕಲ್ಲಾಪು ಪರಿಸರ ನಿವಾಸಿಗಳು ಸ್ಪಂದಿಸಿ ಸಹಾಯ ಹಸ್ತ ಚಾಚಿದರು. ಪಟ್ಲ ಶಾಖಾಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದರು. ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಸ್ತಫ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಬಶೀರ್ ಲತೀಫಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಮುಹ್ಯಿದ್ದೀನ್ ಮುಸ್ಲಿಯಾರ್, ದ.ಕ ಜಿಲ್ಲಾ ವಖ್ಫ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಹಾಗು ಪಟ್ಲ ಶಾಖಾ ಕೋಶಾಧಿಕಾರಿ ಶಿಹಾಬ್ ಉಪಸ್ಥಿತರಿದ್ದರು. ಶಫೀಕ್ ಅಹ್ಸನಿ ಸ್ವಾಗತಿಸಿದರು.










