Skip to main content

Posts

Showing posts from April, 2019

ಜಗತ್ತಲ್ಲೇ ನನಗೆ ಅತೀ ಹೆಚ್ಚು ಪ್ರೀತಿ ಬುಖಾರಿ ಕ್ಲಾಸ್ ತೆಗೆದುಕೊಡುವುದಾಗಿದೆ - ಶೈಖುನಾ ಕಾಂತಪುರಂ ಉಸ್ತಾದ್

*💚ಜಗತ್ತಲ್ಲೇ ನನಗೆ ಅತೀ ಹೆಚ್ಚು ಪ್ರೀತಿ ಬುಖಾರಿ ಕ್ಲಾಸ್ ತೆಗೆದುಕೊಡುವುದಾಗಿದೆ - ಶೈಖುನಾ ಕಾಂತಪುರಂ ಉಸ್ತಾದ್💚* *✍🏻ನೌಷಾದ್ ಸಖಾಫಿ ಮುರ* ಬೆಳ್ಳಂಬೆಳಗ್ಗೆ ನೇಸರ ನೇತ್ತಿಗೆ ತಲುಪುವುದಕ್ಕೆ ಮುಂಚಿತವಾಗಿ ನನಗೊಂದು ಕಾಂತಿಯುತ  ಸೂರ್ಯೋದಯ ಕೂಡಾ ಇತ್ತು.  ಶ್ವೇತಧಾರಿಯಾಗಿ ನಕ್ಷತ್ರಕ್ಕೆ ಸರಿಸಾಟಿಯಾದ ಕಾಂತಿಯುತ ಮಂದಸ್ಮಿತ ನಗುವುಳ್ಳ ಕೈಯಲ್ಲೊಂದು ತಸ್ಬೀಹ್ ಮಾಲೆಯನ್ನಿಡಿಯುತ್ತಾ ತನ್ನ ಎಡ-ಬಲ ಭಾಗದಲ್ಲೂ ಶಿಷ್ಯಂದಿರ ಕೈ ಹಿಡಿಯುತ್ತಾ ಮುಗುಳುನಗೆಯೊಂದಿಗೆ ದಿನಂಪ್ರತಿ ಬುಖಾರಿ ತರಗತಿಗೆ ಬರುತ್ತಿದ್ದ ನನ್ನ ಶೈಖುನಾರಾಗಿದ್ದರು ಅದು. ನೂರಾರು ಸಂದರ್ಶಕರು ದಿನಂಪ್ರತಿ ಮುಂಜಾನೆ ಉಸ್ತಾದರ ಕಾಣಲು ಬರುತ್ತಿದ್ದು ಅವರ ಸಮಸ್ಯೆಗಳಿಗೆಲ್ಲಾ ಪರಿಹಾರ ನೀಡಿ ಸಾವಿರಕ್ಕೂ ಮಿಕ್ಕ ಶಿಷ್ಯ ಪಡೆಗೆ ತರಗತಿ ತೆಗೆಯಲು ಬರುತ್ತಿದ್ದ ದೃಶ್ಯ ವಿವರಣಾತೀತ. ರಾಜ ಗಾಂಭೀರ್ಯದೊಂದಿಗೆ ಉಸ್ತಾದರು ಬರುತ್ತಿದ್ದ ಆ‌ ಮರೆಯಲಸಾಧ್ಯ ದೃಶ್ಯ ಇಂದು ನನ್ನ ಕಣ್ಣು ಕುಕ್ಕುತ್ತಿದೆ. ಜಗತ್ತಿನ ಅಷ್ಟ ದಿಕ್ಕಿಗೆ ಹೋದರೂ ಅಲ್ಲಿ ನನಗೆ ಸಿಗುವ ಗೌರವ,‌ ಸನ್ಮಾನ, ಅಂಗೀಕಾರ, ಕ್ಕಿಂತ ದರ್ಸ್ ತೆಗೆಯುವುದರಲ್ಲಾಗುವಷ್ಟು ಮನೋ-ನೆಮ್ಮದಿ ನನ್ನ ಜೀವನದಲ್ಲಿ ಬೇರೆ ಇಲ್ಲಾ ಎಂದು ಶೈಖುನಾ ಹಲವು ಬಾರಿ ಹೇಳಿದ್ದುಂಟು. ದಿನಂಪ್ರತಿ ತರಗತಿ ತೆಗೆದುಕೊಡುವುದರಲ್ಲಿ ಆಗುವ ಹಪಹಪಿ, ಬಯಕೆ ಇಮ್ಮಡಿಯಾಗುತ್ತಿದ್ದು ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಬೇಕೆಂದು ಉಸ್ತಾದ್ ಹೇಳ...

ಚುನಾವಣಾ ಸಭೆಯಲ್ಲಿ ಉಲಮಾ ನಿಂದನೆ: ದ.ಕ ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ

ಮಂಗಳೂರು: ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಬಹಿರಂಗ ವಾಗಿ ಧಾರ್ಮಿಕ ಉಲಮಾಗಳನ್ನು ಹಾಗು ಶರೀಅತ್ ನ್ನು ನಿಂದಿಸಿ ಮಾತನಾಡಿರುವುದನ್ನು  ಎಸ್ಸೆಸ್ಸೆಪ್ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.  ಭಾಷಣವು ವಿವಾದವಾದ ಬಳಿಕ  ಧ್ವನಿಸಂದೇಶದ ಮೂಲಕ ಕೊಟ್ಟ ಸ್ಪಷ್ಟೀಕರಣವು ಅಸ್ಪಷ್ಟ ಹಾಗೂ ದ್ವಂದ್ವದಿಂದ ಕೂಡಿದೆ. ಬಹಿರಂಗ ಸಭೆಯಲ್ಲಿ ಮಾಡಿದ ತಪ್ಪಿಗೆ ಬರೀ ಧ್ವನಿಸಂದೇಶದ ಕ್ಷಮೆ ಕೇಳುವ ಮೂಲಕ  ತೇಪೆ ಹಚ್ಚಿರುವುದನ್ನು ಸಮುದಾಯ ಒಪ್ಪುವುದಿಲ್ಲ ಎಂದು ಎಸ್ಸೆಸ್ಸೆಫ್ ಅಭಿಪ್ರಾಯಿಸಿದೆ. ಉಲಮಾಗಳು ಮುಸ್ಲಿಂ‌ ಸಮುದಾಯವನ್ನು  ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ. ಉಲಮಾಗಳಿಗೆ ಸವಾಲೆಸೆಯುವ ನೈತಿಕ ಹಕ್ಕು ಯಾವುದೇ ರಾಜಕಾರಣಿಗಳಿಗಿಲ್ಲ. ಎಸ್ಸೆಸ್ಸೆಫ್ ಸಂಘಟನೆಯೂ ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ. ವಿರುದ್ಧವೂ ಅಲ್ಲ. ಮತದಾನದಲ್ಲಿ ಎಲ್ಲರು ಭಾಗವಹಿಸಿ, ದೇಶದ  ಸಂವಿಧಾನವನ್ನು ರಕ್ಷಿಸಬಲ್ಲ ಅಭ್ಯರ್ಥಿಗೆ ಮತಚಲಾಯಿಸುವಂತೆ  ದ.ಕ ಜಿಲ್ಲಾ ಎಸ್ಸೆಸ್ಸೆಪ್ ಪತ್ರಿಕಾ ಹೇಳಿಕೆಯಲ್ಲಿ ಕರೆ ‌ನೀಡಿದೆ.

ತೋಕೆ ಉಸ್ತಾದರ ದಾರುಲ್ ಮುಸ್ತಫಾ ಸಂಸ್ಥೆಯನ್ನು ಬಲಪಡಿಸೋಣ..

ಕರ್ನಾಟಕದಲ್ಲಿ ಧಾರ್ಮಿಕ ವಿಷಯಗಳಲ್ಲಿ ಅಧಿಕೃತ ಫತ್ವಾ ನೀಡಲು ಅರ್ಹರಾಗಿರುವ ಕರ್ನಾಟಕ ಉಲಮಾ ಒಕ್ಕೂಟದ ನಾಯಕ ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಅಬ್ಬಾಸ್ ಉಸ್ತಾದರಂತಹ ಪ್ರಮುಖ ವಿದ್ವಾಂಸರ ನಂತರ ಕೇಳಿ ಬರುವ ಹೆಸರಾಗಿದೆ ತೋಕೆ ಉಸ್ತಾದ್! ಯುವಕ ಆದರೆ ಅಗಾಧ ಪಾಂಡಿತ್ಯ. ಮೃದು ಸ್ವಭಾವಿ, ಆದರೆ ಅಸುನ್ನಿ ಕಂಡರೆ ಕೆಂಡವಾಗುತ್ತಾರೆ. ಸಾಕ್ಷಾತ್ ಇಕೆ ಹಸನ್ ಉಸ್ತಾದರ ಸ್ವಭಾವದಂತೆ. ಇಡೀ ಕರ್ನಾಟಕದಲ್ಲಿ ಕಳ್ಳ ತ್ವರೀಖತ್ ಸಹಿತ ಸುನ್ನಿಯೇತರರಿಗೆ ತೋಕೆ ಉಸ್ತಾದರ ಹೆಸರು ಕೇಳುವಾಗಲೇ ಚಳಿ ಹಿಡಿಯುತ್ತದೆ. ಅವರು ಎಂದಿಗೂ ಸುನ್ನೀ ವಿರುದ್ಧ ನಿಲುವುಗಳಲ್ಲಿ ರಾಜಿ ಮಾಡುವುದೇ ಇಲ್ಲ. ಇಡೀ ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿಯಾಗಿ 40ರ ಆಸುಪಾಸಿನ ಯುವಕ ಆಯ್ಕೆಯಾಗುವುದೆಂದರೆ ಆ ಯುವ ವಿದ್ವಾಂಸರ ಇಲ್ಮ್ ಎಷ್ಟಿರಬಹುದು? ಅವರ ಸಾರಥ್ಯದ ಸುನ್ನೀವಾಣಿ ಮಾಸಿಕದಲ್ಲಿ ಫಿಕ್ಹ್ ಕೋರ್ಟ್ ಎಂಬ ಕಾಲಂನಲ್ಲಿ ಸಮಕಾಲೀನ ಸಮಸ್ಯೆಗಳ ಪರಿಹಾರವಾಗಿ ಅವರು ಬರೆಯುತ್ತಿರುವ ಫಿಕ್ಹ್ (ಕರ್ಮಶಾಸ್ತ್ರ) ನಿಯಮಗಳು ಅವರ ಮಹಾ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದೆಂತಹ ಕ್ಲಿಷ್ಟಕರ ವಿಷಯಗಳಿಗೂ ಸಹ ಸಲೀಸಾಗಿ ಗ್ರಂಥಗಳ ಆಧಾರದಿಂದ ಪರಿಹಾರ ಕೊಡುವ ಅವರ ಶೈಲಿ ಅದ್ಭುತವೇ ಸರಿ. ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ *ಮುಲ್ತಖಲ್ ಅಸಾತಿದ್ಸಃ* ಎಂಬ ವಾಟ್ಸಪ್ ಗ್ರೂಪಲ್ಲಿ ಹಿರಿಯ ಮುದರ್ರಿಸರು, ಉಸ್ತಾದರುಗಳು ಇದ್ದಾರೆ. ಅಲ್ಲಿ ನಡೆಯುವ ಫಿಕ್ಹ್ ಚ...