Skip to main content

Posts

Showing posts from July, 2023

ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವತಿಯಿಂದ ವಿದ್ವಾಂಸರಿಗಾಗಿ ನಡೆದ ಫತ್ಹುಲ್ ಮುಈನ್ ದರ್ಸ್ ಉದ್ಘಾಟನಾ ಕಾರ್ಯಕ್ರಮ

ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವತಿಯಿಂದ ವಿದ್ವಾಂಸರಿಗಾಗಿ ಫತ್ಹುಲ್ ಮುಈನ್ ದರ್ಸ್ ಉದ್ಘಾಟನಾ ಕಾರ್ಯಕ್ರಮ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮದನಿ ಹಾಲ್ ನಲ್ಲಿ ಜರುಗಿತು. ಸುನ್ನೀ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್  ಇದರ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಧ್ಯಕ್ಷತೆ ವಹಿಸಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ಸಅದಿ ಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಮದನಿ ದಅವಾ ಮತ್ತು ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಹ್ಮದ್ ಕುಟ್ಟಿ ಸಖಾಫಿ ಫತ್ಹುಲ್ ಮುಈನ್ ದರ್ಸಿಗೆ ಚಾಲನೆ ನೀಡಿದರು. ಶಿಹಾಬುದ್ದೀನ್ ಸಖಾಫಿ ಉಳ್ಳಾಲ  ಅಧ್ಯಕ್ಷತಾ ಭಾಷಣ ಮಾಡಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ  ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಮಾಡಿದರು.

ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ರವರ ನೇತ್ರತ್ವದಲ್ಲಿ ನಿನ್ನೆ ನಡೆದ ದ್ಸಿಕ್ರ್ ಮಜ್ಲಿಸ್.

ಮಳೆ ಗಾಳಿ, ಜಾಗ್ರತೆ ಪಾಲಿಸಿ

ರಾಜ್ಯದಾದ್ಯಂತ ಮಳೆಗಾಳಿಯ ಆರ್ಭಟ ತೀವ್ರವಾಗಿದ್ದು, ಅಪಾಯದ ಮುನ್ಸೂಚನೆ ಇರುವ ಮನೆ, ತಗ್ಗು  ಪ್ರದೇಶದ  ಮತ್ತು  ಕಡಲು  ಕಿನಾರೆ  ನಿವಾಸಿಗಳು  ಆದಷ್ಟು ಜಾಗ್ರತೆ ವಹಿಸಬೇಕು. ದಾರಿ ಬದಿಯಲ್ಲಿರುವ ವಿದ್ಯುತ್ ಕಂಬಗಳ ಬಳಿ ಮಳೆ ಬರುವ ಸಮಯದಲ್ಲಿ ನಿಲ್ಲುವುದೋ ನಡೆದಾಡುವುದೋ ಮಾಡಬೇಡಿ. ಶಾಲಾ ಮದ್ರಸಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವಾಗ ಜಾಗ್ರತೆ ಪಾಲಿಸಿ.  ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆ