ಉಮ್ರಾ ಯಾತ್ರೆ ಹೊರಡುತ್ತಿರುವ ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ ಉಸ್ತಾದರಿಗೆ ಆಝಾದ್ ನಗರ ಮದರಸ ಹಾಲಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗೌರವಪೂರ್ವಕವಾಗಿ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ವೆಲ್ಫೇರ್ ವಿಭಾಗದ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ರೇಂಜ್ ನ ನಾಯಕರೂ, ಹಿರಿಯ ವಿದ್ವಾಂಸರಾದ ಶರೀಫ್ ಬಾಖವಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾರ್ಪಣೆ ಸ್ವೀಕರಿಸಿ ಇರ್ಫಾನ್ ಫಾಳಿಲಿ ಮಾತನಾಡಿದರು. ರೇಂಜ್ ನಾಯಕರಾದ ಎನ್ ಡಿ ಮದನಿ, ವಿ ಕೆ ಸಖಾಫಿ, ವಿ ಎ ಸಖಾಫಿ, ಕೆ ಎಂ ಮದನಿ, ಸೆರ್ಕಳ ಸಖಾಫಿ, ಇರ್ಫಾನ್ ಸಅದಿ, ಬಶೀರ್ ಮುಸ್ಲಿಯಾರ್, ಇರ್ಫಾನ್ ಮದನಿ ಉಳ್ಳಾಲ, ಅಬ್ದುಸ್ಸಮದ್ ಅಹ್ಸನಿ ಹಾಗು ಬಶೀರ್ ಸಖಾಫಿ ಉಳ್ಳಾಲ ಶುಭಹಾರೈಸಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಉಳ್ಳಾಲ ರೇಂಜ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು.