Skip to main content

Posts

Showing posts from October, 2022

ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್. ಅಕ್ಟೋಬರ್ 27 ಇಂದು (ಗುರುವಾರ ) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ

ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್.  ಅಕ್ಟೋಬರ್ 27 (ಇಂದು) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ ನಡೆಯಲಿದೆ.  ಪಯ್ಯನ್ನೂರು |  ಎಟಿಕ್ಕಳಂ. ತಾಜುಲ್ ಉಲಮಾ ಒಂಬತ್ತನೇ ಉರೂಸ್ ಸಮಾರಂಭ ಇಂದಿನಿಂದ 29 ರವರೆಗೆ ನಡೆಯಲಿದೆ.  ಸಮಸ್ತ ಕೇರಳ ಜಮೀಯತುಲ್ ಉಲಮಾದ ಅಧ್ಯಕ್ಷರೂ, ಅನೇಕ ಮಹಲ್ಲುಗಳ ಖಾಝಿ ಮತ್ತು ಖ್ಯಾತ ವಿದ್ವಾಂಸರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ  ರವರ ಅಂತ್ಯ ವಿಶ್ರಮ ಸ್ಥಳವಾದ ಎಟ್ಟಿಕುಳಂನಲ್ಲಿ ನಡೆಯುವ  ಉರೂಸ್ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.  ಖ್ಯಾತ ವಿದ್ವಾಂಸರು, ಸಾದಾತುಗಳು ಮತ್ತು ನಾಯಕರು ನೇತೃತ್ವ ವಹಿಸಲಿದ್ದಾರೆ.  ಝಿಯಾರತ್, ಉದ್ಘಾಟನಾ ಸಂಗಮ, ಸ್ವಲಾತ್, ಮೌಲಿದ್, ರಾತೀಬ್, ಬುರ್ದಾ ಮಜ್ಲಿಸ್, ಉದ್ಬೋಧನೆ ಪ್ರಾಸ್ಥಾನಿಕ ಸಂಗಮಗಳು ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ.  ಅಕ್ಟೋಬರ್ 27 ಮಧ್ಯಾಹ್ನ 2 ಗಂಟೆಗೆ ವಳಪಟ್ಟನಂ, ಮಾಟ್ಟೂಲ್ ತಂಙಲ್, ಮಾಡಾಯಿಪಳ್ಳಿ, ತಲಕ್ಕಲ್ ಪಳ್ಳಿ, ರಾಮಂತಳಿ, ಎಝಿಪಳ್ಳಿ ಎಂಬೀ ಮಖ್ಬರಗಳಲ್ಲಿ ನಡೆಯುವ ಝಿಯಾರತಿಗೆ ಸೈಯದ್ ಜಲಾಲುದ್ದೀನ್ ತಂಗಳ್ ವಳಪಟ್ಣಂ, ಸೈಯದ್ ಜುನೈದ್ ಅಲ್ ಬುಖಾರಿ ಮಾಟ್ಟೂಲ್, ಸೈಯದ್ ಹೈದ್ರೂಸ್ ತಂಗಳ್ ಮಾಟ್ಟುಲ್, ಸೈಯದ್ ಇಸ್ಮಾಯಿಲ್ ಹಾದಿ ತಂಗಳ್ ಪಾಣೂರು, ಸೈಯದ್ ಮುಹಮ್ಮದ್ ಶಾಫಿ ಬಾ...

ತಾಜುಲ್ ಉಲಮಾ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪ್ರಚಾರ ಸಭೆ. ಪೋಸ್ಟರ್ ಸ್ಟಿಕ್ಕರುಗಳ ಪ್ರದರ್ಶನ.

ತಾಜುಲ್ ಉಲಮಾ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪ್ರಚಾರ ಸಭೆ. ಪೋಸ್ಟರ್ ಸ್ಟಿಕ್ಕರುಗಳ ಪ್ರದರ್ಶನ. ಮಂಗಳೂರು : ಕೇರಳದ ಪಯ್ಯನ್ನೂರ್ ಎಟ್ಟಿಕ್ಕುಳಂನಲ್ಲಿ ಅಂತ್ಯವಿಶ್ರಮಿಸುತ್ತಿರುವ ವಿದ್ವಾಂಸರ ಕಿರೀಟ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭವು ಅಕ್ಟೋಬರ್ 27, 28, 29 ರಂದು ಎಟ್ಟಿಕುಳಂ ನಲ್ಲಿ ನಡೆಯಲಿದ್ದು,  ಉಳ್ಳಾಲ ಕೇಂದ್ರವಾಗಿಸಿ  ಕೇರಳ, ಕರ್ನಾಟಕದಾದ್ಯಂತ ತನ್ನ ಪುರುಷಾಯುಷ್ಯವಿಡೀ ದೀನೀ ವಿಜ್ಞಾನ ಹರಡಿದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಉರೂಸ್ ಸಮಾರಂಭದ ಪ್ರಚಾರ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದು, ಇದರ ಭಾಗವಾಗಿ ಮುಡಿಪು ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಉರೂಸ್ ಪ್ರಚಾರ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಉಳ್ಳಾಲ ತಂಙಲ್ ಸುಪುತ್ರ ಗೌರವಾನ್ವಿತ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಮರ್ ಸಖಾಫಿ ತಲಕ್ಕಿ ಉದ್ಘಾಟಿಸಿದರು. ಜಬ್ಬಾರ್ ಸಖಾಫಿ ಪಾತೂರು ಹಾಗೂ ಉವೈಸ್ ಹಿಶಾಮಿ ಮುಡಿಫು ಮುದರ್ರಿಸ್ ಆಶಂಶಾ ಭಾಷಣ ಮಾಡಿದರು. ಎಂ.ಬಿ ಸಖಾಫಿ ಬಾಳೆಪುಣಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉರೂಸ್ ಸಮಾರಂಭದ ಪೋಸ್ಟರ್ ಹಾಗು ಸ್ಟಿಕ್ಕರುಗಳನ್ನು ಪ್ರದರ್ಶಿಸಿ ಬಿಡುಗಡೆಗೊಳಿಸಲಾಯಿತು. ...