*ಪ್ರಿಯ ಮುಅಲ್ಲಿಂ,ಮುಅಝ್ಝಿನ್,ಸದರ್,ಖತೀಬ್ ಸೇವೆಯಲ್ಲಿರುವ ಮಿತ್ರರೇ,*
ಮದ್ರಸಾ ಪರೀಕ್ಷೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆ ಮುಗಿದೋ ಅಥವಾ ರಮಳಾನ್ ಮುಗಿದೋ ಈಗಿರುವ ಮೊಹಲ್ಲಾದಿಂದ ಬಿಡಲು ಮನದೊಳಗೆ ತೀರ್ಮಾನಿಸಿ ಅದರ ಘೋಷಣೆಯ ಹೊಸ್ತಿಲಲ್ಲಿರುವಾಗ ರಾಜಿನಾಮೆಯನ್ನು ಲಿಖಿತ ಮೂಲಕ ತಿಳಿಸುವುದು ಸೇವಾ ಮರ್ಯಾದೆಯಾಗಿದೆ.ಈ ಬಗ್ಗೆ ಅದರ ಒಂದು ಮಾದರಿಯನ್ನು ಕೆಳಗೆ ಕೊಡುತ್ತಿದ್ದೇನೆ.ಅಗತ್ಯವಿರುವವರಿಗೆ ಸಹಾಯಕವಾಗಲಿ ಎಂಬ ಸದುದ್ದೇಶವಾಗಿದೆ ನನ್ನದು.
ರಾಜಿನಾಮೆ ನೀಡಲು ನಮಗೆ ಹಲವು ಕಾರಣಗಳಿರಬಹುದು.ಇರುವ ಮೊಹಲ್ಲಾದಲ್ಲಿ ಕೆಲವರೊಂದಿಗಿರುವ ಮುನಿಸೋ,ವ್ಯಕ್ತಿಗತ ದ್ವೇಷವೋ,ಫಿತ್ನಗಾರರ ಪಿತೂರಿಯ ಬೇಸರವೋ,ಏರದ ವೇತನದ ವೇದನೆಯೋ,ಅಸೌಕರ್ಯಗಳೋ ಹೀಗೆ ನೂರಾರು ಕಾರಣಗಳಿರಬಹುದು.ಆದರೆ ನಮ್ಮ ರಾಜಿನಾಮೆಯು ಮೊಹಲ್ಲಾದಲ್ಲಿ ಯಾವುದೇ ಭಿನ್ನತೆಗೆ ಅವಕಾಶವೊದಗಿಸದಂತೆ ನಮಗಿರುವ ಅಸಮಾಧಾನವನ್ನು ರಾಜಿನಾಮೆ ಪತ್ರದಲ್ಲಿ ವ್ಯಕ್ತಪಡಿಸದಂತೆ ಪತ್ರವಿರುವುದು ಆರೋಗ್ಯಕರವಾಗಿದೆ.ಅದನ್ನರಿತು ಕೊಂಡು ಸಂತೋಷದಿಂದ ಮೊಹಲ್ಲಾದಿಂದ ನಿರ್ಗಮಿಸುವುದೇ ಒಳ್ಳೆಯ ಬೆಳವಣಿಗೆಯ. ನಮ್ಮ ಸಿಟ್ಟನ್ನು ರಾಜಿನಾಮೆ ಪತ್ರದಲ್ಲಿ ತೀರಿಸದಿರುವುದು ಬುದ್ಧಿಯಾಗಿದೆ.
------------------------------
*ಮಾದರಿ ರಾಜಿನಾಮೆ ಪತ್ರ*
----------------------------
ರಿಗೆ :
ಅಧ್ಯಕ್ಷರು ಹಾಗೂ ಸದಸ್ಯರು
.......................ಜಮಾಅತ್ ಕಮಿಟಿ
....................................
ರಿಂದ :
.................................
..................................
ವಿಷಯ : ರಾಜಿನಾಮೆ ಪತ್ರ
ಮಾನ್ಯರೇ ಅಸ್ಸಲಾಮು ಅಲೈಕುಂ
ನಾನು .................ಆಡಳಿತಕ್ಕೊಳಪಟ್ಟ ...................ಮದ್ರಸ/ಮಸೀದಿಯಲ್ಲಿ ಕಳೆದ ........ವರ್ಷಗಳಿಂದ .............ಆಗಿ ಸೇವೆ ಸಲ್ಲಿಸುತ್ತಿದ್ದು ರಮಳಾನ್ ಬಳಿಕ ಇಲ್ಲಿ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯುವ ಉದ್ದೇಶವಿಲ್ಲದಿರುವುದರಿಂದ ನನ್ನ ವೈಯುಕ್ತಿಕ ಕಾರಣಗಳಿಗಾಗಿ ಸ್ವ ಇಚ್ಛೆಯಿಂದ ದಿನಾಂಕ ................ಕ್ಕೆ ನನ್ನ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದೇನೆ.ನನ್ನ ಇಲ್ಲಿಯ ಸೇವಾವಧಿಯಲ್ಲಿ ನನಗೆ ಈ ಮೊಹಲ್ಲಾದವರು ನೀಡಿದ ಎಲ್ಲಾ ವಿಧದ ಪ್ರತ್ಯಕ್ಷ -ಪರೋಕ್ಷ ಸ್ನೇಹ ಸಹಕಾರಗಳಿಗೆ ನಾನು ತುಂಬಾ ಅಭಾರಿಯಾಗಿದ್ದೇನೆ. ವಹಿಸಿಕೊಂಡ ಹುದ್ದೆಯಲ್ಲಿ
ನನ್ನಿಂದ ಏನಾದರೂ ಅತೃಪ್ತಿಕರ ವರ್ತನೆಗಳು ಮನುಷ್ಯ ಸಹಜವಾಗಿ ಸಂಭವಿಸಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತಾ ಈ ರಾಜಿನಾಮೆ ಪತ್ರವನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ.
ಅಲ್ಲಾಹು ಎಲ್ಲರಿಗೂ ಸುಖ,ಶಾಂತಿ,ನೆಮ್ಮದಿ ಕರುಣಿಸಲಿ.ಆಮೀನ್
ದಿನಾಂಕ : 12-5-2017 ಇತೀ
Comments
Post a Comment