Skip to main content

Posts

Showing posts from June, 2021

ಆಝಾದ್ ನಗರ ಯೂತ್ ಫೌಂಡೇಶನ್ ಅಸ್ತಿತ್ವಕ್ಕೆ.

ಆಝಾದ್ ನಗರ ಯೂತ್ ಫೌಂಡೇಶನ್ ಅಸ್ತಿತ್ವಕ್ಕೆ. ಉಳ್ಳಾಲ : ಮಾಸ್ತಿಕಟ್ಟೆ  ಆಝಾದ್  ನಗರದ  ನಾಗರಿಕರು,  ಯುವಕರು  ಸೇರಿ  ಆಝಾದ್  ನಗರದಲ್ಲಿ  ನಡೆದ  ಸಭೆಯಲ್ಲಿ  ಆಝಾದ್  ನಗರ ಯೂತ್  ಫೌಂಡೇಶನ್  ಅಸ್ತಿತ್ವಕ್ಕೆ  ತರಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಶೌಕತ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಅರಾಫತ್, ಕೋಶಾಧಿಕಾರಿಯಾಗಿ ಮುಹಮ್ಮ ದ್ ಫ್ಯಾನ್ಸಿ, ಉಪಾಧ್ಯಕ್ಷರಾಗಿ ಅಜ್ಮಲ್ ಹಾಗು ಫಾರೂಕ್, ಜೊತೆ ಕಾರ್ಯದರ್ಶಿಯಾಗಿ ಶಂಸುದ್ದೀನ್ ಹಾಗು ಅಝರ್, ಲೆಕ್ಕ ಪರಿಶೋಧಕರಾಗಿ ಇಲ್ಯಾಸ್ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅನ್ವರ್, ಮುಜಮ್ಮಿಲ್, ತನ್ಝೀಲ್, ಫಯಾಜ್ (ಆಟೋ), ಫಹದ್,ಅಶ್ರಫ್, ಫಾರೂಕ್ ಇವರುಗಳನ್ನು ಆರಿಸಲಾಯಿತು. ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ, ಬಡ ರೋಗಿಗಳ ಚಿಕಿತ್ಸಾ ನೆರವು, ಅರ್ಹ ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳ ಪೂರೈಕೆ ಹಾಗು ಇನ್ನಿತರ ಸಮಾಜಮುಖಿ ಸಾಂತ್ವನ ಚಟುವಟಿಕೆಗಳೊಂದಿಗೆ ಈ ಫೌಂಡೇಶನ್ ಕಾರ್ಯಾಚರಿಸಲಿದೆ. ಪ್ರಸ್ತುತ ಫೌಂಡೇಶನಿನ ಊರಿನ ಸದಸ್ಯರು ಮಾಸಿಕ 200, ವಿದೇಶದಲ್ಲಿರುವ ಸದಸ್ಯರು 500 ರೂಪಾಯಿಗಳಂತೆ ಫೌಂಡೇಶನ್ ಕಾರ್ಯಚಟುವಟಿಕೆಗಳಿಗೆ ನೀಡುವುದು.

ಲಕ್ಷದ್ವೀಪ: ವಿವಾದಿತ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲವೆಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ

ಎಪಿ ಉಸ್ತಾದರಿಗೆ ದೂರವಾಣಿ  ಕರೆ ಮಾಡಿ ನಿಲುವು ಸ್ಪಷ್ಟಪಡಿಸಿದ ಅಮಿತ್ ಶಾ ಕೋಝಿಕೋಡ್ |  ಲಕ್ಷದ್ವೀಪ ಜನರ ಇಚ್ಛೆಗಳಿಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.  ಅಮಿತ್ ಶಾ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.  ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟು ಮಾಡುವ ಕಾರಣ ಮಧ್ಯಪ್ರವೇಶಿಸುವಂತೆ ಕೋರಿ ಕಾಂತಪುರಂ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.  ಇದನ್ನು ಓದಿದ ನಂತರ ಅವರು ನೇರವಾಗಿ ಕರೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಪತ್ರದಲ್ಲಿ ಎದ್ದಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು.  ಕೇಂದ್ರ ಸರ್ಕಾರ ಲಕ್ಷದ್ವೀಪ ಜನರೊಂದಿಗಿದೆ.  ದ್ವೀಪದ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ರಕ್ಷಿಸಲು ತೆಗೆದುಕೊಂಡ ಕ್ರಮಗಳೊಂದಿಗೆ  ಕೇಂದ್ರ ಸರ್ಕಾರ ನಿಲ್ಲುತ್ತದೆ. ಜನ ವಿರೋಧಿ ನೀತಿಗಳ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ಅಮಿತ್ ಶಾ ಹೇಳಿದರು. ಅದೇ ಸಮಯದಲ್ಲಿ, ದ್ವೀಪವಾಸಿಗಳು ಹೆಚ್ಚು ಭಯಭೀತರಾಗಿದ್ದಾರೆ ಮತ್ತು ಕಳೆದ ಆರು ತಿಂಗಳಲ್ಲಿ ಅವರ ಮೇಲೆ ಹೇರಿದ ಕಾನೂನುಗಳನ್ನು ಹಿಂ...