ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾ ಆಶ್ರಯದಲ್ಲಿ ಎಸ್ ಬಿ ಎಸ್ ಆಝಾದ್ ನಗರ DREAM GK 2017 ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶಾಖಾ ಉಪಾಧ್ಯಕ್ಷ ಲತೀಫ್ ರವರ ಅಧ್ಯಕ್ಷತೆಯಲ್ಲಿ ಬಜಲ್ ಕ್ವಾಟ್ರಸ್ ನಲ್ಲಿ ನಡೆಯಿತು.
ಹಾಫಿಲ್ ಮುಈನ್ ಉಸ್ತಾದ್ ದುವಾ ನೆರವೇರಿಸಿದರು. ಉಳ್ಳಾಲ ಸೆಕ್ಟರ್ ಎಸ್ ಬಿ ಎಸ್ ಸಂಚಾಲಕ ಮುಹಾಝ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಫಿಲ್ ಅಸ್ಲಂ ಪ್ರಥಮ ತರಗತಿ ನಡೆಸಿದರು. ಎರಡನೇ ತರಗತಿಯನ್ನು ಹಾಫಿಲ್ ಸುಹೈಲ್ ರವರು ನಡೆಸಿದರು. ಬಳಿಕ ಖಿರಾಅತ್, ಹಾಡು ಹಾಗು ಕ್ವಿಝ್ ಕಾರ್ಯಕ್ರಮ ನಡೆಯಿತು. ಹಾಫಿಲ್ ಅಸ್ಲಂ ಮತ್ತು ಹಾಫಿಲ್ ಮುಈನ್ ರವರು ಹಾಡು ಹಾಗು ಖಿರಾಅತ್ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗವಹಿಸಿದರು, ಮುಹಾಝ್ ಹಾಗು ಉಸ್ಮಾನ್ ಸಖಾಫಿ ಉಸ್ತಾದ್ ಕ್ವಿಝ್ ಸ್ಪರ್ಧೆಗೆ ನೇತ್ರತ್ವ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರಿನ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬ ವಿಷಯದಲ್ಲಿ ವಿಶೇಷ ತರಗತಿಯನ್ನೂ ನೀಡಿ ಮಕ್ಕಳನ್ನು ಹುರಿದುಂಬಿಸಿದರು.
ಆಝಾದ್ ನಗರ ಎಸ್ ಬಿ ಎಸ್ Dream Gk 2017 ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಳ್ಳಾಲ ವಹಿಸಿದರು. ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉದ್ಘಾಟಿಸಿದರು. ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಾಗು ಆಝಾದ್ ನಗರ ಉಸ್ತುವಾರಿ ಹಫೀಝ್ ಕೋಡಿ ಸಂದೇಶ ಭಾಷಣ ಮಾಡಿದರು. ಎಸ್ ಬಿ ಎಸ್ ಯಾಕೆ ಬೇಕು ಎಂಬ ವಿಷಯದಲ್ಲಿ ಉಸ್ಮಾನ್ ಸಖಾಫಿ ತರಗತಿ ನಡೆಸಿದರು. ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸ್ಸೆಫ್ ಆಝಾದ್ ನಗರ ಕೋಶಾಧಿಕಾರಿ ಹಾಶಿಂ, ಫವಾಝ್, ನಿಹಾಲ್ ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು. ಹಾಫಿಝ್ ಸುಹೈಲ್ ಸ್ವಾಗತಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಧನ್ಯವಾದಗೈದರು. ಕೊನೆಗೆ ತಬರ್ರುಕ್ ವಿತರಿಸಲಾಯಿತು
Comments
Post a Comment