ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಸಾಂತ್ವನ ವಿಭಾಗದ ಆಶ್ರಯದಲ್ಲಿ ಉಳ್ಳಾಲ ಆಸುಪಾಸಿನ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟೆ ಆಝಾದ್ ನಗರದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಛೇರಿಯಲ್ಲಿ ನಡೆಯಿತು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಮಾತನಾಡಿ ಬಡ ನಿರ್ಗತಿಕರ, ವಿಧವೆಯರ ಅನಾಥರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳು ಅಲ್ಲಾಹನ ಬಳಿ ಅಪಾರ ಪ್ರತಿಫಲ ಲಭಿಸುವ ಕಾರ್ಯಗಳಾಗಿವೆ ಅಂದರು. ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಅತಿಥಿಗಳನ್ನು ಸ್ವಾಗತಿಸಿ ಈ ಕಾರ್ಯಕ್ರಮವು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಪ್ರಾಥಮಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಬಡ ನಿರ್ಗತಿಕರ, ಅನಾಥರ, ವಿಧವೆಯರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ...