*💚ಜಗತ್ತಲ್ಲೇ ನನಗೆ ಅತೀ ಹೆಚ್ಚು ಪ್ರೀತಿ ಬುಖಾರಿ ಕ್ಲಾಸ್ ತೆಗೆದುಕೊಡುವುದಾಗಿದೆ - ಶೈಖುನಾ ಕಾಂತಪುರಂ ಉಸ್ತಾದ್💚*
*✍🏻ನೌಷಾದ್ ಸಖಾಫಿ ಮುರ*
ಬೆಳ್ಳಂಬೆಳಗ್ಗೆ ನೇಸರ ನೇತ್ತಿಗೆ ತಲುಪುವುದಕ್ಕೆ ಮುಂಚಿತವಾಗಿ ನನಗೊಂದು ಕಾಂತಿಯುತ ಸೂರ್ಯೋದಯ ಕೂಡಾ ಇತ್ತು. ಶ್ವೇತಧಾರಿಯಾಗಿ ನಕ್ಷತ್ರಕ್ಕೆ ಸರಿಸಾಟಿಯಾದ ಕಾಂತಿಯುತ ಮಂದಸ್ಮಿತ ನಗುವುಳ್ಳ ಕೈಯಲ್ಲೊಂದು ತಸ್ಬೀಹ್ ಮಾಲೆಯನ್ನಿಡಿಯುತ್ತಾ ತನ್ನ ಎಡ-ಬಲ ಭಾಗದಲ್ಲೂ ಶಿಷ್ಯಂದಿರ ಕೈ ಹಿಡಿಯುತ್ತಾ ಮುಗುಳುನಗೆಯೊಂದಿಗೆ ದಿನಂಪ್ರತಿ ಬುಖಾರಿ ತರಗತಿಗೆ ಬರುತ್ತಿದ್ದ ನನ್ನ ಶೈಖುನಾರಾಗಿದ್ದರು ಅದು. ನೂರಾರು ಸಂದರ್ಶಕರು ದಿನಂಪ್ರತಿ ಮುಂಜಾನೆ ಉಸ್ತಾದರ ಕಾಣಲು ಬರುತ್ತಿದ್ದು ಅವರ ಸಮಸ್ಯೆಗಳಿಗೆಲ್ಲಾ ಪರಿಹಾರ ನೀಡಿ ಸಾವಿರಕ್ಕೂ ಮಿಕ್ಕ ಶಿಷ್ಯ ಪಡೆಗೆ ತರಗತಿ ತೆಗೆಯಲು ಬರುತ್ತಿದ್ದ ದೃಶ್ಯ ವಿವರಣಾತೀತ.
ರಾಜ ಗಾಂಭೀರ್ಯದೊಂದಿಗೆ ಉಸ್ತಾದರು ಬರುತ್ತಿದ್ದ ಆ ಮರೆಯಲಸಾಧ್ಯ ದೃಶ್ಯ ಇಂದು ನನ್ನ ಕಣ್ಣು ಕುಕ್ಕುತ್ತಿದೆ. ಜಗತ್ತಿನ ಅಷ್ಟ ದಿಕ್ಕಿಗೆ ಹೋದರೂ ಅಲ್ಲಿ ನನಗೆ ಸಿಗುವ ಗೌರವ, ಸನ್ಮಾನ, ಅಂಗೀಕಾರ, ಕ್ಕಿಂತ ದರ್ಸ್ ತೆಗೆಯುವುದರಲ್ಲಾಗುವಷ್ಟು ಮನೋ-ನೆಮ್ಮದಿ ನನ್ನ ಜೀವನದಲ್ಲಿ ಬೇರೆ ಇಲ್ಲಾ ಎಂದು ಶೈಖುನಾ ಹಲವು ಬಾರಿ ಹೇಳಿದ್ದುಂಟು. ದಿನಂಪ್ರತಿ ತರಗತಿ ತೆಗೆದುಕೊಡುವುದರಲ್ಲಿ ಆಗುವ ಹಪಹಪಿ, ಬಯಕೆ ಇಮ್ಮಡಿಯಾಗುತ್ತಿದ್ದು ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಬೇಕೆಂದು ಉಸ್ತಾದ್ ಹೇಳುವಾಗ ನನ್ನ ಮನ ಮಂತ್ರಿಸುತ್ತಿದ್ದ ಒಂದೇ ಒಂದು ವಚನ" ನನ್ನ ಆಯುಷ್ಯ ಕಮ್ಮಿಮಾಡಿಯಾದರೂ ಸರಿ ಅಲ್ಲಾಹ್ ಉಸ್ತಾದರಿಗೆ ನೀ ದೀರ್ಘಾಯುಷ್ಯ ನೀಡು" ಎಂದಾಗಿತ್ತು.
ಶ್ವೇತ ವರ್ಣದ ಎರಡು ಪ್ರತ್ಯೇಕ ಹೊದಿಕೆ ಹಾಸನಕ್ಕೂ, ಮೇಜಿಗೂ ಹಾಸಬೇಕು, ಹೂದ್ ಹೊತ್ತಿಸಬೇಕು, ಕಣ್ಣಡಕ ತೆಗೆದು ಅಣಿಮಾಡಿರಬೇಕು, ಬುಖಾರಿ ಕಿತಾಬ್ ತೆಗೆದುಕೊಂಡು ಬರಬೇಕು ಎಂಬಿತ್ಯಾದಿ ಸೇವೆ ದಿನಂಪ್ರತಿ ವೀಕ್ಷಿಸುತ್ತಾ ಮನತುಂಬಿಸಲು ಮಾತ್ರ ಸಾಧ್ಯವಾಯಿತೇ ಹೊರತು ಅಂತ ಸೇವೆ ಮಾಡಲು ಸಾಧ್ಯವಾಗಲಿಲ್ಲ.
ಪ್ರವಾದಿವರ್ಯರ ಪುಣ್ಯ ವಚನ ವಿವರಿಸಿಕೊಡುವಾಗ ಇಮಾಂ ಮಾಲಿಕ್(ರಲಿಯಲ್ಲಾಹು ಅನ್ಹು) ಶಿರಸ್ಸಾ ವಹಿಸುತ್ತಿದ್ದ ಮರ್ಯಾದೆ, ಪ್ರಾಧಾನ್ಯತೆಯಂತೆ ಮಹೋನ್ನತ ಪ್ರಾಧಾನ್ಯತೆ ಶೈಖುನಾ ಉಸ್ತಾದರು ಕೂಡಾ ತನ್ನ ಜೀವನದುದ್ದಕ್ಕೂ ಬುಖಾರಿ ದರ್ಸ್ ತೆಗೆದುಕೊಡುವುದರಲ್ಲಿ ಪಾಲಿಸುತ್ತಿದ್ದರು. ಒಂದು ಸುಪ್ರಧಾನ ಇಜಾಝತ್ ನೀಡಿದ ದಿನ ಇಂದು ನಾನು ಅತೀ ಹೆಚ್ಚು ಅಣಿಯಾಗಿ ಗೌರವಯುತವಾಗಿ ಬರುತ್ತಿದ್ದೇನೆ ಎಂದು ಉಸ್ತಾದರು ಹೇಳಿದ್ದು ಇಂದಿಗೂ ನನ್ನ ಸ್ಮ್ರತಿಪಟಲದಲ್ಲಿ ತೇಲಾಡುತ್ತಿದೆ.
ಪ್ರವಾದಿವರ್ಯರ ಜೀವನ ಪರಿಶುದ್ಧಿಗೆ ಕಿಂಚಿತ್ತೂ ಅಸಭ್ಯತೆ ಬಂದು ತಲುಪಬಾರದೆಂಬ ಕಟು ಬದ್ಧ ತೀರ್ಮಾನವೇ ಶೈಖುನಾ ಉಸ್ತಾದರ ಅಧ್ಯಾಪನಾ ಜೀವನದ ಸೂಕ್ಷ್ಮತೆಯಾಗಿತ್ತು. ಖಾದಿಯಾನಿ, ವಹ್ಹಾಬಿ ಕಿಂಕರರ ಮೊಂಡುವಾದಗಳನ್ನೆಲ್ಲಾ ಕಾಲಗರ್ಭದಲ್ಲಿ ಹೂತು ಹಾಕಿ ಸುನ್ನತ್ ಜಮಾ'ಅತಿಗೆ ಸುಭದ್ರ ತಳಹದಿಯನ್ನಿಡಲು ಶೈಖುನಾ ಉಸ್ತಾದರಿಗೆ ಸಾಧ್ಯವಾಗಿದ್ದು ಉಸ್ತಾದರ ಯಶಸ್ವಿ ಜೀವನಕ್ಕೆ ಒಂದು ಸಣ್ಣ ನಿದರ್ಶನವಾಗಿದೆ ಇದು.
ಮತ್ತೊಂದು ಸುಪ್ರಧಾನ ವಿಷಯವೆಂದರೆ ಪ್ರವಾದಿವರ್ಯರ ಪ್ರಕೀರ್ತನಾ ಮದ್ಹ್ ಹಾಡಿನೊಂದಿಗೆ ಉಸ್ತಾದರಿಗೆ ಇರುವ ಭತ್ತದ ಪ್ರೀತಿ ನಮಗೆಂದೂ ಆವೇಶವಾಗಿದೆ. ಉರ್ದು ನ'ಅತೇ ಶರೀಫಿಗೆ ಆಗಿದೆ ಉತ್ಕೃಷ್ಟ ಪ್ರಾಧಾನ್ಯತೆ. ತುಂಬಾ ಇಷ್ಟವಾದರೆ ಎಲ್ಲಾ ಸಖಾಫಿ ವಿದ್ಯಾರ್ಥಿಗಳನ್ನು ಎದ್ದು ನಿಲ್ಲಲು ಸೂಚಿಸುತ್ತಿದ್ದರು. ಸ್ವತಃ ಉಸ್ತಾದರು ಕೂಡಾ ಎದ್ದು ನಿಂತು ಗೌರವ ಸೂಚಿಸುವುದು ಕಂಡಾಗ ಉಸ್ತಾದರೊಂದಿಗಿನ ಪ್ರೀತಿ ಮನದಾಳದಿಂದ ಉಕ್ಕಿ ಬರುತ್ತಿತ್ತು. ಕೆಲವೊಮ್ಮೆ ಹಾಡು ಕೇಳುತ್ತಾ ಇದ್ದಂತೆ ಪ್ರವಾದಿ ಪ್ರೇಮ ಲಹರಿಯಲ್ಲಿ ತಣ್ಮಯವಾಗಿ ಕಣ್ಣಂಬನಿಯಿಂದ ಅಶ್ರುಧಾರೆಗಳು ತೊಟ್ಟಿಕ್ಕುತ್ತಿದ್ದ ದೃಶ್ಯ ಎಂದಿಗೂ ಅವಿಸ್ಮರಣೀಯ. ನ'ಅತ್ ಮುಗಿದ ನಂತರ ಒಂದೊಳ್ಳೆಯ ಸಂಖ್ಯೆ ಹಣ ನೀಡಿ ಪ್ರೋತ್ಸಾಹಿಸುತ್ತಿದ್ದದ್ದು ಶೈಖುನಾ ಉಸ್ತಾದರ ವಾಡಿಕೆಯಾಗಿದ್ದು ತರುವಾಯ ಪುನಃ ಹದೀಸ್ ಲೋಕದತ್ತ ಪ್ರವೇಶಿಸುತ್ತಿದ್ದರು. ಏತನ್ಮಧ್ಯೆ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರಶ್ನೆಗಳು ಕೇಳಿದರೆ ಬುಖಾರಿ ತರಗತಿಯ ವೇದಿಕೆಗೆ ಕರೆದು ಅವರನ್ನೂ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದದ್ದು ಜ್ಞಾನಮೃತ ಸವಿಯುದರಲ್ಲಿ ಉಸ್ತಾದರಿಗೆ ಇರುವ ಅದಮ್ಯ ಹಪಹಪಿಯನ್ನು ತಿಳಿ ಹೇಳಿಕೊಡುತ್ತದೆ.
ಪ್ರಶ್ನೆ ಪರಿಹಾರಗಳಿಗೆ ಜನರ ಹಿಂಡೇ ಮರ್ಕಝ್ ಓಫೀಸ್ ಮುಂದೆ ಜಮಾಯಿಸಿದ್ದರೂ ಪ್ರೀತಿಯ ಶಿಷ್ಯಂದಿರನ್ನು ಕಾಣಲು ನಮ್ಮ ಬಳಿ ಬರುತ್ತಿದ್ದಾಗ ಶಿಷ್ಯಂದಿರಾದ ನಮಗೆ ನಮ್ಮ ಮೇಲೇ ಅಹಂಕಾರ ಮೊಳಕೆಯೊಡೆಯುತ್ತಿತ್ತು. ಎಂದೂ ಹತ್ತಿರದಿಂದಲೇ ಕಾಣಬಹುದು, ಗಂಟೆಗಟ್ಟಲೆ ತರಗತಿ ಸಸೂಕ್ಷ್ಮವಾಗಿ ಕೇಳಬಹುದು, ಎಂತಹಾ ಆವಶ್ಯಕತೆ ಬೇಕಾದರೂ ಮನಬಿಚ್ಚಿ ತೋಡಿಕೊಳ್ಳಬಹುದು. ಅನುಗ್ರಹದ ಶಿಫಾರಸ್ಸು ಲಭಿಸಬಹುದು, ಶೈಖುನಾ ಉಸ್ತಾದರು ಕುಡಿಯುತ್ತಿದ್ದ ನೀರಿಗಾಗಿ ಕಾದಾಟ ಮಾಡಬಹುದು, ಉಸ್ತಾದರ ಪವಿತ್ರ ಕಮೀಸನ್ನಾದರೂ ಮುಟ್ಟಿ ಬರಕತ್ ಪಡೆಯಬಹುದು ಈ ರೀತಿ ಅವರ ಶಿಷ್ಯಂದಿರಿಗೆ ದಿನಂಪ್ರತಿ ಸಿಗುವ ಅನುಗ್ರಹದ ಪಟ್ಟಿ ಬಲು ದೊಡ್ಡದಾಗಿದೆ.
ಹದೀಸ್ ಶಾಸ್ತ್ರದಲ್ಲಿ ಉಸ್ತಾದರಿಗೆ ಇರುವ ಪಾಂಡಿತ್ಯ ವಿವರಣಾತೀತ, ಅದರಲ್ಲೂ ಕೆಲವೊಮ್ಮೆ ಹದೀಸ್ ಓದಿ ಕೊಡುವಾಗ ಕಳೆದು ಹೋದ ಸಚ್ಚರಿತ ಶ್ರೇಷ್ಠ ವ್ಯಕ್ತಿತ್ವಗಳಾದ ಸಿ.ಎಂ ವಲಿಯುಲ್ಲಾಹಿ, ಓ.ಕೆ ಉಸ್ತಾದ್ ಚಾಪನಙಾಡಿ ಬಾಪು ಉಸ್ತಾದ್ ಮುಂತಾದವರೊಂದಿಗೆ ನಡೆಸಿದ ಚರ್ಚೆಗಳು, ಅನುಬಂಧ ಸಂಭಾಷಣೆಗಳು, ಆಶಯಾದರ್ಶ ವೇದಿಕೆಗಳಲ್ಲಿ ಉಂಟಾದ ಯಥೇಚ್ಛ ಅನುಭವಗಳನ್ನು ಶೈಖುನಾ ನಮ್ಮೊಂದಿಗೆ ಹಂಚುತ್ತಿದ್ದರು.
ಶತ್ರುಗಳು, ವಿರೋಧಿಗಳ ವೈಯಕ್ತಿಕ ವಿಮರ್ಶೆಗಳನ್ನು ಸಣ್ಣದಾಗಿ ಕಂಡು ಸುನ್ನತ್ ಜಮಾ'ಅತಿನ ಒಂದು ಸಣ್ಣ ವಿಮರ್ಶೆಗಳನ್ನೂ ದೊಡ್ಡದಾಗಿ ಕಂಡು ಅದನ್ನು ಕಠೋರವಾದ ಶೈಲಿಯಲ್ಲಿ ವಿಮರ್ಶಿಸುವುದರಲ್ಲಿ ಉಸ್ತಾದರಿಗೆ ಇರುವ ಸಹನೆ, ಎದೆಗಾರಿಕೆ ನಿಜಕ್ಕೂ ಅದ್ಭುತವೇ ಸೈ.
ಭಾರತದ ಎಲ್ಲಾ ರಾಜ್ಯಗಳಲ್ಲೂ ವ್ಯಾಪಿಸಿ ನಿಂತಿರುವ ನೂರಾರು ಸಖಾಫಿ ಶಿಷ್ಯ ಸಮೂಹದ ಮುಂದೆ ಲಭಿಸುವ ಸಮಯ, ಪ್ರವಾದಿ ಪ್ರೇಮ, ಇಲಾಹೀ ಚಿಂತೆ ಎಂದೂ ಅಮರವಾಗಿದ್ದು ಅದನ್ನೆಲ್ಲಾ ಸ್ಮರಿಸುವಾಗ ನನ್ನ ಮನದಲ್ಲೂ ಇದು ಉಕ್ಕಿ ಹರಿಯುತ್ತಿತ್ತು.
ಶಿಷ್ಯಸಮೂಹವಾದ ನನ್ನಂತ ಪ್ರತಿಯೊಬ್ಬರಿಗೂ ಹೇಳಲಿಕ್ಕಿರುವುದು ಇಷ್ಟೇ " ರಾಜಕೀಯ ಅಥವಾ ಸಂಘಟನೆಯ ಹೆಸರಿನಲ್ಲಿ ತಾವು ಉಸ್ತಾದರ ಮನ ನೋಯಿಸುವುದು, ಅಪಹಾಸ್ಯ ಮಾಡುವುದು, ಉಸ್ತಾದರನ್ನು ನಿಂದಿಸುವುದೇ ಆದರೆ ಅವರೊಂದಿಗೆ ನನ್ನ ಬಂಧವಿರಲ್ಲ, ಅಂತವರಿಂದ ನಾನು ಸದಾ ದೂರ ಸರಿದು ನಿಲ್ಲುವೆನು, ತಾವು ಅಷ್ಟೇ..
ಕಾರಣ ಇಷ್ಟೇ " ಇದು ನನ್ನ ಗುರು, ಗುರುವೃಂದದ ಗುರು, ಸಾವಿರಾರು ಅನಾಥ ಮಕ್ಕಳ, ಹಾಫಿಝುಗಳ, ಸಖಾಫಿ ಶಿಷ್ಯ ಸಮೂಹದ ಅಶ್ರುಧಾರೆ ಒರೆಸಿದ ವಾತ್ಸಲ್ಯ ನಿಧಿಯಾಗಿದ್ದಾರೆ " ಕೋಟಿಗಟ್ಟಲೆ ಭಾರತೀಯ ಮುಸ್ಲಿಂ ಸಮುದಾಯದ ಅಜೇಯ ನಾಯಕರಾಗಿದ್ದಾರೆ ನನ್ನ ಶೈಖುನಾ.
ಎರಡು ವರ್ಷದ ಕಲಿಕೆ ಪೂರ್ತಿಯಾಗುವ ಸ್ವಲ್ಪ ಸಮಯ ಮುಂಚೆ ಕೂಡಾ ಇದುವರೆಗೆ ನನಗೆ ಸಿಕ್ಕ ಮಹಾ ಭಾಗ್ಯ ಇನ್ನು ಲಭಿಸಲ್ಲವಲ್ಲ ಎಂಬ ದುಃಖ ಭಾವ ನನ್ನನ್ನು ಅತಿಯಾಗಿ ಕೊರೆಯುತ್ತಿದೆ. ಆದರೂ ಬೇರೆ ಯಾರೊಂದಿಗೂ ತೋರಿಸಿದ ಪ್ರೀತಿ-ಹಾರೈಕೆ ನನ್ನೊಂದಿಗೆ ಸದಾ ಇರುತ್ತೆ ಎಂದು ಭಾವಿಸುವಾಗ ಮನಸ್ಸಿಗೆ ಅತಿಯಾದ ಸಮಾಧಾನ ನೀಡುತ್ತದೆ.
ಯಾ ಅಲ್ಲಾಹ್, ಸುದೀರ್ಘ ಕಾಲ ಸುನ್ನತ್ ಜಮಾ'ಅತಿನ ಆಶಯ ಆದರ್ಶಗಳನ್ನು ಪ್ರಚಾರ ಮಾಡಲು ಉಸ್ತಾದರಿಗೆ ನೀ ಸಕಲ ಆರೋಗ್ಯದೊಂದಿಗೆ ದೀರ್ಘಾಯುಷ್ಯ ನೀಡಿ ಅನುಗ್ರಹಿಸು ಅಲ್ಲಾಹ್, ಆಮೀನ್...
*✍🏻ನೌಷಾದ್ ಸಖಾಫಿ ಮುರ*
