ಮಂಗಳೂರು ತಾಲೂಕು ಸಖಾಫಿ ಸಂಗಮ ಹಾಗೂ ವಾರ್ಷಿಕ ಮಹಾ ಸಭೆ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಇದರ ಸಖಾಫಿ ಸಂಗಮ ಹಾಗೂ ವಾರ್ಷಿಕ ಮಹಾಸಭೆ ಜನವರಿ 28 ರಂದು ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಪಡೀಲ್ ಇಲ್ಮ್ ಸೆಂಟರ್ ಮರ್ಹೂಂ ಬೀರಾನ್ ಕುಟ್ಟಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಕೌನ್ಸಿಲ್ ಕೋಶಾಧಿಕಾರಿ ಮುಹಮ್ಮದ್ ಸಖಾಫಿ ಮೊಂಟೆಪದವು ದುಆ ನೆರವೇರಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಖಾಫಿ ಪೂಡಲ್ ಕಾರ್ಯಕ್ರಮ ಉದ್ಘಾಟಿಸಿದರು. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರು ಅಧ್ಯಕ್ಷ ಭಾಷಣ ಮಾಡಿ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ತಾಲೂಕು ಸಖಾಫಿ ಕೌನ್ಸಿಲ್ ನಡೆಸಿದ ಕಾರ್ಯಕ್ರಮಗಳ ಕುರಿತು ಮೆಲುಕು ಹಾಕಿ ಮಾತನಾಡುತ್ತಾ ಅದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. "ಮರ್ಕಝ್ ಮತ್ತು ಅದರ ಕಾರ್ಯ ವೈಖರಿಗಳು" ಎಂಬ ವಿಷಯದಲ್ಲಿ ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಇದರ ಸ್ಥಾಪಕರಾದ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮಾತನಾಡಿ ಗುರು ಶಿಷ್ಯ ಸಂಬಂಧ ಅತ್ಯಂತ ಪವಿತ್ರವಾದುದು, ನಿಶ್ಕಲಂಕ ಮನೋಭಾವದಿಂದ ಗುರುವನ್ನು ಸ್ವೀಕರಿಸಿದವರು ಪರಾಜಯ ಹೊಂದಲಾರರು ಎಂದು ತಿಳಿಸಿದರು. ರಾಜ್ಯ ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿಯವರ ನೇತ...