Skip to main content

Posts

Showing posts from 2018

ಎಸ್ ವೈ ಎಸ್ ಮಲಾರ್ ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ

ಎಸ್ ವೈ ಎಸ್ ಮಲಾರ್ ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಮಲಾರ್ ಬದ್ರಿಯಾ ನಗರದಲ್ಲಿ ಇತ್ತೀಚೆಗೆ ನಡೆಯಿತು. ಅಬ್ದುಲ್ ಅಝೀಝ್ ಮದನಿ ಮಲಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುರ್ರಶೀದ್ ಸಅದಿ ಮುಖ್ಯ ಪ್ರಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಹಿಮಮಿ, ಹೈದರ್ ಹಿಮಮಿ, ಅಬ್ದುಲ್ ಹಕೀಂ ಸಖಾಫಿ, ಎಸ್ ವೈ ಎಸ್ ಮಲಾರ್ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಗು ಕೋಶಾಧಿಕಾರಿ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಮುಕ್ಕಚ್ಚೇರಿ ಮದ್ರಸಾದಲ್ಲಿ‌ ಮದನಿ ಮೌಲಿದ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ

ಮುಕ್ಕಚ್ಚೇರಿ ಮದ್ರಸಾದಲ್ಲಿ‌ ಮದನಿ ಮೌಲಿದ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ ಉಳ್ಳಾಲ : ಇಲ್ಲಿನ ಅಲ್ ಮದ್ರಸತುಲ್ ಮುಬಾರಕ್ ಮುಕ್ಕಚ್ಚೇರಿ ವತಿಯಿಂದ ಮಾಸಂಪ್ರತಿ ನಡೆಸುವ ಮದನಿ ಮೌಲಿದ್ ಮತ್ತು  ಮಹಾನ್ ವಿದ್ವತ್ಪ್ರತಿಭೆ,ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ರವರ ಅನುಸ್ಮರಣಾ ಕಾರ್ಯಕ್ರಮ ನಡೆಯಿತು.ಮದ್ರಸದ ಮುಖ್ಯೋಪಾಧ್ಯಾಯ ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ‌ ಅನುಸ್ಮರಣಾ ಭಾಷಣ ಮಾಡಿದರು. ಕಳೆದ  ವರ್ಷ ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾದ ಐದು,ಏಳು ಮತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವನ್ನು ನೀಡಲಾಯಿತು. ಅಧ್ಯಾಪಕರಾದ ಅಬ್ಬಾಸ್ ಮದನಿ ಅಳೇಕಲ ದುಆ ನೆರವೇರಿಸಿದರು. ಮುಕ್ಕಚ್ಚೇರಿ ಜುಮಾ ಮಸೀದಿ ಉಪಾಧ್ಯಕ್ಷ     ಯು.ಡಿ.ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಕೋಯಾ ಹಾಜಿ.ಪ್ರಧಾನ  ಕಾರ್ಯದರ್ಶಿ ಹೈದರ್  ಮುಕ್ಕಚ್ಚೇರಿ,ಅಧ್ಯಾಪಕರಾದ ಅಬ್ದುಲ್ ಅಝೀಝ್ ಮದನಿ ಮಲಾರ್, ಹಂಝ ಮದನಿ ಹಳೆಕೋಟೆ,ಕರೀಮ್ ಮುಸ್ಲಿಯಾರ್ ಮುಕ್ಕಚ್ಚೇರಿ ಮುಂತಾದವರು ಉಪಸ್ಥಿತರಿದ್ದರು.

ನವೆಂಬರ್ 20 ಮಂಗಳವಾರ ಈದ್ ಮೀಲಾದ್

ನವೆಂಬರ್ 20 ಮಂಗಳವಾರ ಈದ್ ಮೀಲಾದ್ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಕೂರತ್ ತಂಙಳ್ ಘೋಷಣೆ ಇಂದು ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ  ರಬೀಉಲ್ ಅವ್ವಲ್ 1 ಮಾಸಾರಂಭ ಹಾಗೂ ರಬೀಉಲ್ ಅವ್ವಲ್ 12 ಈದ್ ಮೀಲಾ...

ಮಂಗಳೂರು ತಾಲೂಕು ಸಖಾಫೀಸ್ ಜಲ್ಸಃ ಕಾರ್ಯಕ್ರಮ

ಕರ್ನಾಟಕ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು  ಇದರ ಆಶ್ರಯದಲ್ಲಿ ಸಖಾಫೀಸ್ ಜಲ್ಸಾ ಕಾರ್ಯಕ್ರಮ ಪಡೀಲಿನ ಇಲ್ಮ್ ಸೆಂಟರಿನಲ್ಲಿ ನಡೆಯಿತು. ತಾಲೂಕು ಸಖಾಫಿ ಕೌನ್ಸಿಲ್ ನ ಅಧ್ಯಕ್ಷರಾದ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.  ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಎಸ್ ವೈ ಎಸ್ ಅಧ್ಯಕ್ಷರಾದ ಜಿ. ಎಂ ಮುಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ತರಗತಿ ನಡೆಸಿದರು. ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಃ ಪ್ರಾಸ್ತಾವಿಕವಾಗಿ ಮಾತನಾಡಿದರು. ತದ ನಂತರ  ನಮ್ಮಿಂದ ಕಣ್ಮರೆಯಾದ ಪ್ರಮುಖ ವಿದ್ವಾಂಸರು, ಸಮಸ್ತ ಉಪಾಧ್ಯಕ್ಷರು, ಸಅದಿಯಾ ಪ್ರಾಂಶುಪಾಲರು ಆಗಿದ್ದ ನಿಬ್ರಾಸುಲ್ ಉಲಮಾ ಶೈಖುನಾ  ಅಬ್ದುಲ್ ರಹಿಮಾನ್ ಮುಸ್ಲಿಯಾರ್ ( ಎ.ಕೆ ಉಸ್ತಾದ್ ) ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಸಖಾಫಿಗಳು ಉಪಸ್ಥಿತರಿದ್ದರು. ತಾಲೂಕು ಸಖಾಫಿ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ಸ್ವಾಗತಿಸಿ ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್ ಪದವು ಕಾರ್ಯಕ್ರಮ ನಿರೂಪಿಸಿದರು.

ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ

ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ 📝 *ಮುನೀರ್ ಸಖಾಫಿ, ಸಾಲೆತ್ತೂರು.* ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂ...

SJU ಉಳ್ಳಾಲ ಝೋನ್ "ಮುಲಾಖಾತ್" ಉಲಮಾ ಸಮ್ಮಿಲನ

ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ ಆಶ್ರಯದಲ್ಲಿ ಬ್ರಹತ್ ಉಲಮಾ ಸಮ್ಮಿಲನ ತೊಕ್ಕೋಟುವಿನ ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಿತು. ಉಳ್ಳಾಲ ಝೋನ್ ಅಧ್ಯಕ್ಷರಾದ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಶರೀಫ್ ಸಅದಿ ಸುಂದರಿಭಾಗ್ ಕಾರ್ಯಕ್ರಮ ಉದ್ಘಾಟಿಸಿದರು. ಜಂಇಯ್ಯತುಲ್ ಉಲಮಾ ಕರ್ನಾಟಕದ ರಾಜ್ಯ  ಕಾರ್ಯದರ್ಶಿ ಎಸ್. ಪಿ .ಹಂಝ ಸಖಾಫಿ ಮುಖ್ಯ ಭಾಷಣ ನಡೆಸಿದರು.  ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಫಿಕ್ಹ್ ತರಗತಿ ನಡೆಸಿಕೊಟ್ಟರು. ಪ್ರಸ್ತುತ ಕಾರ್ಯಕ್ರಮದಲ್ಲಿ ಸುನ್ನೀ ಯವ ಜನ ಸಂಘ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ತಲಪಾಡಿ ರೇಂಜ್ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್, ಉಳ್ಳಾಲ ರೇಂಜ್ ಪ್ರಧಾನ ಕಾರ್ಯದರ್ಶಿ ಯೂನುಸ್ ಇಮ್ದಾದಿ ಹಾಗು ಉಳ್ಳಾಲ ಝೋನ್ ವ್ಯಾಪ್ತಿಯ ಉಲಮಾಗಳು ಉಪಸ್ಥಿತರಿದ್ದರು. ಝೋನ್ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಯ್ಯಿದ್ ಮದನಿ ಉಳ್ಳಾಲ ರೇಂಜ್ ಸಭೆ

ಸೆಪ್ಟೆಂಬರ್ 25 ರಂದು ತಲಪಾಡಿ ಉಳ್ಳಾಲ ಝೋನ್ ಸುನ್ನೀ ಜಂಇಯ್ಯತುಲ್ ಉಲಮಾ ಆಶ್ರಯದಲ್ಲಿ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ನಡೆಯುವ ಬ್ರಹತ್ ಉಲಮಾ ಮುಲಾಖಾತ್ ಶಿಬಿರದ ಪ್ರಚಾರಾರ್ಥ ಸಯ್ಯಿದ್ ...

ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಹಾಗು ಪ್ರಾರ್ಥನಾ ಸಂಗಮ

ತಖ್ವಾ ಜುಮಾ ಮಸೀದಿ ಹಾಗು ಖವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ ಆಡಳಿತ ಸಮಿತಿ ಆಶ್ರಯದಲ್ಲಿ ಪ್ರಾರ್ಥನಾ ಸಂಗಮ ಹಾಗು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ  ಪಟ್ಲದ ಮದ್ರಸ ಹಾಲ್ ನಲ್ಲಿ ಜರುಗಿತು. ಪಟ್ಲ ಮಸೀದಿಯ ಮುದರ್ರಿಸ್ ಹಾಗು ಸಹ ಖತೀಬರಾದ ಅಬೂ ಮುಖ್ತಾರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಫೈಝಿ ಉಸ್ತಾದರ ವ್ಯಕ್ತಿತ್ವ, ಸರಳ ಸ್ವಭಾವ ನಮಗೆ ಮಾದರಿ ಅಂದರು. ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಕಿಂಚಿತ್ತೂ ಸಡಿಲ ಮನೋಭಾವ ತೋರಿಸದೆ ಎದೆಗಾರಿಕೆಯೊಂದಿಗೆ ಹೇಳುವ ವ್ಯಕ್ತಿತ್ವ ಅವರದಾಗಿದೆ ಎಂದು ತಿಳಿಸಿದರು. ಪಟ್ಲ ಮೋಙಂ ಫೈಝಿ ಉಸ್ತಾದರು ಮುಖ್ಯ ಪ್ರಭಾಷಣ ನಡೆಸಿ ಹಜ್ ಎಂಬುದು ಇಸ್ಲಾಮಿನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು ಸಾಧ್ಯವಿರುವವರು ಆಯುಷ್ಯದಲ್ಲಿ ಒಮ್ಮೆ ಹಜ್ ನಿರ್ವಹಿಸುವುದು ಕಡ್ಡಾಯವಾಗಿದೆ ಅಂದರು. ಬಳಿಕ ಪಟ್ಲ ಮಸೀದಿ ಮದ್ರಸದ ಆಡಳಿತ ಸಮಿತಿ, ಎಸ್ಸೆಸ್ಸೆಫ್ ಪಟ್ಲ ಶಾಖೆ ಹಾಗು ಪಳ್ಳಿ ದರ್ಸ್ ವಿದ್ಯಾರ್ಥಿಗಳ ವತಿಯಿಂದ ಹಜ್ ಯಾತ್ರೆಗೆ ಹೊರಟಿರುವ ಪಟ್ಲ ಉಸ್ತಾದರಿಗೆ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಅಧ್ಯಕ್ಷರೂ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಹಾಲಿ ನಾಯಕರಾದ ಸಯ್ಯಿದ್ ಖುಬೈಬ್ ತಂಗಳ್ ರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಮೊಯ್ದಿನ್, ಮದ್ರಸದ ಅಧ್ಯಾಪಕರಾದ ಶಾಫಿ ಸಖಾಫಿ, ಉಪಾಧ್ಯಕ್ಷ ಹಾರಿಸ್, ಪ್ರಧಾನ ಕಾರ್ಯದರ್ಶಿ ...