ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್. ಅಕ್ಟೋಬರ್ 27 ಇಂದು (ಗುರುವಾರ ) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ
ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್.
ಅಕ್ಟೋಬರ್ 27 (ಇಂದು) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ ನಡೆಯಲಿದೆ.
ಪಯ್ಯನ್ನೂರು | ಎಟಿಕ್ಕಳಂ. ತಾಜುಲ್ ಉಲಮಾ ಒಂಬತ್ತನೇ ಉರೂಸ್ ಸಮಾರಂಭ ಇಂದಿನಿಂದ 29 ರವರೆಗೆ ನಡೆಯಲಿದೆ. ಸಮಸ್ತ ಕೇರಳ ಜಮೀಯತುಲ್ ಉಲಮಾದ ಅಧ್ಯಕ್ಷರೂ, ಅನೇಕ ಮಹಲ್ಲುಗಳ ಖಾಝಿ ಮತ್ತು ಖ್ಯಾತ ವಿದ್ವಾಂಸರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಅಂತ್ಯ ವಿಶ್ರಮ ಸ್ಥಳವಾದ ಎಟ್ಟಿಕುಳಂನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಖ್ಯಾತ ವಿದ್ವಾಂಸರು, ಸಾದಾತುಗಳು ಮತ್ತು ನಾಯಕರು ನೇತೃತ್ವ ವಹಿಸಲಿದ್ದಾರೆ.
ಝಿಯಾರತ್, ಉದ್ಘಾಟನಾ ಸಂಗಮ, ಸ್ವಲಾತ್, ಮೌಲಿದ್, ರಾತೀಬ್, ಬುರ್ದಾ ಮಜ್ಲಿಸ್, ಉದ್ಬೋಧನೆ ಪ್ರಾಸ್ಥಾನಿಕ ಸಂಗಮಗಳು ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 27 ಮಧ್ಯಾಹ್ನ 2 ಗಂಟೆಗೆ ವಳಪಟ್ಟನಂ, ಮಾಟ್ಟೂಲ್ ತಂಙಲ್, ಮಾಡಾಯಿಪಳ್ಳಿ, ತಲಕ್ಕಲ್ ಪಳ್ಳಿ, ರಾಮಂತಳಿ, ಎಝಿಪಳ್ಳಿ ಎಂಬೀ ಮಖ್ಬರಗಳಲ್ಲಿ ನಡೆಯುವ ಝಿಯಾರತಿಗೆ ಸೈಯದ್ ಜಲಾಲುದ್ದೀನ್ ತಂಗಳ್ ವಳಪಟ್ಣಂ, ಸೈಯದ್ ಜುನೈದ್ ಅಲ್ ಬುಖಾರಿ ಮಾಟ್ಟೂಲ್, ಸೈಯದ್ ಹೈದ್ರೂಸ್ ತಂಗಳ್ ಮಾಟ್ಟುಲ್, ಸೈಯದ್ ಇಸ್ಮಾಯಿಲ್ ಹಾದಿ ತಂಗಳ್ ಪಾಣೂರು, ಸೈಯದ್ ಮುಹಮ್ಮದ್ ಶಾಫಿ ಬಾಅಲವಿ ವಳಪಟ್ಣಂ, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಲ್ ಮಾಟೂಲ್ ತಂಗಲ್ ಮತ್ತು ಸಂಜೆ 4 ಗಂಟೆಗೆ ನಡೆಯುವ ತಾಜುಲ್ ಉಲಮಾ ಮಕ್ಬರಾ ಝಿಯಾರತಿಗೆ ಸೈಯದ್ ಫಝಲ್ ಕೋಯಮ್ಮ ಮದನಿ ಕೂರತ್ ತಂಗಳ್ ನೇತೃತ್ವ ವಹಿಸಲಿದ್ದಾರೆ. ನಂತರ ಸೈಯದ್ ಹಮೀದ್ ಇಂಪಿಚಿಕೋಯ ಅಲ್ ಬುಖಾರಿ ಧ್ವಜಾರೋಹಣ ನೆರವೇರಿಸುವರು. ಸಂಜೆ 4.30ಕ್ಕೆ ಸಯ್ಯಿದ್ ಅತಾವುಲ್ಲಾ ತಂಗಳ್ ಉದ್ಯಾಪುರದ ಪ್ರಾರ್ಥನೆಯೊಂದಿಗೆ ಚಾಲನೆಗೊಳ್ಳಲಿರುವ ಉದ್ಘಾಟನಾ ಸಭೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಪಟ್ಟುವಂ ಕೆ.ಪಿ.ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಸಮಸ್ತ ಕೋಶಾಧಿಕಾರಿ ಕೋಟೂರು ಕುಂಞಾಮು ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಶಾಸಕ ಮಧುಸೂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆ.ಕೆ.ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪಾರ, ವಿ.ಪಿ.ಎಂ ಫೈಝಿ ವಿಳ್ಳ್ಯಾಪಳ್ಳಿ, ಪ್ರೊಫೆಸರ್ ಎ.ಕೆ.ಅಬ್ದುಲ್ ಹಮೀದ್, ಪ್ರೊಫೆಸರ್ ಯು.ಸಿ.ಅಬ್ದುಲ್ ಮಜೀದ್, ಬಿ.ಎಸ್.ಅಬ್ದುಲ್ಲಾ ಕುಂಞಿ ಫೈಝಿ, ಪಿ.ಕೆ.ಅಲಿಕುಂಞಿ ದಾರಿಮಿ, ವಿ.ಎಂ.ಕೋಯ ಮಾಸ್ತರ್, ಆರ್.ಪಿ.ಹುಸೈನ್ ಮಾಸ್ತರ್, ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಭಾಷಣ ಮಾಡಲಿರುವರು. 6.30ಕ್ಕೆ ಸಯ್ಯದ್ ಫಝಲ್ ಕೋಯಮ್ಮ ಮದನಿ ಕೂರತ್ ತಂಙಲ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಡಾ. ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ನೀಡಲಿದ್ದಾರೆ. 28 ರಂದು ಬೆಳಿಗ್ಗೆ 6.30ಕ್ಕೆ ನಡೆಯುವ ಮಹ್ಲರತುಲ್ ಬದ್ರಿಯ್ಯ ಮಜ್ಲಿಸ್ ಗೆ ಸಅದುಲ್ ಅಮೀನ್ ಅಹ್ಸನಿ ನೇತೃತ್ವ ವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶಾದುಲೀ ರಾತೀಬ್ ಪ್ರಾರಂಭವಾಗಲಿದೆ. ಪೆರುಂಬಾ ಯೂಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ತ್ವಯ್ಯಿಬುಲ್ ಬುಖಾರಿ ತೃಕರಿಪುರ ಪ್ರಾರ್ಥನೆ ನಡೆಸಲಿರುವರು. ಸಯ್ಯಿದ್ ಸುಹೈಲ್ ಅಸ್ಸಖಾಫ್ ತಂಗಳ್ ಮಡಕ್ಕರ ಶಾದುಲೀ ರಾತೀಬಿಗೆ ನೇತೃತ್ವವನ್ನು ನೀಡಲಿದ್ದಾರೆ. ಅನಸ್ ಅಮಾನಿ ಪುಷ್ಪಗಿರಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಬುರ್ದಾ ಮಜ್ಲಿಸ್ ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದೆ. ಅಬ್ದುಲ್ ಸಮದ್ ಅಮಾನಿ ಪಟ್ಟುವಂ, ಅನಸ್ ಹಂಝ ಅಮಾನಿ ಮತ್ತು ಅಶ್ರಫ್ ಪೆರುಮುಗಂ ನೇತೃತ್ವ ವಹಿಸಲಿದ್ದಾರೆ. ರಫೀಕ್ ಸಅದಿ ದೇಲಂಪಾಡಿ ಉಪನ್ಯಾಸ ನೀಡಲಿದ್ದಾರೆ. 6.30ಕ್ಕೆ ಆರಂಭವಾಗುವ ತಿದ್ಕಾರೆ ಜೀಲಾನಿ ಸಂಗಮವನ್ನು ಪಿ.ಪಿ.ಅಬ್ದುಲ್ ಹಕೀಂ ಸಅದಿ ಅಧ್ಯಕ್ಷತೆಯಲ್ಲಿ ಮುಹಮ್ಮದಲಿ ಸಖಾಫಿ ತೃಕರಿಪುರ ಉದ್ಘಾಟಿಸಲಿದ್ದಾರೆ. ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಉಪನ್ಯಾಸ ನೀಡಲಿದ್ದಾರೆ. 29ರಂದು ಬೆಳಗ್ಗೆ 6.30ಕ್ಕೆ ನಡೆಯುವ ಮಂಖೂಸ್ ಮೌಲಿದ್ ಮಜ್ಲಿಸ್ ಗೆ ಅಬ್ದುಲ್ ರಝಾಕ್ ಸಅದಿ ಪಟಪೇಂಗಾಡ್ ನೇತೃತ್ವ ವಹಿಸಲಿದ್ದಾರೆ. ಸೈಯದ್ ಮುಶಾಬ್ ಅಲ್ ಬುಖಾರಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. 9 ಗಂಟೆಗೆ ಸೈಯದ್ ಹಸನುಲ್ ಅಹ್ದಲ್ ಅವರ ಪ್ರಾರ್ಥನೆಯೊಂದಿಗೆ ಆರಂಭಿಸುವ ಜಲಾಲಿಯಾ ರಾತೀಬ್‌ಗೆ ಸೈಯದ್ ಝೈನುಲ್ ಆಬಿದೀನ್ ಅಲ್ ಅಹ್ದಲ್ ಕಣ್ಣವಂ ನೇತೃತ್ವ ವಹಿಸಲಿದ್ದಾರೆ. ಹಂಝ ಮಿಸ್ಬಾಹಿ ಓಟಪದವು ಪ್ರಭಾಷಣ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಯ್ಯಿದ್ ಅಬೂಬಕರ್ ಸಿದ್ದೀಕ್ ಮುರ ತಂಙಲ್ ರವರ ಅಧ್ಯಕ್ಷತೆಯಲ್ಲಿ ಆರಂಭವಾಗಲಿರುವ ಮದನಿ ಸಂಗಮವನ್ನು ಸೈಯದ್ ಮುಹಮ್ಮದ್ ಅಶ್ರಫ್ ತಂಗಳ್ ಆದೂರು ಉದ್ಘಾಟಿಸಲಿದ್ದಾರೆ. ಸೈಯದ್ ಅಬೂಬಕರ್ ಚೆರುಕುಞ್ಞಿ ತಂಙಲ್ ದುಆ ನಡೆಸಲಿದ್ದಾರೆ.
ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಲ್ ವಿದ್ವಾಂಸರ ಧ್ಯೇಯ ಹಾಗೂ ಮುತ್ತಲಿಬ್ ಮದನಿ ಕುಟ್ಯಾಡಿ ಮಾದಕ ವ್ಯಸನದ ವಿರುದ್ಧ ವಿಷಯ
ಮಂಡಿಸಲಿದ್ದಾರೆ. ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಮತ್ತು ಸಿಕೆಕೆ ಮದನಿ ಗೂಡಲ್ಲೂರು ವಿವಿಧ ಯೋಜನೆಗಳನ್ನು ಪರಿಚಯಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ತಾಜುಲ್ ಉಲಮಾ ಮೌಲಿದ್ ಆರಂಭವಾಗಲಿದೆ. ಸಯ್ಯಿದ್ ಇಂಬಿಚ್ಚಿಕೋಯ ತಂಙಲ್ ಅಲ್ ಬುಖಾರಿ ದುಆ ನೆರವೇರಿಸಲಿರುವರು. ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪರಂಬ್, ಸೈಯದ್ ಜಲಾಲುದ್ದೀನ್ ಅಲ್ ಬುಖಾರಿ ಮಲ್ಹರ್ ನೇತೃತ್ವ ವಹಿಸಲಿದ್ದು, ಮುಹಮ್ಮದ್ ಬಾದುಶಾ ಸಖಾಫಿ ಆಲಪ್ಪುಳ ಉಪದೇಶ ನೀಡಲಿದ್ದಾರೆ. 3 ಗಂಟೆಗೆ ಸಯ್ಯಿದ್ ಪಿ.ಎಸ್.ಆಟಕೋಯ ತಂಗಳ್ ಪಂಜಿಕಲ್ ರವರ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ರಿಫಾಯಿ ರಾತೀಬ್ ಡಾ. ಕೋಯಾ ಕಾಪ್ಪಾಡ್ ನೇತೃತ್ವ ವಹಿಸಲಿದ್ದಾರೆ. ಕೆ.ಎಂ.ಅಬ್ದುಲ್ಲಾ ಕುಟ್ಟಿ ಬಾಖವಿ ಮಖ್ದೂಮಿ ಅಧ್ಯಕ್ಷತೆ ವಹಿಸುವರು. ಸಮಾರೋಪ ಪ್ರಾರ್ಥನಾ ಸಭೆಯು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ.
ಸೈಯದ್ ಅಲಿ ಬಾಫಕಿ ತಂಗಳ್ ದುಆ ನೆರವೇರಿಸಲಿರುವರು. ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಗಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಅಧ್ಯಕ್ಷರಾದ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಲಿದ್ದು, ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಲ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಎಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ, ಸಿ ಮುಹಮ್ಮದ್ ಫೈಝಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಸಚಿವ ಅಹ್ಮದ್ ದೇವರಕೋವಿಲ್, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಗಳ್ ಅಲ್ ಬುಖಾರಿ, ಕೆಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಸೈಯದ್ ತ್ವಾಹ ತಂಗಳ್ ಕುಟ್ಯಾಡಿ, ಸಯ್ಯಿದ್ ಮುಹಮ್ಮದ್ ಬಾಖಿರ್ ಶಿಹಾಬ್ ತಂಙಲ್ ಕೋಟಕ್ಕಲ್, ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಂ.ವಿ ಅಬ್ದುಲ್ ರೆಹಮಾನ್ ಬಾಖವಿ ಪರಿಯಾರಂ, ಡಾ. ಎ.ಪಿ.ಅಬ್ದುಲ್ ಹಕೀಂ ಅಝ್ಹರಿ, ಅಬ್ದುಲ್ ಖಾದಿರ್ ಮದನಿ ಕಲ್ತರ, ಮುಸ್ತಫಾ ದಾರಿಮಿ ಕಾಡಂಗೋಡ್, ಕೆ.ವೈ.ನಿಜಾಮುದ್ದೀನ್ ಫಾಲಿಲಿ, ವೈ.ಅಬ್ದುಲ್ಲಾ ಕುಂಞಿ ಹಾಜಿ ಯೆನಪೋಯ, ಶಾಸಕ ಯು.ಟಿ.ಖಾದರ್, ಮುಹಮ್ಮದ್ ಶಾಫಿ ಸಅದಿ ಬೆಂಗಳೂರು, ಮುಹಮ್ಮದಲಿ ಹಾಜಿ ಸ್ಟಾರ್ ಆಫ್ ಏಷಿಯಾ, ಡಾ. ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಕರೀಂ ಹಾಜಿ ಕೈದಪ್ಪಾಡಂ, ಮೋನು ಹಾಜಿ ಕಣಚೂರು ಮೊದಲಾದವರು ಭಾಷಣ ಮಾಡಲಿದ್ದಾರೆ. ಸಯ್ಯದ್ ಫಝಲ್ ಕೋಯಮ್ಮ ಮದನಿ ಕೂರತ್ ತಂಙಲ್ ಸಮಾರೋಪ ಪ್ರಾರ್ಥನೆಯನ್ನು ನಡೆಸಲಿದ್ದಾರೆ. ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿ, ಸಿರಾಜ್ ಇರಿವೇರಿ ಧನ್ಯವಾದ ಅರ್ಪಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ
ಸೈಯದ್ ಅಬ್ದುಲ್ ರಹಮಾನ್ ಮಸ್ಹೂದ್ ಅಲ್ ಬುಖಾರಿ (ಸ್ವಾಗತ ಸಮಿತಿ ಸಂಯೋಜಕರು)
ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ (ಪ್ರಧಾನ ಸಂಚಾಲಕ, ಸ್ವಾಗತ ಸಮಿತಿ)
ಬಿಎ ಅಲಿ ಮೊಗ್ರಾಲ್ (ಮಾಧ್ಯಮ ಸಂಯೋಜಕ)
ನಾಸಿಂ ಹಾಜಿ ಪೆರುಂಬ (ಕೋಶಾಧಿಕಾರಿ ಎಜ್ಯುಕೇಶನಲ್ ಸೆಂಟರ್)
ಮುಸ್ತಫಾ ಹಾಜಿ ಪಾಲಕೋಡ್
ಮದನಿ ಹಮೀದ್ ಹಾಜಿ (ಕಾರ್ಯದರ್ಶಿ ಎಜ್ಯುಕೇಶನಲ್ ಸೆಂಟರ್ ಭಾಗವಹಿಸಿದ್ದರು
Comments
Post a Comment