Skip to main content

Posts

Showing posts from August, 2024

ಎಸ್ ಬಿ ಎಸ್ ಉಳ್ಳಾಲ ವಲಯ ನೂತನ ಸಮಿತಿ ರಚನೆ

ಎಸ್ ಬಿ ಎಸ್ ಉಳ್ಳಾಲ ವಲಯ ನೂತನ ಸಮಿತಿ ರಚನಾ ಸಭೆ ಆಝಾದ್ ನಗರ ಮದ್ರಸ ಹಾಲ್ ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸಯ್ಯಿದ್ ಮಿಶಾರಿ ಅಲ್ ಹಾದೀ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ರಾಝಿ ದಾರಂದಬಾಗಿಲು ಹಾಗು ಕೋಶಾಧಿಕಾರಿಯಾಗಿ ರಿಹಾಲ್ ಆಝಾದ್ ನಗರ ಆಯ್ಕೆ ನೂತನ ಪದಾಧಿಕಾರಿಗಳಿಗೆ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಹ್ರತ್ಪೂರ್ವಕ ಅಭಿನಂದನೆಗಳು. ತಮ್ಮ ಅವಧಿಯಲ್ಲಿ ಉತ್ತಮ ಸೇವೆ ನಡೆಸಲು ಅಲ್ಲಾಹನು ತೌಫೀಖ್ ನೀಡಲಿ.  ಆಮೀನ್. ಅಭಿನಂದನೆಗಳೊಂದಿಗೆ : ಎಸ್ ಜೆ ಎಂ ಉಳ್ಳಾಲ ರೇಂಜ್

ಉಳ್ಳಾಲ ದ್ಸಿಕ್ರ್ ಮಜ್ಲಿಸ್ : ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ಅಲ್ ಬುಖಾರಿ ಮುಈನಿ ಅಲ್ ಅಝ್ಹರಿ ನೇತ್ರತ್ವ

ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇದರ ವತಿಯಿಂದ ಮಾಸಿಕವಾಗಿ ನಡೆಸಲ್ಪಡುವ ದ್ಸಿಕ್ರ್ ಮಜ್ಲಿಸಿಗೆ ಸಯ್ಯಿದ್ ತಾಜುಲ್ ಉಲಮಾ ಖ ಸಿ ರವರ ಪೌತ್ರ, ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಳ್ ರವರ ಪ್ರಿಯ ಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ಅಲ್ ಬುಖಾರಿ ಮುಈನಿ ಅಲ್ ಅಝ್ಹರಿ ನೇತ್ರತ್ವ ನೀಡಿದರು.