Skip to main content

Posts

Showing posts from July, 2022

ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ಪರಲೋಕ ವಿಜಯಕ್ಕಾಗಿ ದುಆ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಗಲ್ ಮನವಿ

ಕೇರಳ ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ, ಪ್ರಗಲ್ಭ ವಿದ್ವಾಂಸ ಹಾಗೂ ವಾಗ್ಮಿ ಎನ್.ಅಬ್ದುಲತೀಫ್ ಸಅದಿ ಪಯಸ್ವಿ ಉಸ್ತಾದರ ವಿಯೋಗ ಅತೀವ ದುಃಖಕರವಾಗಿದೆ.  ಅವರ ಹೆಸರಿನಲ್ಲಿ ತಹ್ಲೀಲ್ ಹೇಳಿ, ಕುರಾನ್ ಓದಿ ಹದ್ಯಾ ಮಾಡಿ, ಅವರ ಖಬರ್ ಮತ್ತು ಪಾರತ್ರಿಕ ವಿಜಯಕ್ಕಾಗಿ ದುಆ ನಿರ್ವಹಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ಮನವಿ ಮಾಡಿದ್ದಾರೆ.

ಶಾಂತಿ ಕಾಪಾಡಲು ಮನವಿ

ಶಾಂತಿ ಕಾಪಾಡಲು ಮನವಿ ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಅಹಿತಕರ ಘಟನೆಗಳು ಖಂಡನೀಯ ಮತ್ತು ದುಃಖಕರ. ಸಂಬಂಧ ಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ.  ಮೇಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೊಳಗಾಗದೆ ದೇಶದ, ರಾಜ್ಯದ ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕಾಗಿ ವಿನಂತಿಸುತ್ತೇನೆ.  ಮಸ್ಜಿದ್ ಖತೀಬ್ ಮತ್ತು ಇಮಾಂಗಳು ಜುಮುಅಃ ದ ನಂತರ ಜನರಿಗೆ ಸೌಹಾರ್ದ ಸಂದೇಶ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.  ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಕೂರತ್  ಉಳ್ಳಾಲ ಖಾಝಿ

ಈದುಲ್ ಅಝ್-ಹಾ ಶುಭಾಶಯಗಳು

السلام عليكم ورحمة الله وبركاته. “تقبل الله منا ومنكم صالح الاعمال”   *🌙عيد مبــــــــــــــــــــارك💫*   الله اكبر الله اكبر الله اكبر  لا إله إلا الله ألله أكبر  ألله أكبر ولله الحمد ಜೀವನದಲ್ಲಿ ಒಳ್ಳೆಯತನ ಹರಡಲಿ, ಸಂಬಂಧಗಳು ಗಟ್ಟಿಯಾಗಲಿ, ಪ್ರಾರ್ಥನೆಯಲ್ಲಿ ಪರಸ್ಪರ ಮರೆಯದಿರಿ!!  ಪ್ರೀತಿ ತುಂಬಿದ ಬಲಿ ಪೆರ್ನಾಲ್ ಹಬ್ಬದ ಶುಭಾಶಯಗಳು🌙🌙🌹   ನವಾಝ್ ಸಖಾಫಿ ಉಳ್ಳಾಲ

ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ✍️ಡಾ. ಜೆ ಎಸ್ ಪಾಟೀಲ

ಬಕ್ರಿದ್ ಹಬ್ಬ ಮತ್ತು ದೇಶದ ಆರ್ಥಿಕತೆ ✍️ಡಾ. ಜೆ ಎಸ್ ಪಾಟೀಲ 20 ಕೋಟಿ ಭಾರತೀಯ ಮುಸ್ಲಿಮರು ಈದ್ ಉಲ್ ಅಧಾವನ್ನು (ಭಾರತದಲ್ಲಿ ಬಕ್ರಿದ್ ಎಂದು ಕರೆಯಲಾಗುತ್ತದೆ), ಆಚರಿಸುತ್ತಾರೆ. ಅಂದರೆ ಅಂದಾಜು 8-10% ಮುಸ್ಲಿಮರು 10,000 ರಿಂದ 50,000 ಬೆಲೆಯ ಆಡುಗಳು/ಕುರಿಗಳನ್ನು ಬಕ್ರಿದ್ ಹಬ್ಬಕ್ಕೆ ಬಲಿ ಕೊಡುತ್ತಾರೆ. ಪ್ರತಿ ಪ್ರಾಣಿಗೆ ಸರಾಸರಿ 20,000 ಬೆಲೆಯನ್ನು ತೆಗೆದುಕೊಂಡರೆ… 2 ಕೋಟಿ × ರೂ 20000 = ರೂ 400,000,000,000. (4 ಲಕ್ಷ ಕೋಟಿ) ಆರ್ಥಿಕ ದೃಷ್ಟಿಕೋನದಿಂದ ಇದು ಯಾರಿಗೆಲ್ಲ ಪ್ರಯೋಜನವಿದೆ ಎಂದು ನೋಡೋಣ. ಬಕ್ರಿದ್ ಹಬ್ಬಕ್ಕೆ ಬಳಕೆಯಾಗುವುದು ಚೈನೀಸ್ ಅಥವಾ ಬಹುರಾಷ್ಟ್ರೀಯ ಉತ್ಪನ್ನಗಳಲ್ಲ. ಬದಲಾಗಿ 100% ದೇಸಿ ಗ್ರಾಮೀಣ ಅರ್ಥಶಾಸ್ತ್ರದ ಸಾಕು ಪ್ರಾಣಿಗಳು. ಈ ಪ್ರಾಣಿಗಳನ್ನು ಸಾಕುವವರು ಹಾಗು ಮಾರುವವರು ನಮ್ಮ ಗ್ರಾಮೀಣ ಭಾರತದ ರೈತರು ಮಾತ್ರ. ಒಬ್ಬ ರೈತ ವರ್ಷಕ್ಕೆ ಸರಾಸರಿ 10 ಮೇಕೆಗಳನ್ನು ನಿರ್ವಹಿಸಿದರೆ…. 2 ಕೋಟಿ ÷ 10 = 20 ಲಕ್ಷ ಕುಟುಂಬಗಳು ನೇರ ಉದ್ಯೋಗ ಪಡೆಯುತ್ತವೆ. ಆದ್ದರಿಂದ ಬಕ್ರಿದ್ ಹಬ್ಬ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಜೊತೆಗೆ 4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕತೆ ಮತ್ತು ಸುಮಾರು 20 ಲಕ್ಷ ಸಣ್ಣ ರೈತರಿಗೆ ಉದ್ಯೋಗವನ್ನು ಒದಗಿಸುತ್ತದೆ. ರೈತರ ವ್ಯವಹಾರವು ಧರ್ಮವನ್ನು ಆಧರಿಸಿಲ್ಲ ˌ ಆದ್ದರಿಂದ ವಿವಿಧ ಸಮುದಾಯಗಳ ಎಲ್ಲಾ ರೈತರು ಇದರ ಪ್ರ...