ವಿಟ್ಲ.ಎಸ್ಸೆಸ್ಸಫ್ ವಿಟ್ಲ ಡಿವಿಷನ್ ಹೈಸ್ಕೂಲ್ ಸಮಿತಿ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳ ಸಮಾವೇಶ ಹೈಕೊನ್ ಕಾರ್ಯಕ್ರಮ ವಿಟ್ಲದ ಬೈರಿಕಟ್ಟೆ ಯಲ್ಲಿ ನಡೆಯಿತು.
ನನ್ನ ವಿದ್ಯಾಸಂಸ್ಥೆ, ಆಧ್ಯಾತ್ಮಿಕತೆ ಹಾಗೂ ಮೋಟಿವೇಶನ್ ಎಂಬ ಮೂರು ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳನ್ನು ನಡೆಸಲಾಯಿತು.
ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ, ಮಂಜೇಶ್ವರ ಡಿವಿಷನ್ ಕೋಶಾಧಿಕಾರಿ ಟಿ. ಎಂ. ಅಶ್ರಫ್ ಸಖಾಫಿ ಉರ್ಣಿ ಹಾಗೂ ಮೂಡಬಿದಿರೆ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಅಹ್ಮದ್ ಎಮ್ಮೆಸ್ಸಿಇ ವಿವಿಧ ತರಗತಿಗಳನ್ನು ನಡೆಸಿಕೊಟ್ಟರು.
ವಿಟ್ಲ ಡಿವಿಷನ್ ಅಧ್ಯಕ್ಷರಾದ ವಿ .ಯಂ .ಅಬೂಬಕ್ಕರ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ವೈಎಸ್ ವಿಟ್ಲ ಸೆಂಟರ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಉದ್ಘಾಟಿಸಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್, ಸೌದಿ ಅರೇಬಿಯಾ ನಾಯಕರಾದ ಸಲೀಂ ಕನ್ಯಾಡಿ, ಸಯ್ಯದ್ ಅಬೂಬಕ್ಕರ್ ತಂಙಳ್ ಹಾಗೂ ಉಮರ್ ಅಳಕೆಮಜಲು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.
ಎಸ್ಸೆಸ್ಸಫ್ ದ.ಕ ಜಿಲ್ಲಾ ಕಾರ್ಯದರ್ಶಿ ಡಿ.ಬಿ ಅಬ್ದುಲ್ ಸಲೀಂ ಹಾಜಿ ಬೈರಿಕಟ್ಟೆ, ಜಿಲ್ಲಾ ಸದಸ್ಯರಾದ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಹಾಗೂ ಡಿವಿಷನ್ ಕೋಶಾಧಿಕಾರಿ ಹಾಜಿ ಅಬ್ದುರ್ರಝ್ಝಾಕ್ ಸಖಾಫಿ ಕೆಲಿಂಜ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಝ್ಝಾಕ್ ಪೆಲ್ತಡ್ಕ ಹಾಗೂ ಇನ್ನಿತರ ಡಿವಿಷನ್ ಹಾಗೂ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.
ಡಿವಿಷನ್ ಹೈಸ್ಕೂಲ್ ಕನ್ವೀನರ್ ಅಶ್ಫಾಕ್ ಕೊಡಂಗಾಯಿ ಸ್ವಾಗತಿಸಿ,ಡಿವಿಷನ್ ಕಾರ್ಯದರ್ಶಿ ಸಿದ್ದೀಕ್ ಮಿಸ್ಬಾಹಿ ಕೃತಜ್ಞತೆ ಸಲ್ಲಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಝಿಯಾದ್ ಮಾಸ್ಟರ್ ಬೈರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment