💥💥ಬೆಂಕಿ ತೋರಿಸಿ ನಮ್ಮನ್ನು ಎದುರಿಸುದಾದರೆ, ನಂರೂದ್ ನ ಬೆಂಕಿಯನ್ನು ಸ್ವೀಕರಿಸಿದ ಇಬ್ರಾಹಿಂ(ಅ) ರ ಮಕ್ಕಳು ನಾವು..
ಖಡ್ಗವನ್ನೋ,ಕತ್ತಿಯನ್ನೋ ಹಿಡಿದು ಬೆದರಿಸುದಾದರೆ ಖಡ್ಗದೊಂದಿಗೆ ಚೆಂಡಾಡಿದ ದಾವೂದ್ (ಅ) ರ ಮಕ್ಕಳು ನಾವು.
ಇನ್ನು ಜನಸಂಖ್ಯಾಬಲದೊಂದಿಗೆ ನಮ್ಮನ್ನು ಬೆದರಿಸುದಾದರೆ ಬದ್ರ್ ಯುದ್ದದಲ್ಲಿ 313 ಜನರೊಂದಿಗೆ ಹೋರಾಡಿದ ಮುಹಮ್ಮದ್ (ಸ.ಅ) ರ ಅನುಯಾಯಿಗಳು.....
ಮಂಗಳೂರು ಚಲೋ ದಲ್ಲಿ ಪ್ರಭಾಷಣ ಲೋಕದ ಸಿಡಿಲ ಮರಿ - ಶಾಫಿ ಸಅದಿ
----------------------------------------------------------------
➖➖➖➖➖➖➖➖➖➖
*ಯಶಸ್ವಿಯಾಗಿ ನಡೆದ ಮಂಗಳೂರು ಚಲೋ*
*ಮಂಗಳೂರು*. ಅಮಾಯಕರ ಮೇಲೆ ನಡೆಯುವ ದೌರ್ಜನ್ಯ ಖುರೈಶಿ ಪ್ರಕರಣದೊಂದಿಗೆ ಕೊನೆಗೊಳ್ಳಬೇಕೆಂದು ಹಿರಿಯ ಮುಸ್ಲಿಂ ಮುಖಂಡ ಕೆ.ಎಸ್. ಮುಹಮ್ಮದ್ ಮಸೂದ್ ಹೇಳಿದ್ದಾರೆ.
ಮಂಗಳೂರು ನೆಹರೂ ಮೈದಾನದಲ್ಲಿ ನಡೆದ " ಮಂಗಳೂರು ಚಲೋ" ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಅಮಾಯಕರಿಗೆ ಅಮಾನುಷ ದೌರ್ಜನ್ಯ ನಡೆಸುವುದು ಆತಂಕಕಾರಿ ಬೆಳವಣಿಗೆ ಯಾಗಿದ್ದು ಇಂಥಾ ಪ್ರಕರಣಗಳಲ್ಲಿ ತಪ್ಪಿತಸ್ಥ ಪೊಲೀಸರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕೆಂದು ಅವರು ಆಗ್ರಹಿಸಿದರು.
ಮಾಜಿ ಮೇಯರ್ ಕೆ.ಅಶ್ರಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು
ಮುಖ್ಯ ಭಾಷಣ ಮಾಡಿದ ರಾಜ್ಯ ವಕ್ಪ್ ಮಂಡಳಿ ನಿರ್ದೇಶಕ ಎನ್.ಕೆ.ಎಂ.ಶಾಫಿ ಸ ಅದಿ ಬೆಂಗಳೂರು ಮಾತನಾಡಿ" ಮುಸ್ಲಿಮರು ಜಗತ್ತಿನ ಅತಿದೊಡ್ಡ ಶಕ್ತಿಯಾಗಿದ್ದು ಖುರ್ ಆನ್ ಮತ್ತು ಪ್ರವಾದಿ ಚರ್ಯೆ ಪ್ರಕಾರ ಜೀವಿಸಿದರೆ ಯಾವ ಶಕ್ತಿಗಳಿಗೂ ಹೆದರಬೇಕಾಗಿಲ್ಲ.
ಖುರೈಶಿ ಎಂಬ ಯುವಕನಿಗಾದ ಅನ್ಯಾಯ ದುರದೃಷ್ಟಕರವಾಗಿದ್ದು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ,ಶಾಸಕ ಸಹಿತ ಯಾವುದೇ ಜನಪ್ರತಿನಿಧಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನಿಂದಿಸುವ ಬದಲು ಅವರನ್ನು ಕರೆದು ಸಂಗತಿಯ ಬಗ್ಗೆ ವಿವರಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮಾತನಾಡಿ " ಪೊಲೀಸರ ಬೂಟು ಇರುವುದು ಅಮಾಯಕರನ್ನು ತುಳಿಯುವುದಕ್ಕಲ್ಲ ಬದಲಾಗಿ ಜನರ ಸೇವೆಗಾಗಿ ಓಡಾಡಲಿಕ್ಕಿರುವುದಾಗಿದೆ.
ಅಮಾಯಕ ಯುವಕರ ಮೇಲೆ ದೌರ್ಜನ್ಯ ನಡೆದರೆ ಮುಸ್ಲಿಮರು ಸುಮ್ಮನಿರುವುದಿಲ್ಲ,ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಡಲಿದ್ದಾರೆ" ಎಂದು ಎಚ್ಚರಿಕೆ ನೀಡಿದರು.
ಸುಹೈಲ್ ಖಂದಕ್.ಹಾಫಿಳ್ ಯ ಅಕೂಬ್ ಸ ಅದಿ ನಾವೂರು,ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ,ಪಿ.ಬಿ.ಡೇಸಾ ಮಂಗಳೂರು ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
✍ *ವರದಿ: ಕೆ.ಎ.ಅಬ್ದುಲ್ ಅಝೀಝ್ ಪುಣಚ*
➖➖➖➖➖➖➖➖➖➖➖
*ಮಂಗಳೂರು ಚಲೋ ಕಲಿಸಿ ನೀಡಿದ ಸಂದೇಶ ಗಳು*
*-----------------------------*
ಗೊಂದಲಗಳು ಸಾಕಷ್ಟು ಇದ್ದವು.ಅಪಪ್ರಚಾರಗಳ ಭರಾಟೆ ಮುಗಿಲು ಮುಟ್ಟಿತ್ತು.
ನಾನು ಮಂಗಳೂರು ಚಲೋ ಗೆ ಬಸ್ಸಿನಲ್ಲಿ ತೆರಳಲು ದುಬಾಯಿಂದ ಮಿತ್ರ ಮೆಸ್ಸೇಜ್ ಮಾಡಿದ
''ಚಲೋ" ಕ್ಯಾನ್ಸಲ್ ಅಯಿತೆಂದು msg ಬರುತ್ತಾ ಇದೆ.ನಾ ಹೇಳಿದೆ ಇಲ್ಲ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ.ಅದಾಗಲೇ ಜನ ಮಸ್ತ್ ಸೇರಿದ್ದರು!
ಅಂದ್ರೆ ಕೊನೆ ಗಳಿಗೆ ತನಕ ಜನಸೇರದಂತೆ ತೆರೆಮೆರಯಲ್ಲಿ ಅಪಪ್ರಚಾರ ನಡೆಯುತ್ತಿತ್ತು!
ವಿಷಯ ಒಂದೆ ನಮ್ಮ ಬೆಂಬಲ ಇಲ್ಲ ಹಾಗಾಗಿ ಚಲೊ ಪ್ರೊಟಸ್ಟ್ ಯಶಸ್ವಿಯಾಗಬಾರದು!
ಆದರೆ ಸುನ್ನೀ ಉಲಮಾಗಳು ಚಲೋ ಗೆ ಬೆಂಬಲ ಕೊಟ್ಟಿದ್ದಾರೆಂಬ ಮೆಸ್ಸೇಜ್ ಯಾವಗನಿಂದ ಹರಿಯಲು ಆರಂಭಿಸಿತೋ ಸಮುದಾಯ ಎಲರ್ಟ್ ಆಯಿತು!
ಅದೂ ಕೂಡಾ ಗ್ರೂಫಿಸಂ ರಹಿತ ಬೆಂಬಲ!
ನೆಹರು ಮೈದಾನ ಜನಸಾಗರವಾಯಿತು.
ಚಲೋ ಪ್ರೊಟಸ್ಟ್ ನ್ನು ಇನ್ನಿಲ್ಲದಂತೆ ನಾಶಮಾಡಲು ತರೆಮೆರೆಯಲ್ಲಿ ಕುಳಿತು ಹೊಂಚುಹಾಕುತ್ತಿದ್ದ ಆಡಿನ ಚರ್ಮವೊತ್ತ ತೋಳಗಳೆಲ್ಲಾ ಬಿಲ ಸೇರಿದವು.
ಇಂದಿನ ಪ್ರೊಟಸ್ಟ್ ಸಮುದಾಯಕ್ಕೆ ಸ್ಪಷ್ಟ ಸಂದೇಶ ನೀಡಿದೆ.
ಸುನ್ನೀ ಮುಸ್ಲಿಮರನ್ನು ಮುಸ್ಲಿಮರಂದೇ ನಂಬದ ಅಲೆಮಾರಿ ನೂತನವಾದಿಗಳನ್ನು ಸೇರಿಸಿ ' ಶೂರಾ' ಮಾಡಿ ಪ್ರಯೋಜನ ಇಲ್ಲ. ಅದೇನಿದ್ದರೂ ಅವರಿಗೆ ಸಮುದಾಯ ಕಾಳಜಿ ವಿಷಯದಲ್ಲಿ ಗೇಟ್ ಪಾಸ್ ಕೊಡಲೇ ಬೇಕು.
ಇಲ್ಲಿನ ಬಹುಸಂಖ್ಯಾತ ಸುನ್ನೀ ಮುಸ್ಲಿಮರನ್ನು ಒಟ್ಟು ಸೇರಿಸಿ ಅಧೀಕೃತ ಆಹ್ವಾನ ನೀಡಿ 'ಚಲೋ' ಪ್ರೊಟಸ್ಟ್ ಮಾಡಿ ನೋಡಿ ಆವಾಗ ಸಮುದಾಯ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆಯೆಂದರೆ ಮಂಗಳೂರು ನೆಹರುಮೈದಾನದಂತಹ ಎರಡು ಮೈದಾನಗಳು ಸಾಕಾಗದಂತೆ ಜನಸಾಗರ ಹರಿದುಬರುವುದರಲ್ಲಿ ಸಂಶಯವಿಲ್ಲ.
ಸಮುದಾಯದ ಶಕ್ತಿ ಏನೆಂದು ಅಧಿಕಾರಿಗಳಿಗೆ ಮತ್ತು ರಾಜಕೀಯ ಪುಡಾರಿಗಳಿಗೆ ತೋರಿಸಲು ಸಾದ್ಯವಾಗುತ್ತದೆ.
ಅದನ್ನು ಸಮುದಾಯದ ಉಮರಾಗಳು ಇಂದಿನ ಪ್ರೊಟಸ್ಟ್ ನಿಂದ ಅರ್ಥಮಾಡಿಕೊಳ್ಳಬೇಕು.
ಇದುವರೆಗೆ ಸಮುದಾಯ ದೌರ್ಜನ್ಯ ದ ವಿಷಯ ಬರುವಾಗ ಚಕ್ಕರಗಂಜಿ ' 'ಶೂರಾ' ಕರೆದು ಕೈ ತೊಳೆಯುವ ನಮ್ಮ ಉಮರಾಗಳಿಗೆ ಇಂದಿನ ಚಲೋ ಪ್ರೊಟಸ್ಟ್ ನಿಂದ ತುಂಬಾ ಪಾಠ ಕಲಿಯಲಿಕ್ಕಿದೆ.
ನೇತೃತ್ವ ಉಲಮಾಗಳಿಗೆ ಬಿಟ್ಟು ಕೊಡಬೇಕು.ಉಮರಾಗಳು ಬಂಡೆಗಲ್ಲಿನಂತೆ ಅವರಿಗೆ ಬೆಂಬಲ ನೀಡಬೇಕು.ಆವಾಗ ಸಮುದಾಯ ಯಾವ ರೀತಿ ಸೆಟೆದು ನಿಲ್ಲುತ್ತದೆಯೆಂದು ಪರೀಕ್ಷಿಸಿ ನೋಡಿ.
ನೋ ಡೌಟ್ ಹಾಗೊಂದು ಘಟನೆ ನಡೆದರೆ ಅದು ಕರಾವಳಿಯ ಹಿಸ್ಟರಿ ಯಲ್ಲಿ ಅಳಿಸಲಾಗದ ಘಟನೆಯಾಗಿ ಸ್ಮರಿಸಲ್ಪಡುತ್ತದೆ.
ಅದು ದೌರ್ಜನ್ಯ ನಡೆಸುವ ಸಂಘಿ ಪೋಲಿಸರಿಗೆ ಮತ್ತು ರಾಜಕೀಯದಲ್ಲಿರುವ ದುರುಳರಿಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ.
ಆತಂಕ, ಅಪಪ್ರಚಾರ, ಗೊಂದಲಗಳಿದ್ದು ಮಂಗಳೂರು ಚಲೋ ಇಷ್ಟೊಂದು ಯಶಸ್ವಿಯಾಗಿ ನಡೆದದ್ದು ಉಲಮಾಗಳ ಸಾನಿಧ್ಯವಿರುವುದರಿಂದವೆಂಬುದನ್ನು ಅಲ್ಲೆಗೆಳಯಲು ಸಾದ್ಯವಿಲ್ಲ.
ಮುಂದೆಯೂ ಉಲಮಾ/ಉಮರಾಗಳು ಪ್ರೊಟಸ್ಟ್ ಗಳಿಗೆ ನೇತೃತ್ವ ಕೊಡುವಂತಾಗಲಿ.
ಮಾಶಾ ಅಲ್ಲಾ ಸುನ್ನೀ ನಾಯಕ ಶಾಫಿ ಸ ಅದಿ ಉಸ್ತಾದ್ ಸಮುದಾಯ ಯಾರನ್ನು ಭಯಪಡುವ ಅಗತ್ಯ ಇಲ್ಲವೆಂದು ನಾವೇ ಕೆಲವೊಂದು ವಿಷಯಗಳಲ್ಲಿ ಎಡವಿದ್ದೇವೆ ಅದರ ಪರಿಹಾರ ನಾವೇ ಕಾಣಬೇಕೆಂದು ಕರೆಯಿತ್ತರು.
ಮತ್ತೋರ್ವ ಸುನ್ನೀ ನಾಯಕ ಕುಕ್ಕಿಲ ದಾರಿಮಿಯವರು ಸೌಹಾರ್ದತೆಯ ಸಂದೇಶ ಸಾರಿ ಕೇವಲ ಮುಸಲ್ಮಾನರ ಮಾತ್ರವಲ್ಲ ಯಾವುದೇ ಸಮುದಾಯಕ್ಕೆ ದೌರ್ಜನ್ಯ ವಾದರೂ ನಾವು ಪ್ರತಿಭಟಿಸಬೇಕೆಂದು ಆಹ್ವಾನವಿತ್ತರು.
ಮಾಜಿ ಮೇಯರ್ ಅಶ್ರಫ್ ರವರು ಸಮುದಾಯಕ್ಕಾದ ನೋವನ್ನು ಎಳೆಎಳೆಯಾಗಿ ವಿವರಿಸಿ ಎಲ್ಲರೂ ಇಂತಹ ಚಲೋಗಳಲ್ಲಿ ಭಾಗವಹಿಸಿ ದೌರ್ಜನ್ಯ ವಿರುದ್ದ ಹೋರಾಟದಲ್ಲಿ ಸದಾ ಭಾಗಿಯಾಗಬೇಕೆಂದು ಕರೆಯಿತ್ತರು.
ಅಶ್ರಫ್ ಕಿನಾರ ಕಾರ್ಯ ಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತಿದ್ದರು.
ಅಂತೂ ಇಂತೂ ಗೊಂದಲದ ಗೂಡಾಗಿದ್ದ *ಮಂಗಳೂರು ಚಲೋ* ಯಶಸ್ವಿಯಾಗಿ ಮುಗಿದಿದೆ.
ಇನ್ಶಾಅಲ್ಲಾ ಮುಂದೆಯೂ ಇದೇ ರೀತಿ ಒಗ್ಗಟ್ಟಾಗಿ ಧ್ವನಿ ಎತ್ತುವಲ್ಲಿ ನಾವು ಸದಾ ಸಿದ್ದರಾಗೋಣ 👍
ರೆಡಿ ತಾನೆ?
- ಅಬೂಶಝ


Comments
Post a Comment