Skip to main content

Posts

Showing posts from December, 2025

ಎಸ್. ವೈ. ಎಸ್ ಉಪ್ಪಿನಂಗಡಿ ಝೋನ್ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ.ಮದುವೆಯ ದುಂದುವೆಚ್ಚದಿಂದ ದೂರವಿರಿ - ಯಾಕೂಬ್ ಸಅದಿ ನಾವೂರು.

ರಾಜ್ಯದ ಅತೀ ದೊಡ್ಡ ಸುನ್ನೀ ಯುವಜನ ಸಂಘಟನೆಯಾದ  ಎಸ್ ವೈ ಎಸ್ ಇದರ ಉಪ್ಪಿನಂಗಡಿ ಝೋನ್ ಸಮಿತಿ ವತಿಯಿಂದ ಖುತುಬಾ ಹಾಗೂ ಜಮಾಅತ್ ಪ್ರತಿನಿಧಿ ಸಂಗಮವು ಎಸ್ ವೈ ಎಸ್ ಝೋನ್ ಸಮಿತಿ ಅಧ್ಯಕ್ಷರಾದ ಅಬ್ದುರ್ರಝಾಖ್ ಲತೀಫಿ ಕುಂತೂರು ಇವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯ ಎಸ್ ಜೆ ಎಂ ಜಿಲ್ಲಾ ಮುಅಲ್ಲಿಂ ಸೆಂಟರ್  ಸಭಾಂಗಣದಲ್ಲಿ ಜರುಗಿತು. ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು ರವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿಂದು ಮದುವೆಯ ಹೆಸರಲ್ಲಿ ಅನಗತ್ಯವಾಗಿ ನಡೆಯುತ್ತಿರುವ ದುಂದು ವೆಚ್ಚ ಹಾಗೂ ಅನಾಚಾರದಿಂದ  ದೂರವಿರುವಂತೆ ನಮ್ಮ ಯುವಕ ಯುವತಿಯರಿಗೆ ಜಮಾಅತ್  ನಾಯಕರು ಸ್ಪಷ್ಟ ಸಂದೇಶ ನೀಡಿ, ಸರಳ ಮಾದರಿ ಮದುವೆಗೆ ಪ್ರೇರಣೆ ನೀಡಬೇಕೆಂದು ಕರೆ ನೀಡಿದರು. ಕೆ.ಎಂ.ಜೆ ಜಿಲ್ಲಾಧ್ಯಕ್ಷರಾದ ಜಿ ಮುಹಮ್ಮದ್ ಕಾಮಿಲ್ ಸಖಾಫಿ ಯವರು ಕಾರ್ಯಕ್ರಮ ಉದ್ಘಾಟಿಸಿದರು. ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ನಾಯಕರಾದ ಆದಂ ಅಹ್ಸನಿ ಉಸ್ತಾದರು ದುಆ ನೆರವೇರಿಸಿದರು. ಪ್ರಸ್ತುತ ಸಭೆಯಲ್ಲಿ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು, ಅತಾವುಲ್ಲ ಹಿಮಮಿ ಸಖಾಫಿ, ಹಮೀದ್ ಸಅದಿ ಕಳಂಜಿಬೈಲು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಉಸ್ಮಾನ್ ಸೋಕಿಲ, ಅಬ್ದುಲ್ ಮಜೀದ್ ಸಖಾಫಿ, ಡಿ ಹೆಚ್ ಇಬ್ರಾಹಿಂ ಸಅದಿ, ಮುಹಮ್ಮದ್ ಅಲೀ ತುರ್ಕಳಿಕೆ, ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುಲ್ ಶುಕೂರ...

ಇಂದು ಕೊಳಕೆಯಲ್ಲಿ ಅಸ್ಸಯ್ಯಿದ್ ಚಟ್ಟೆಕ್ಕಲ್ ತಂಙಳ್ ರವರಿಗೆ ಗೌರವಾರ್ಪಣೆ ಕಾರ್ಯಕ್ರಮ

ದೀವಾನ್ -ಇ-ಖಾಝಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ಅಲ್ ಬುಖಾರಿ ಚಟ್ಟೆಕ್ಕಲ್ ತಂಙಳ್ ರವರಿಗೆ ಬಂಟ್ವಾಳ ತಾಲೂಕು ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ಡಿಸೆಂಬರ್ 05 ಶುಕ್ರವಾರ ಇಂದು ಸಂಜೆ 4 ಗಂಟೆಗೆ ಕೊಳಕೆ ಮಸ್ಜಿದ್ ವಠಾರ ತಾಜುಲ್ ಉಲಮಾ ವೇದಿಕೆಯಲ್ಲಿ ಗೌರವಾರ್ಪಣೆ ನಡೆಯಲಿದೆ. ಮದ್ಯಾಹ್ನ 3 ಗಂಟೆಗೆ ಅಮ್ಮೆಂಬಳ, ಜಾರದಗುಡ್ಡೆ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಸಾದಾತ್ ಉಲಮಾ,ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಚಯರ್ಮೆನ್ ಆಶ್ರಫ್ ಸಖಾಫಿ ಆಲಡ್ಕ ಕರೆ ನೀಡಿದ್ದಾರೆ