Skip to main content

ಮದ್ರಸಾ ಅಧ್ಯಾಪಕರು ಜಮಾಅತ್ ಕಮಿಟಿಯವರ ಸೇವೆ ಮಾಡಬೇಕಾದವರಲ್ಲ. ಅವರನ್ನು ಸೇವೆಯಿಂದ ತೆಗೆಯುವಾಗ ಸೌಜನ್ಯದಿಂದ ವರ್ತಿಸಿರಿ.

ಮದ್ರಸಾ ಅಧ್ಯಾಪಕರು ಜಮಾಅತ್ ಕಮಿಟಿಯವರ ಸೇವೆ ಮಾಡಬೇಕಾದವರಲ್ಲ.
ಅವರನ್ನು ಸೇವೆಯಿಂದ ತೆಗೆಯುವಾಗ  ಸೌಜನ್ಯದಿಂದ ವರ್ತಿಸಿರಿ.

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ , ಧಾರ್ಮಿಕ ಪ್ರಜ್ಞೆ , ಸಂಸ್ಕೃತಿಯನ್ನು ಕಲಿಸಿಕೊಡುವಲ್ಲಿ ಮದ್ರಸಾ ಅಧ್ಯಾಪಕರ ಸೇವೆ ಅನನ್ಯವಾದದ್ದು. ಹಿರಿಯರೊಂದಿಗೆ ಗೌರವ ತೋರಿಸಲು ,ಕಿರಿಯರೊಂದಿಗೆ ಪ್ರೀತಿಸಲು ಕಲಿಸಿಕೊಟ್ಟು ಎಳೆಯ ಮಕ್ಕಳ ಮನಸ್ಸಿನಲ್ಲಿ ಮಾನವೀಯ ಮೌಲ್ಯವನ್ನು ಬಿತ್ತರಿಸಲು  ಮದ್ರಸಾದಲ್ಲಿ ಕೆಲವೊಮ್ಮೆ ಅಧ್ಯಾಪಕರು ಪಡುವ ಕಷ್ಟ ,ತ್ಯಾಗ ವರ್ಣನಾತೀತವಾದದ್ದು.

ಕೆಲವೊಂದು ಕಡೆ ಕೆಲ ಅಧ್ಯಾಪಕರು ಮಾಡುವ ತಪ್ಪುಗಳ ಹೆಸರಿನಲ್ಲಿ ಇಡೀ ಅಧ್ಯಾಪಕ ಸಮೂಹವನ್ನೇ ತಪ್ಪಿತಸ್ಥರ ಸಾಲಿನಲ್ಲಿ ನಿಲ್ಲಿಸುವ ಜನರಿಗೂ ಇಲ್ಲಿ ಕಡಿಮೆಯೇನಿಲ್ಲ.

ಹಲವು ವೈಶಿಷ್ಟ್ಯವನ್ನು ಹೊಂದಿರುವುದರ ಮೂಲಕ ,ಪುಣ್ಯದಾಯಕ ತಿಂಗಳಾಗಿ ಗುರುತಿಸಲ್ಪಡುವ ರಂಝಾನ್ ಆಗತವಾಗುವಾಗ ಕೆಲವೊಂದು ಜಮಾಅತ್ ಕಮಿಟಿಗಳಿಗೆ ಅದೇನು ಆಗುತ್ತೋ ಅಂತ  ಅರ್ಥವಾಗುವುದೇ ಇಲ್ಲ. ಊರಿನಲ್ಲಿ ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುವ ಉಸ್ತಾದರ‌ನ್ನು ಕಾರಣಗಳಿಲ್ಲದೆ ಬಿಟ್ಟು ಬಿಡುವುದು..!!
ಒಂದು ವೇಳೆ ಕಾರಣಗಳನ್ನು ಪ್ರಶ್ನಿಸಿದರೆ ಕೆಲವೊಮ್ಮೆ ಹಾರಿಕೆಯ ಉತ್ತರಗಳಾಗಿದ್ದರೆ ,ಇನ್ನು ಕೆಲವೊಮ್ಮೆ ಇಲ್ಲ ಸಲ್ಲದ ಆರೋಪಗಳನ್ನು ಅವರಿಗೆ ಬೋನಸ್ ಆಗಿ ನೀಡುವುದರ ಮೂಲಕವಾಗಿದೆ ಅವರನ್ನು ಸೇವೆಯಿಂದ ವಜಾ ಗೊಳಿಸುವುದು..!!

ಒಂದು ಜಮಾಅತ್ ಅಧ್ಯಕ್ಷರು ಅಂದರೆ ಅವರಿಗೆ ಆ ಜಮಾಅತ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳ ಮೇಲೂ ಹೊಣೆಗಾರಿಕೆಯಿರುತ್ತದೆ.
ಮಸೀದಿಯ ಅಧ್ಯಕ್ಷ ಅನ್ನುವ ಪದವಿಗೂ ಒಂದು ಘನತೆಯಿರುತ್ತದೆ.
ನಾಳೆ ಪಾರತ್ರಿಕ ಲೋಕದಲ್ಲಿ ಪ್ರತಿಯೊಂದಕ್ಕೂ ಉತ್ತರವನ್ನು ಹೇಳಲೇಬೇಕಾದ ಅನಿವಾರ್ಯತೆನೂ ಅವರಿಗಿದೆ.
ಜಮಾಅತಿನ ಅಧ್ಯಕ್ಷರಾದವರ ಮೇಲೆ ಹಲವು ಜವಾಬ್ದಾರಿಗಳೂ ಇರುತ್ತದೆ.
ಅದನ್ನು ನ್ಯಾಯಯುತವಾಗಿ ನಿಭಾಯಿಸಬೇಕಾದದ್ದು ಅವರ ಕರ್ತವ್ಯವೂ ಆಗಿರುತ್ತದೆ.  ಜಮಾಅತಿನ ಅಧ್ಯಕ್ಷತನ ಅನ್ನುವುದು ಅರ್ಹತೆಯ ಮೇಲೆ ಆಯ್ಕೆಯಾಗಬೇಕಾದದ್ದು . ಆದರೆ ಇಂದು ಪ್ರತಿಯೊಂದು ಜಮಾಅತ್ ಕಮಿಟಿಗಳಲ್ಲೂ ಪ್ರತಿಷ್ಠೆ ಗಳು ತಾಂಡವಾಡುತ್ತಿದೆ.
ಶ್ರೀಮಂತಿಕೆಯ ಮುಂದೆ ಮಾತುಗಳು ಮೌನವಾಗುವಾಗ ನ್ಯಾಯಗಳು ಮರೀಚಿಕೆಯಾಗುಷ್ಟರ ಮಟ್ಟಿಗೆ ಪರಿಸ್ಥಿತಿಗಳು ತಲೆದೋರಿ ನಿಂತಿದೆ.

ಮುಸ್ಲಿಂ ಸಮುದಾಯದ ನಡುವಿನ ಅದೆಷ್ಟೋ ಜ್ವಲಂತ ಸಮಸ್ಯೆಗಳು ಸಮುದಾಯದ ಅಭಿವೃದ್ಧಿಗೆ ಮಾರಕವಾಗುತ್ತಿರುವಾಗ ಜಮಾಅತ್ ಕಮಿಟಿಗಳು ತಮ್ಮ ತಮ್ಮೊಳಗಿನ ಪ್ರತಿಷ್ಠೆ ಗಳನ್ನು ಬೆಳೆಸುವ ಚಿಂತನೆ ನಡೆಸುತ್ತದೆಯೇ ವಿನಃ ಜಮಾಅತಿನಲ್ಲಿರುವ ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮಾಡುತ್ತಲೇ ಇಲ್ಲ.

ಮದ್ರಸಾ ಅಧ್ಯಾಪಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ , ಧಾರ್ಮಿಕ ಶಿಕ್ಷಣವನ್ನು ನೀಡಿ , ಊರಿನ ಜನತೆಗೆ ಒಳಿತಿನ ದಾರಿಯನ್ನು ಪರಿಚಯಿಸಿಕೊಡುವುದರ ಮೂಲಕ ಊರನ್ನು ಧಾರ್ಮಿಕತೆಯ ಕೇಂದ್ರವನ್ನಾಗಿಸಲು ಸದಾ ಪ್ರಯತ್ನಿಸುತ್ತಿರುವವರಾಗಿದ್ದಾರೆ.
ಹೋಟೆಲ್ ಕೆಲಸದಲ್ಲಿನ ಕ್ಲೀನರ್ ಗೂ ದಿನವೊಂದಕ್ಕೆ ಐನೂರರಿಂದ ಆರುನೂರು ವರೆಗೆ ಸಂಪಾದನೆ ಸಿಗುವಾಗಲೂ ಬಹುತೇಕ ಮದ್ರಸಾ  ಅಧ್ಯಾಪಕರು ತಮ್ಮ ಕುಟುಂಬದ ದಯನೀಯ ಪರಿಸ್ಥಿತಿಯನ್ನು ಲೆಕ್ಕಿಸದೆಯೂ ಈಗಲೂ ತಿಂಗಳೊಂದಕ್ಕೆ ಜುಜುಬಿ ಒಂಭತ್ತು ಸಾವಿರದಿಂದ ಹತ್ತು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುವವರಿದ್ದಾರೆ.
ಹಲವು ಜಮಾಅತಿಗರು ಅವರನ್ನು ದುಡಿಮೆಯ ವಸ್ತುಗಳನ್ನಾಗಿ ದುಡಿಸುವವರೂ ಇದ್ದಾರೆ.
ಅವರಿಗೂ ಒಂದು ಕುಟುಂಬವಿರುತ್ತದೆ. ಅವರ ಮಕ್ಕಳಿಗೂ ಶಿಕ್ಷಣ ಕೊಡಬೇಕಾಗುತ್ತದೆ. ನಾವು ನೀಡುವ ಸಂಬಳದಿಂದ ಇದು ಅವರಿಂದ ಸಾಧ್ಯವಾಗಬಹುದಾ ಅನ್ನುವ ಚಿಂತನೆಯನ್ನು ನಡೆಸಲು ಸಾಧ್ಯವಾಗದ ಹಲವು ಜಮಾಅತ್ ಕಮಿಟಿಗಳಲ್ಲಿ ಈಗಲೂ ಸರ್ವಾಧಿಕಾರದ ವರ್ತನೆಗಳು ನಮಗೆ ಕಾಣಿಸಲು ಸಾಧ್ಯವಾಗುತ್ತದೆ.

ಉಸ್ತಾದರು ಜಮಾಅತ್ ಕಮಿಟಿನ ಪರವಾಗಿರಬೇಕು. ಅನ್ಯಾಯದ ವಿರುದ್ಧವಾಗಿ ಮಾತನಾಡಬಾರದು.
ಜಮಾಅತ್ ಕಮಿಟಿಯವರು ಹೇಳಿದೆಲ್ಲವನ್ನೂ ಅದರ ಸಾಧಕ ,ಬಾಧಕಗಳನ್ನು ಚಿಂತಿಸದೆ ಕೇಳುತ್ತಿರಬೇಕು ಅನ್ನುವ ವಿತಂಡವಾದಗಳನ್ನು ಮಂಡಿಸುವ ಹಲವು ಜಮಾಅತ್ ಕಮಿಟಿಗಳು ನಮ್ಮ ಸಮುದಾಯದ ನಡುವೆ ಇದೆ.
ಒಂದು ವೇಳೆ ಅದಕ್ಕೆ ತದ್ವಿರುದ್ಧವಾಗಿ ವರ್ತಿಸಿದರೆ ಅವರನ್ನು ಮನೆಗೆ ಕಳುಹಿಸುವ ಜಮಾಅತ್ ಕಮಿಟಿಯವರಿಗೆ ನಮ್ಮಲ್ಲೇನು ಕೊರತೆಯಿಲ್ಲ.

ಇಂದು ಹಲವು ಉಸ್ತಾದರು ಜಮಾಅತ್ ಕಮಿಟಿಗಳಲ್ಲಿನ ಅನಾಚಾರ, ಊರಿನಲ್ಲಿ ನಡೆಯುವ ಅನಿಸ್ಲಾಮಿಕತೆಯ ಕುರಿತು ನಿರ್ಭೀತೆಯಿಂದ ಮಾತನಾಡುತ್ತಾರೆ. ದೀನನ್ನು ನಿರ್ಭೀತಿಯಿಂದ ಹೇಳುವ ಧೈರ್ಯವನ್ನು ತೋರುತ್ತಾರೆ. ಇನ್ನು ಕೆಲವರು ಜಮಾಅತ್ ಕಮಿಟಿಯವರನ್ನು ಭಯಪಟ್ಟುಕೊಂಡು ತಪ್ಪನ್ನು ಕಂಡೂ ಕಾಣದವರಂತೆ ವರ್ತಿಸುತ್ತಿದ್ದಾರೆ.
ಉಸ್ತಾದರೇ.. ನೀವು ಕಲಿತ ದೀನನ್ನು ನಿರ್ಭೀತಿಯಿಂದ ಹೇಳುವಂತವರಾಗಿ .
ಧನಿಕನು ತಪ್ಪು ಮಾಡಿದರೆ ಆತನ ಪ್ರತಿಷ್ಠೆಯನ್ನು ನೋಡಿ ಮೌನವಾಗದಿರಿ.
ಜಮಾಅತ್ ಕಮಿಟಿಯವರಿಂದ ತಪ್ಪು ನಡೆದರೂ ಅದನ್ನು ಖಂಡಿಸಿ , ಜಮಾಅತ್ ಕಮಿಟಿಯವರ ಹೊಣೆಗಾರಿಕೆಯ ಕುರಿತು ತಿಳಿಸಿಕೊಡಿರಿ.
ನಿಮಗೆ ಕೆಲಸ ಒಂದು ಕಡೆ ಹೋದರೆ ನಾಳೆ ಮತ್ತೊಂದು ಕಡೆ ಸಿಗಬಹುದು.
ಆದರೆ ಸತ್ಯವನ್ನು ಅಸತ್ಯವನ್ನಾಗಿಸುವಲ್ಲಿ ನೀವು ಸಹಕಾರಿಗಳಾಗದಿರಿ.
*ಪ್ರೀತಿಯ ಜಮಾಅತ್ ಕಮಿಟಿಯವರೇ..ಊರಿನ ಮಕ್ಕಳಿಗೆ ದೀನ್ ಕಲಿಸುವ ಉಸ್ತಾದರನ್ನು ನಿಮಗೆ ಬದಲಾಯಿಸಲೇಬೇಕಿದ್ದಲ್ಲಿ  ಅವರನ್ನು ಪ್ರೀತಿ ಪೂರ್ವಕವಾಗಿ ಬೀಳ್ಕೊಡುವಂತವರಾಗಿ‌.*
*ನಿಮ್ಮ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ, ನಿಮ್ಮ ಊಹೆಗೆ ತಕ್ಕಂತೆ ವರ್ತಿಸಿಲ್ಲ ಅಂದುಕೊಂಡು ಅವರನ್ನು ಇಲ್ಲ ಸಲ್ಲದ ಅಪವಾದಗಳನ್ನು ಸೃಷ್ಡಿಸಿ ಕಲಿಸಿ ಬಿಡುವಾಗ ಅವರಿಗೂ ನಮ್ಮಂತೆಯೇ ಇರುವ ಕುಟುಂಬವೊಂದಿದೆ ಅನ್ನುವ ವಾಸ್ತವ ಸತ್ಯವನ್ನು ಮರೆಯದಿರಿ.*
ಅವರಿಗೆ ಇದಲ್ಲದಿದ್ದಲ್ಲಿ ನಾಳೆ ಮತ್ತೊಂದು ಮಸೀದಿ ಸಿಗಬಹುದು. ಒಬ್ಬರ ಮೇಲೆ ಅನಗತ್ಯ ಅಪವಾದ ಹೊರಿಸಿದ್ದಲ್ಲಿ ನಮಗದರಿಂದ ರಕ್ಷೆ ಹೊಂದಲು ತುಂಬಾ ಕಷ್ಟಪಡಬೇಕಾದೀತು.
ಅವರ ಕುಟುಂಬದ ಪ್ರತಿಯೊಂದು ಕಣ್ಣೀರಿಗೂ ಬೆಲೆ ಕಟ್ಟಲೇಬೇಕಾದೀತು ಜೋಕೆ..!!
ಯಾವ ಉಸ್ತಾದರೂ ಕಲಿಕೆ ಪೂರ್ಣಗೊಳಿಸಿ ,ಅಲ್ಲಿಂದ ಬಿರುದು ಪಡೆದು ಬರುವಾಗ ನಾನು ಇಂತಿಂತಹ  ಮಸೀದಿಯಲ್ಲೇ ಸೇವೆ ಮಾಡಬೇಕಾದವನು ಅಂತ ಉದ್ದೇಶವಿಟ್ಟುಕೊಂಡು ಬರುವವರಲ್ಲ ಅದು ನೆನಪಿರಲಿ.
ಮನುಷ್ಯತ್ವವನ್ನು ಅಡವಿಟ್ಟು ನಿಮ್ಮೊಳಗಿನ ಪ್ರತಿಷ್ಟೆಗಳಿಗೆ ಮದ್ರಸಾ ಅಧ್ಯಾಪಕರನ್ನು ಬಲಿಪಶು ಮಾಡದಿರಿ.

✍🏻ಸ್ನೇಹಜೀವಿ ಅಡ್ಕ

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.